ಹೆಂಡತಿ ವಿಚ್ಛೇದನ ನೀಡಿದ್ದಕ್ಕೆ ಕೋಪಗೊಂಡು ರೈಲಿಗೆ ಬೆಂಕಿ ಹಚ್ಚಿದ ಗಂಡ !

ದಕ್ಷಿಣ ಕೊರಿಯಾ: ವಿಚ್ಛೇದನ ನೀಡಿದ್ದಕ್ಕೆ ಹೆಂಡತಿಯ ಮೇಲೆ ಕೋಪಗೊಂಡು ವ್ಯಕ್ತಿ(ವಾನ್)ಯೊಬ್ಬ ರೈಲಿಗೆ ಬೆಂಕಿ ಹಚ್ಚಿರುವ ಘಟನೆ ದಕ್ಷಿಣ ಕೊರಿಯಾದ ಸಿಯೋಲ್​ನಲ್ಲಿ ನಡೆದಿದೆ. ಚಲಿಸುತ್ತಿರುವ ಸುರಂಗಮಾರ್ಗ ರೈಲಿನೊಳಗೆ ಬೆಂಕಿ ಹಚ್ಚಿದ್ದಾನೆ ಎಂದು ಹೇಳಲಾಗಿದೆ. ಈ ಘಟನೆ ಮೇ 31 ರಂದು ಸಂಭವಿಸಿದ್ದು, ಘಟನೆಯಲ್ಲಿ ಅನೇಕ ಮಂದಿ ಗಾಯಗೊಂಡಿದ್ದಾರೆ.

 

 

ಸಿಯೋಲ್ ದಕ್ಷಿಣ ಜಿಲ್ಲಾ ಪ್ರಾಸಿಕ್ಯೂಟರ್‌ಗಳ ಕಚೇರಿಯ ಪ್ರಕಾರ, ವಾನ್ ಮೇಲೆ ಕೊಲೆ ಯತ್ನ, ಚಲಿಸುವ ರೈಲಿನಲ್ಲಿ ಬೆಂಕಿ ಹಚ್ಚುವುದು ಮತ್ತು ರೈಲ್ವೆ ಸುರಕ್ಷತಾ ಕಾಯ್ದೆಯ ಉಲ್ಲಂಘನೆ ಸೇರಿದಂತೆ ಹಲವು ಆರೋಪಗಳನ್ನು ಎದುರಿಸುತ್ತಿದ್ದಾರೆ.

ಬೆಂಕಿ ಹಚ್ಚಿದ ಪರಿಣಾಮ 22 ಪ್ರಯಾಣಿಕರು ಆಸ್ಪತ್ರೆಗೆ ದಾಖಲಾಗಿದ್ದಾರೆ, ಇತರ 129 ಪ್ರಯಾಣಿಕರು ಸ್ಥಳದಲ್ಲೇ ಚಿಕಿತ್ಸೆ ಪಡೆದಿದ್ದಾರೆ. ಶಂಕಿತನನ್ನು ಸಹ ಆಸ್ಪತ್ರೆಗೆ ದಾಖಲಿಸಲಾಗಿದೆ.

ತನ್ನ ವಿಚ್ಛೇದನ ಪ್ರಕರಣದ ಫಲಿತಾಂಶದ ಬಗ್ಗೆ ಹತಾಶೆಯಿಂದ ವಾನ್ ಈ ಕೃತ್ಯ ಎಸಗಿದ್ದಾನೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಜೂನ್ 9 ರಂದು ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡು ಪ್ರಾಸಿಕ್ಯೂಷನ್‌ಗೆ ಹಸ್ತಾಂತರಿಸಿದರು.

 

ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj

error: Content is protected !!