ಕೆಂಜಾರ್:‌ ಶಾಲೆಯ ಮೇಲ್ಛಾವಣಿ ಕುಸಿದು ಎಲ್‌ಕೆಜಿ ಮಕ್ಕಳಿಗೆ ಗಾಯ

ಮಂಗಳೂರು: ಟೀಚರ್‌ ಪಾಠ ಮಾಡುತ್ತಿದ್ದಂತೆ ಶಾಲೆಯ ಮೇಲ್ಛಾವಣಿ ಕುಸಿದು ಬಿದ್ದು  ಮಗು ಗಾಯಗೊಂಡ ಘಟನೆ ಬಜ್ಪೆಯ ಕೆಂಜಾರ್‌ ಜೋಕಟ್ಟೆ ವ್ಯಾಪ್ತಿಯ ಪೇಜಾವರ ಶ್ರೀ ಮುಖ್ಯಪ್ರಾಣ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಸಂಭವವಿಸಿದೆ.

ಈ ಶಾಲೆಯಲ್ಲಿ ಸುಮಾರು 25ರಿಂದ 27 ಎಲ್‌ಕೆಜಿ ಮಕ್ಕಳು ಇದ್ದು, ಅದೃಷ್ಟವಶಾತ್‌ ಪಾರಾಗಿದ್ದಾರೆ. ಆದರೆ ಒಂದು ಮಗುವಿಗೆ ಕೊಂಚ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಎಲ್‌ಕೆಜಿ ಕ್ಲಾಸ್‌ನಲ್ಲಿ ಟೀಚರ್‌ ಪಾಠ ಮಾಡುತ್ತಿದ್ದಂತೆ ಜೋರು ಮಳೆ ಬಂದಿದ್ದು ಈ ವೇಳೆ ಇದ್ದಕ್ಕಿದ್ದಂತೆ ಶಾಲೆಯ ಮೇಲ್ಛಾವಣಿ ಕುಸಿದು ಬಿದ್ದಿದೆ. ತಕ್ಷಣ ಮಕ್ಕಳು ಅಲ್ಲಿಂದ ಓಡಿ ಪಾರಾಗಿದ್ದಾರೆ. ಒಂದು ಮಗುವಿಗೆ ಸ್ವಲ್ಪ ಜಾಸ್ತಿ ಗಾಯವಾಗಿದ್ದರಿಂದ ಬೆಂದೂರ್‌ವೆಲ್‌ನ ಎಸ್‌ಸಿಎಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಮೂಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟೈಾನ್‌, ಶಿಕ್ಷಣ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಮೂರು ವರ್ಷಗಳ ಹಿಂದೆಯಷ್ಟೇ ರಿಪೇರಿ!

ಈ ಶಾಲೆಯನ್ನು ಮೂರು ವರ್ಷಗಳ ಮುಂಚೆಯಷ್ಟೇ ರಿಪೇರಿ ಮಾಡಿ, ರೀಪು, ಪಕ್ಕಾಸು, ಹೆಂಚುಗಳನ್ನು ಅಳವಡಿಸಲಾಗಿತ್ತು. ಆದರೆ ಇಂದಿನ ಮಳೆಗೆ ದಿಢೀರ್‌ ಕುಸಿದು ಬಿದ್ದಿದ್ದು, ಮಕ್ಕಳ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಶಾಲೆಯ ಮೇಲ್ಛಾವಣಿಯನ್ನು ರಚಿಸುವಾಗ ಗುಣಮಟ್ಟ ಕಾಯ್ದುಕೊಂಡಿಲ್ಲ ಹೀಗಾಗಿ ಕುಸಿದು ಬಿದ್ದಿದೆ ಎಂದು ಪೋಷಕರು ಆರೋಪಿಸಿದ್ದಾರೆ.

ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

error: Content is protected !!