ಅಡ್ಡೂರು: ಹೂಳು ತುಂಬಿದ ರಸ್ತೆಯ ಶ್ರಮದಾನ ಕಾರ್ಯಗಾರ

ಅಡ್ಡೂರು: ಫ್ರೆಂಡ್ಸ್ ಸರ್ಕಲ್ ಕೆಳಗಿನಕೆರೆ ವತಿಯಿಂದ ಕೆಳಗಿನಕೆರೆಯಿಂದ ಗೇಟ್ ಹೌಸ್‌ವರೆಗಿನ ರಸ್ತೆಯಲ್ಲಿ ತುಂಬಿದ್ದ ಹೂಳನ್ನು ಶ್ರಮದಾನದ ಮೂಲಕ ರವಿವಾರ ತೆರವುಗೊಳಿಸಲಾಯಿತು.

ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ರಸ್ತೆ ಮೇಲೆ ಹರಿದು ಎರಡು ಬದಿಯಲ್ಲಿ ಮಣ್ಣು ತುಂಬಿದ್ದು, ಸಂಚಾರಕ್ಕೆ ಅಡಚಣೆಯಾಗಿತ್ತು. ಈ ಹಿನ್ನೆಲೆಯಲ್ಲಿ ಎಫ್.ಸಿ.ಕೆ ಸದಸ್ಯರು ಹೂಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಿದರು.

ಈ ಸಂದರ್ಭ ಎಫ್.ಸಿ.ಕೆ ಅಧ್ಯಕ್ಷ ಹಂಝ, ಮುಖಂಡರಾದ ಜಬ್ಬಾರ್ ಕೆಳಗಿನಕೆರೆ, ಸಿದ್ದೀಕ್ ಕೆಳಗಿನಕೆರೆ, ಉಸ್ಮಾನ್, ಹಾರೀಸ್, ಸದ್ದೀಕ್, ಸಮೀರ್, ನೌಫಲ್, ಮುಸ್ತಫಾ ಅದ್ಯಪ್ಪಾಡಿ, ಹರ್ಷಾದ್, ಆಶೀಕ್, ಅನ್ಸಾರ್, ಹಫೀಝ್ ಮತ್ತಿತರರು ಉಪಸ್ಥಿತರಿದ್ದರು.

 

ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj

error: Content is protected !!