ಮಂಗಳೂರು: ಗ್ರಾಹಕರು ತಮ್ಮ ಕಷ್ಟಕ್ಕೆ ಅಡವಿಟ್ಟ ಚಿನ್ನಕ್ಕೆ ಅದೇ ಬ್ಯಾಂಕ್‌ನ ಕ್ಯಾಷಿಯರ್ ಕನ್ನ ಹಾಕಿರುವ ಘಟನೆ ಮಂಗಳೂರಿನ ಶಕ್ತಿನಗರದ ಪದುವ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ನಡೆದಿದೆ. ಬಂಗಾರವನ್ನು ಕದ್ದು ಬೇರೆ ಬ್ಯಾಂಕ್‌ನಲ್ಲಿ ಅಡವಿಟ್ಟು ಕೋಟ್ಯಂತರ ರೂಪಾಯಿ ಹಣ ಸಾಲ ಪಡೆದು ಮಜಾ ಮಾಡಿ ಸಿಕ್ಕಿಬಿದ್ದಿದ್ದಾನೆ.
ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ಕಳೆದ ಕೆಲ ವರ್ಷಗಳಿಂದ ಕ್ಯಾಷಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಪ್ರೀತೇಶ್ ಗ್ರಾಹಕರು ಸಾಲಕ್ಕಾಗಿ ಚಿನ್ನವನ್ನು ಅಡವಿಟ್ಟಾಗ ಅದರ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ದ. ಇತ್ತ ಗ್ರಾಹಕರು ಬ್ಯಾಂಕ್‌ನ ಖಜಾನೆಗೆ ಚಿನ್ನ ಒಪ್ಪಿಸುತ್ತಿದ್ದಂತೆಯೇ ಪ್ರೀತೇಶ್‌ಗೆ ಚಿನ್ನದ ಮೇಲಿನ ವ್ಯಾಮೋಹ ಹೆಚ್ಚಾಗಿ ಎರಡು ಸಾವಿರಕ್ಕೂ ಅಧಿಕ ಗ್ರಾಹಕರು ಇರುವ ಬ್ಯಾಂಕ್‌ನ ಇಪ್ಪತ್ತಾರು ಗ್ರಾಹಕರ ಚಿನ್ನಕ್ಕೆ ಪ್ರೀತೇಶ್ ಕನ್ನ ಹಾಕಿದ್ದಾನೆ. ಬ್ಯಾಂಕ್‌ನ ದಾಖಲೆಗಳಲ್ಲಿ ಚಿನ್ನಕ್ಕಾಗಿ ಮಾಡಿದ ಲೋನ್‌ಗಳು ಕ್ಲಿಯರ್ ಆಗಿದೆ ಅಂತಾ ನಕಲಿ ದಾಖಲೆ ಸೃಷ್ಟಿಸಿ ಲಾಕರ್‌ನ ಚಿನ್ನವನ್ನು ಎಗರಿಸಿದ್ದಾನೆ. ಹೀಗೆ ಎಗರಿಸಿದ್ದು ಬರೋಬ್ಬರಿ 5.80 ಕೋಟಿ ಮೌಲ್ಯದ ಆರೂವರೆ ಕೆ.ಜಿ ಚಿನ್ನ.
ಈ ವಿಷಯ ಎಲ್ಲೆಡೆ ಹರಡುತ್ತಿದ್ದಂತೆ ಪ್ರೀತೇಶ್ ದುಬೈಗೆ ಹೋಗಿ ತಲೆಮರಿಸಿಕೊಂಡಿದ್ದಾನೆ. ಬ್ಯಾಂಕ್‌ನ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡುತ್ತಿದ್ದಂತೆಯೇ ಪ್ರೀತೇಶ್ ಮಂಗಳೂರಿಗೆ ಬಂದು ಲಾಯರ್ ಮೂಲಕ ನ್ಯಾಯಾಲಯಕ್ಕೆ ಹಾಜರಾಗಿದ್ದಾನೆ. ಪೊಲೀಸರು ಪ್ರೀತೇಶ್ ಬಳಿಕ ಮಹಮ್ಮದ್‌ನನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ಮಹಮ್ಮದ್‌ನಿಂದ ನಾಲ್ಕೂವರೆ ಕೆ.ಜಿ ನಕಲಿ ಚಿನ್ನವನ್ನು ವಶಕ್ಕೆ ಪಡೆದುಕೊಂಡಿದ್ದು, ಈ ನಕಲಿ ಚಿನ್ನವನ್ನು ಅಸಲಿ ಅಂತಾ ಮಾಡೋಕೆ ಪ್ರಯತ್ನ ಪಟ್ಟಿರೋದು ಕೂಡಾ ಬೆಳಕಿಗೆ ಬಂದಿದೆ.
ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/FxkiqQfrxlV57ZfFGy2ssw?mode=r_t