ಹೈದರಾಬಾದ್: ಮೊಬೈಲ್ ಅಪ್ಲಿಕೇಶನ್ ಮೂಲಕ ತಮ್ಮ ಲೈಂಗಿಕ ಕ್ರಿಯೆಗಳನ್ನು ಲೈವ್ ಸ್ಟ್ರೀಮ್ ಮಾಡಿ ಹಣ ಗಳಿಸುತ್ತಿದ್ದ ಆರೋಪದಲ್ಲಿ 41 ವರ್ಷದ ಪುರುಷ ಮತ್ತು ಈತ 37 ವರ್ಷದ ಪತ್ನಿಯನ್ನು ಹೈದರಾಬಾದ್‌ನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
l
ಅಂಬರ್‌ಪೇಟೆಯ ಮಲ್ಲಿಕಾರ್ಜುನ ನಗರದ ದಂಪತಿ ಕೃತ್ಯ ಎಸಗಿದ ಆರೋಪಿಗಳಾಗಿದ್ದು, ಇವರ ಮನೆಯಿಂದ ಹೈ ಡೆಫಿನಿಷನ್ ಕ್ಯಾಮೆರಾಗಳು ಸೇರಿದಂತೆ ಹಲವಾರು ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪೊಲೀಸರ ಪ್ರಕಾರ, ಸುಲಭವಾಗಿ ಹಣ ಗಳಿಸುವ ಸಲುವಾಗಿ ದಂಪತಿ ಈ ಕೃತ್ಯ ಎಸಗಿದ್ದಾಗಿ ಒಪ್ಪಿಕೊಂಡಿದ್ದಾರೆ. ಆ ವ್ಯಕ್ತಿ ವೃತ್ತಿಯಲ್ಲಿ ಕ್ಯಾಬ್ ಚಾಲಕ.
ದಂಪತಿ ತಮ್ಮ ಲೈಂಗಿಕ ಕ್ರಿಯೆಗಳ ಲೈವ್ ಮತ್ತು ರೆಕಾರ್ಡ್ ಮಾಡಿದ ವೀಡಿಯೊಗಳನ್ನು ಮೊಬೈಲ್ ಆ್ಯಪ್ ಮೂಲಕ ಶೇರ್ ಮಾಡಿಕೊಳ್ಳುತ್ತಿದ್ದರು. ಹೆಚ್ಚಾಗಿ ಯುವಕರೊಂದಿಗೆ – ಹಂಚಿಕೊಳ್ಳುತ್ತಿದ್ದರು. ಲೈವ್ ವೀಡಿಯೊಗೆ 2,000 ರೂ. ಮತ್ತು ರೆಕಾರ್ಡ್ ಮಾಡಿದ ಕ್ಲಿಪ್ ಅನ್ನು 500 ರೂ.ಗೆ ಮಾರಾಟ ಮಾಡಿ ಹಣ ಗಳಿಸುತ್ತಿದ್ದರು. ಈತನ ಪತ್ನಿ ಆಕೆಯ ಗಂಡ ಗಳಿಸಿದ್ದಕ್ಕಿಂತ ಹೆಚ್ಚಿನ ಹಣ ಗಳಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಗಂಡ – ಹೆಂಡತಿ HD ಕ್ಯಾಮೆರಾಗಳನ್ನು ಬಳಸಿಕೊಂಡು ತಮ್ಮ ಕೃತ್ಯಗಳನ್ನು ಲೈವ್ ಸ್ಟ್ರೀಮ್ ಮಾಡುತ್ತಿದ್ದರು ಅಥವಾ ರೆಕಾರ್ಡ್ ಮಾಡುತ್ತಿದ್ದರು. ಕೃತ್ಯದ ಸಮಯದಲ್ಲಿ ಅವರು ತಮ್ಮ ಗುರುತನ್ನು ಮರೆಮಾಡಲು ಮುಖವಾಡಗಳನ್ನು ಧರಿಸಿದ್ದರು ಎಂದು ವರದಿಯಾಗಿದೆ.
ಪೂರ್ವ ವಲಯ ಕಾರ್ಯಪಡೆ ಗುರುವಾರ ದಂಪತಿಯ ಮನೆ ಮೇಲೆ ದಾಳಿ ನಡೆಸಿ, ಖಚಿತ ಮಾಹಿತಿಯ ಮೇರೆಗೆ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝