ಪೊಲೀಸ್‌ ಇಲಾಖೆಯ ಮೇಲೆ ಎಸ್‌ಡಿಪಿಐ ಗಂಭೀರ ಆರೋಪ!

ಮಂಗಳೂರು: ಕುಡುಪುವಿನಲ್ಲಿ ಗುಂಪು ಹತ್ಯೆಗೀಡಾದ ವಯನಾಡಿನ ಅಶ್ರಫ್‌ ಹಾಗೂ ಬಂಟ್ವಾಳದಲ್ಲಿ ಕೊಲೆಗೀಡಾದ ಅಬ್ದುಲ್‌ ರಹಿಮಾನ್‌ನ ಸಂಚುಕೋರರನ್ನು ಪೊಲೀಸರು ಇದುವರೆಗೂ ಬಂಧಿಸಿಲ್ಲ. ಇದರ ತನಿಖೆಯನ್ನು ಎಸ್‌ಐಟಿಗೆ ಕೊಡಬೇಕು. ಅಬ್ದುಲ್‌ ರಹಿಮಾನ್‌ನನ್ನು ಯಾಕೆ ಹತ್ಯೆ ಮಾಡಲಾಗಿದೆ ಎಂದು ಎಸ್‌ಪಿ ಮಾಧ್ಯಮಗಳ ಮೂಲಕ ಮಾಹಿತಿ ನೀಡಬೇಕು. ಅಲ್ಲದೆ ಜನರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕೆಲಸ ಪೊಲೀಸ್‌ ಇಲಾಖೆಯಿಂದ ನಡೆಯುತ್ತಿದೆ. ಎಂದು ಸೋಷಿಯಲ್‌ ಡೆಮಾಕ್ರಟಿಕ್‌ ಆಫ್‌ ಇಂಡಿಯಾ ಗಂಭೀರ ಆರೋಪ ಮಾಡಿದೆ.


ಈ ಕುರಿತಂತೆ ಮಂಗಳೂರಿನ ಎಸ್‌ಡಿಪಿಐ ಕಚೇರಿಯಲ್ಲಿ ಸುದ್ದಿಗೋಷ್ಠಿ ಕರೆದು ಮಾತಾಡಿದ ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಮುಖಂಡ ಅನ್ವರ್‌ ಸಾದತ್‌ ಬಜತ್ತೂರು, ಸುಹಾಸ್‌ ಶೆಟ್ಟಿ ಹತ್ಯೆ ಪ್ರಕರಣದ ಎಲ್ಲಾ ಕಥೆಯನ್ನು ಬಿಚ್ಚಿಟ್ಟ ಪೊಲೀಸರು, ಬಂಟ್ವಾಳದ ಅಬ್ದುಲ್‌ ರಹಿಮಾನ್‌, ವಯನಾಡಿನ ಅಶ್ರಫ್‌ ಹತ್ಯೆ ಯಾಕೆ ನಡೆದಿದೆ ಎಂದು ಇದುವರೆಗೂ ಮಾಹಿತಿ ನೀಡಿಲ್ಲ. ಇದನ್ನು ಜನರು ಸೋಷಿಯಲ್‌ ಮೀಡಿಯಾದಲ್ಲಿ ಪ್ರಶ್ನಿಸಿದರೆ ಅವರ ಮೇಲೆ ಕ್ರಮ ತೆಗೆದುಕೊಳ್ಳುವ ಮೂಲಕ ಅಭುವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

ಕುಡುಪುವಿನಲ್ಲಿ ಎ.27 ರಂದು ಕೇರಳ ವಯನಾಡಿನ ಮಾನಸಿಕ ಅಸ್ವಸ್ಥನ ಮಾನುಷ ಗುಂಪು ಹತ್ಯೆ ಆಗಿತ್ತು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗುತ್ತದೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ರೌಡಿಶೀಟರ್‌, ಸಂಘಪರಿವಾರದ ಸುಹಾಸ್‌ ಶೆಟ್ಟಿ ಹತ್ಯೆಯಾಗುತ್ತದೆ. ದ್ವೇಷ ಭಾಷಣಕಾರರು ಬಜ್ಪೆಯಲ್ಲಿ ಅನುಮತಿ ಇಲ್ಲದೆ ಪ್ರತಿಭಟಿಸಿ ಬಹಿರಂಗ ಬೆದರಿಕೆ, ಪ್ರತೀಕಾರದ ಮಾತುಗಳನ್ನಾಡಿ ಭಯದ ವಾತಾವರಣ ಸೃಷ್ಟಿಸಿದ ಮುಂದುವರಿದ ಭಾಗವಾಗಿ ಬಂಟ್ವಾಳದಲ್ಲಿ ಅಬ್ದುಲ್‌ ರಹಿಮಾನ್‌ ಎಂಬ ಅಮಾಯಕನ ಹತ್ಯೆಯಾಯಿತು ಎಂದರು.
ಶ್ರೀಕಾಂತ್‌ ಶೆಟ್ಟಿ ದ್ವೇಷ ಭಾಷಣದಿಂದ ಪ್ರಚೋದನೆಗೊಂಡ ಕಿಡಿಗೇಡಿಗಳು ಅಬ್ದುಲ್‌ ರಹಿಮಾನ್‌ ಹತ್ಯೆ ಮಾಡಿದ್ದಾರೆ. ಜಿಲ್ಲೆಯಲ್ಲಿ ಪರಿಸ್ಥಿತಿ ಸರಿಪಡಿಸಲು ಡಾ. ಅರುಣ್‌ ಕೆ ಹಾಗೂ ಸುಧೀರ್‌ ರೆಡ್ಡಿ ಎಂಬ ಕಟ್ಟುನಿಟ್ಟಿನ ಅಧಿಕಾರಿಗಳನ್ನು ಕರೆತರಲಾಗುತ್ತದೆ. ಅವರು ದ್ವೇಷ ಭಾಷಣಕಾರರ ಮೇಲೆ ಕ್ರಮ ತೆಗೆದುಕೊಂಡು, ಸಾಮಾಜಿಕ ಜಾಲತಾಣ ದುರುಪಯೋಗ ಪಡಿಸುವವ ಮೇಲೆ ಕ್ರಮ ತೆಗೆದುಕೊಂಡರು. ರೌಡಿಗಳ ಪರೇಡ್‌ ಹೀಗೆ ಹಂತ ಹಂತವಾಗಿ ಜಿಲ್ಲೆಯ ಶಾಂತಿಗೆ ಕಾರಣವಾಗಿದ್ದಾರೆ. ಆದರೆ ಬಿಜೆಪಿಯ, ವಿಜಯೇಂದ್ರ, ಸದಾನಂದ ಗೌಡರು ಎಸ್‌ಪಿ, ಕಮಿಷನರ್‌ ಕಚೇರಿಗೆ ಭೇಟಿ ನೀಡಿ, ಬಳಿಕ ಪ್ರೆಸ್‌ಮೀಟ್‌ ಮಾಡಿ ಪೊಲೀಸರಿಗೆ ವಾರ್ನಿಂಗ್‌ ಮಾಡಿ, ಒತ್ತಡ ಹಾಕಿದ್ದಾರೆ. ಆವತ್ತಿನಿಂದ ಪೊಲೀಸ್‌ ಇಲಾಖೆಯ ಕ್ರಮ ಸ್ಲೋ ಆಗಿದೆ. ಪೊಲೀಸರಿಗೆ ಯಾವುದಕ್ಕೆ ನೋಟೀಸ್‌ ಕೊಡ್ಬೇಕು ಯಾವುದಕ್ಕೆ ನೋಟೀಸ್‌ ಕೊಡ್ಬಾರ್ದು ಎಂದು ಗೊತ್ತಿಲ್ಲ ಎಂದು ಸಾದತ್‌ ಆರೋಪಿಸಿದರು.

ಸಂಚುಕೋರರ ಬಂಧಿಸಿ
ಅಬ್ದುಲ್‌ ರಹಿಮಾನ್‌ ಹಾಗೂ ಅಶ್ರಫ್‌ ಕೊಲೆಯಲ್ಲಿ ಭಾಗವಹಿಸಿದವರು ಮಾತ್ರವಲ್ಲ ಈ ಕೊಲೆಗೆ ಸಂಚು ರೂಪಿಸಿದವರ ಬಂಧನವೂ ಆಗ್ಬೇಕು. ಗಾಯಾಳು ಭರತ್‌ ಕುಮ್ಡೇಲ್‌ ಮೇಲೆ ಆರೋಪ ಮಾಡಿದ್ದಾನೆ. ಶ್ರೀಕಾಂತ್‌ ಶೆಟ್ಟಿ ಬಹಿರಂಗವಾಗಿ ಹೇಳಿದರೂ ಬಂಧನವವಾಗಿಲ್ಲ. ಅದೇ ರೀತಿ ಕುಡುಪುವಿನಲ್ಲಿ ಗುಂಪು ಹತ್ಯೆ ನಡೆದಿದ್ದು, ಕ್ರಿಕೆಟ್‌ ಆಯೋಜಿಸಿದ್ದ ಸ್ಥಳೀಯ ಮುಖಂಡ ಪಿಸ್ತೂಲ್ ರವಿಯನ್ನೂ ಬಂಧಿಸಿಲ್ಲ. ಈ ಬಗ್ಗೆ ಜಾಲತಾಣಗಳಲ್ಲಿ ಚರ್ಚಿಸಿದರೆ ಪೊಲೀಸರು ನೋಟೀಸ್‌ ನೀಡಿ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುತ್ತಾರೆ. ಪೊಲೀಸರ ಕ್ರಮ ಕೇವಲ ಭಾಷಣ ಕಾರರ ಹಾಗೂ ಸೋಷಿಯಲ್‌ ಮೀಡಿಯಾಗಳಿಗೆ ಮಾತ್ರ ಸೀಮಿತವಾಗುತ್ತಿದೆ. ಪ್ರತಿಭಟನೆ ನಡೆಸಲೂ ಅವಕಾಶ ಕೊಡದೆ ಹಲವಾರು ನಿಬಂಧನೆಗಳನ್ನು ಹಾಕಲಾಗುತ್ತಿದೆ. ಆದರೆ ಕ್ರಿಮಿನಲ್‌ಗಳ ಬಂಧನವಾಗುತ್ತಿಲ್ಲ ಎಂದು ಆರೋಪಿಸಿದರು. ರಹಿಮಾನ್‌ ಹಾಗೂ ಅಶ್ರಫ್‌ ಹತ್ಯೆ ಪ್ರಕರಣವನ್ನು ಎಸ್‌ಐಟಿಗೆ ವಹಿಸಬೇಕು. ಇಬ್ಬರ ಕುಟುಂಬಕ್ಕೂ ತಲಾ ರೂ. 50 ಲಕ್ಷ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.

ಪ್ರೆಸ್‌ನೋಟ್‌ ಬಿಡುಗಡೆ ಮಾಡಲಿ|
ರಹಿಮಾನ್, ಅಶ್ರಫ್‌ನನ್ನು ಯಾಕೆ ಕೊಲೆ ಮಾಡಿದ್ದು ಎಂದು ಪೊಲೀಸರು ಇನ್ನೂ ಪ್ರೆಸ್‌ ನೋಟ್‌ ಬಿಡುಗಡೆ ಮಾಡಿಲ್ಲ. ಮೊದಲು ಯಾವುದೇ ಪ್ರಕರಣ ನಡೆದರೂ ಮಾಧ್ಯಮಗಳ ಮೂಲಕ ಎಸ್‌ಪಿ ಕಾಲ ಕಾಲಕ್ಕೆ ಮಾಹಿತಿ ಕೊಡುತ್ತಿದ್ದರು. ಹೀಗಾಗಿಯೇ ಜನರು ಸೋಷಿಯಲ್‌ ಮೀಡಿಯಾದಲ್ಲಿ ಪ್ರಶ್ನಿಸುತ್ತಿದ್ದಾರೆ. ಪೊಲೀಸರು ಪ್ರೆಸ್‌ ನೋಟ್‌ ನೀಡಿದರೆ ಜನರು ಸೋಷಿಯಲ್‌ ಮೀಡಿಯಾದಲ್ಲಿ ಯಾಕೆ ಪ್ರಶ್ನಿಸುತ್ತಾರೆ ಎಂದು ಎಸ್‌ಡಿಪಿಐ ನಾಯಕರು ಪ್ರಶ್ನಿಸಿದರು.

ಕುಡುಪು ಗುಂಪು ಹತ್ಯೆಯಲ್ಲಿ ಪಿಸ್ತೂಲ್‌ ರವಿ ಎಂಬಾತನ ಮೇಲೆ ಆರೋಪ ಹೊರಿಸಿದಾಗ ಪತ್ರಕರ್ತರು ನಿಮ್ಮಲ್ಲಿ ಸಾಕ್ಷಿ ಇದ್ದರೆ ಅದನ್ನು ತರುವಂತೆ ಕಮಿಷನರ್‌ ಹೇಳಿದ್ದಾರೆ ಎಂದಾಗ ಉತ್ತರಿಸಿದ ಎಸ್‌ಡಿಪಿಐ ನಾಯಕರು, ಹಾಗಾದರೆ ಅವನು ಯಾಕೆ ಅಡಗಿ ಕೂತಿರುವುದು? ಅಮಾಯಕನನ್ನು ಕೊಲ್ಲುವಾಗ  ಬಿಡಿಸಲು ಹೋಗಬಹುದಿತ್ತಲ್ವಾ? ಸಿಸಿ ಟಿವಿ ಫುಟೇಜ್ ಸಿಕ್ಕಿಲ್ಲ, ಸ್ಟೇಟ್ ಮೆಂಟ್ ಸಿಕ್ಕಿಲ್ಲ ಅಂತಂದ್ರೆ ಪಿಸ್ತೂಲ್ ರವಿಗೆ ಹೇಳಿಕೆ ಕೊಡಬಹುದಲ್ವಾ ಎಂದು ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅಥವುಲ್ಲ ಜೋಕಟ್ಟೆ, ಮತ್ತಿತರರಿದ್ದರು.

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

error: Content is protected !!