ಹೆಜಮಾಡಿ: ನಿಂತಿದ್ದ ಲಾರಿಗೆ ಕಾರು ಢಿಕ್ಕಿ, ಇಬ್ಬರಿಗೆ ಗಾಯ- ಓರ್ವ ಗಂಭೀರ

ಹೆಜಮಾಡಿ: ಇನೋವಾ ಕಾರೊಂದು ಪಾರ್ಕ್‌ ಮಾಡಿದ್ದ ಲಾರಿಯ ಹಿಂಬದಿಗೆ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಗಾಯಗೊಂಡ ಘಟನೆ ಇಂದು ಮುಂಜಾನೆ ನಾಲ್ಕು ಗಂಟೆ ಸುಮಾರಿಗೆ ಹೆಜಮಾಡಿ ಟೋಲ್‌ ಪ್ಲಾಜಾದ ಬಳಿ ಸಂಭವಿಸಿದೆ. ಈ ಪೈಕಿ ಓರ್ವನ ಸ್ಥಿತಿ ಗಂಭೀರವಾಗಿದೆ.


ಕೋಡಿಕರೆ ನಿವಾಸಿ ಲೋಕೇಶ್ (43) ಹಾಗೂ ಕುಳಾಯಿ ನಿವಾಸಿ ವಿರಾಜ್(29) ಗಾಯಗೊಂಡವರು. ಈ ಪೈಕಿ ವಿರಾಜ್‌ ಸ್ಥಿತಿ ಗಂಭೀರವಾಗಿದೆ.

ಮರ ದಿಮ್ಮಿಗಳನ್ನು ಹೇರಿಕೊಂಡಿದ್ದ ಲಾರಿಯನ್ನು ಹೆಜಮಾಡಿ ಟೋಲ್ ಗೇಟಿನ ಕೆಲವೇ ಮೀಟರ್ ಅಂತರದಲ್ಲಿ ಪಾರ್ಕ್ ಮಾಡಲಾಗಿತ್ತು. ಇದನ್ನು ಗಮನಿಸದ ಕಾರು ಚಾಲಕ ಹಿಂಬದಿಯಿಂದ ಗುದ್ದಿದ್ದಾನೆ. ಢಿಕ್ಕಿಯ ತೀವ್ರತೆಗೆ ಕಾರು ನಜ್ಜುಗುಜ್ಜಾಗಿದೆ. ಕಾರಿನಲ್ಲಿ ಸಿಲುಕಿಕೊಂಡಿದ್ದ ವಿರಾಜ್ ರನ್ನು ಹೊರತೆಗೆಯಲು ಸ್ಥಳೀಯರು ಮತ್ತು ಟೋಲ್ ಸಿಬ್ಬಂದಿ ಸುಮಾರು ಒಂದು ಗಂಟೆಗಳ ಶ್ರಮಿಸಿದ್ದಾರೆ ಎಂದು ತಿಳಿದು ಬಂದಿದೆ.

ಗಾಯಾಳುಗಳಿಬ್ಬರನ್ನೂ ಮಂಗಳೂರಿನ ಎಜೆ ಆಸ್ಪತ್ರೆಗೆ ಸಾಗಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಸ್ಥಳಕ್ಕೆ ಪಡುಬಿದ್ರಿ ಪೊಲೀಸರು ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

error: Content is protected !!