ನಾಪತ್ತೆಯಾಗಿದ್ದ ಎಕ್ಕಾರು ಯುವಕ ಸಾವು!

ಪಡುಬಿದ್ರಿ: ದ.ಕ. ಜಿಲ್ಲಾ ಬಜಪೆ ಪೊಲೀಸ್ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದ್ದ ಎಕ್ಕಾರು ಗ್ರಾಮದ ನೀರುಡೆ ನಿವಾಸಿ ತಿಲಕ್ ರಾಜ್ ಶೆಟ್ಟಿ(29) ಅವರ ಮೃತದೇಹ ಮಂಗಳ ವಾರ ಬೆಳಗ್ಗೆ ಪಲಿಮಾರು ಗ್ರಾಮ ಅವರಾಲು ಮಟ್ಟುವಿನ ಶಾಂಭವಿ ಹೊಳೆಯಲ್ಲಿ ಪತ್ತೆಯಾಗಿದೆ.

ತಾನು ಕೆಲಸಕ್ಕಿದ್ದ ಮುದರಂಗಡಿಯ ಕೋಳಿ ಅಂಗಡಿಗೆ ಹೋಗುವುದಾಗಿ ತಿಳಿಸಿ ಜೂ. 29ರಂದು ಮನೆಯಿಂದ ಹೊರಟು ಹೋಗಿದ್ದ ತಿಲಕ್‌ ರಾಜ್ ನಾಪತ್ತೆಯಾಗಿದ್ದರು. ಅವರ ಆಕ್ಟಿವಾ ಸ್ಕೂಟರ್, ಮೊಬೈಲ್ ಮತ್ತು ಪರ್ಸ್‌ಗಳು ಶಾಂಭವಿ ಹೊಳೆಯ ಕರ್ನಿರೆ ಸೇತುವೆ ಬಳಿ ಮಂಗಳವಾರ ಬೆಳಗ್ಗೆ ಪತ್ತೆಯಾಗಿತ್ತು.

ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವಿನ ಪ್ರಕರಣವು ದಾಖಲಾಗಿದ್ದು ತನಿಖೆ ಮುಂದುವರಿದಿದೆ.

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

error: Content is protected !!