ನರ್ಸಿಂಗ್ ಓದಿಸ್ತೀನಿ ಅಂತಾ ಕರೆದೊಯ್ದು ಯುವತಿಯನ್ನ , ಕ್ಲಿನಿಕ್‌ನಲ್ಲೇ ಅತ್ಯಾಚಾರ ಎಸಗಿದ ಡಾಕ್ಟರ್!

ಒಡಿಶಾ : ಒಡಿಶಾದ ಗಂಜಾಮ್‌ನಲ್ಲಿ ಒಬ್ಬ ವೈದ್ಯ, ತೀವ್ರ ಬಡತನದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಓದಿಕೊಂಡು ಉತ್ತಮ ಅಂಕಗಳೊಂದಿಗೆ ಪಾಸಾಗಿದ್ದ ಬಾಲಕಿಯನ್ನು ನರ್ಸಿಂಗ್ ಓದಿಸುತ್ತೇನೆಂದು ತನ್ನೊಂದಿಗೆ ಕರೆದುಕೊಂಡು ಹೋಗಿ ಕ್ಲಿನಿಕ್‌ನಲ್ಲೇ ಅತ್ಯಾಚಾರ ಎಸಗಿದ ಘಟನೆ ನಡೆದಿದೆ .ಅಪ್ರಾಪ್ತ ವಯಸ್ಕಳೆಂಬುದನ್ನೂ ನೋಡದೇ ಮತ್ತು ಬರುವ ಔಷಧಿ ನೀಡಿ ಬಾಲಕಿಯು ಮೇಲೆ ಅತ್ಯಾಚಾರ ಮಾಡಿದ್ದಾನೆ. ಬಡತನದಿಂದ ಬೇಸತ್ತು ಶಿಕ್ಷಣ ಪಡೆಯುವ ಆಸೆಗೆ ಹೋದ ಬಾಲಕಿಯ ಜೀವನವನ್ನೇ ಹಾಳು ಮಾಡಿದ್ದಾನೆ.

ಕ್ಲಿನಿಕ್‌ನಲ್ಲಿ ಬಡ ಹುಡುಗಿಯರಿಗೆ ಉಚಿತ ವಸತಿ ಮತ್ತು ಶಿಕ್ಷಣ ನೀಡಲಾಗುವುದು ಎಂದು ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಹೇಳಿದ್ದರಿಂದ 17 ವರ್ಷದ ಬಾಲಕಿಯ ತಾಯಿ ಆಕೆಯನ್ನು ಕ್ಲಿನಿಕ್‌ಗೆ ಕರೆತಂದಿದ್ದರು. ಬಾಲಕಿಗೆ ನರ್ಸಿಂಗ್ ತರಬೇತಿ ನೀಡುವುದಾಗಿ ಮತ್ತು ಉಚಿತ ವಸತಿ ನೀಡುವುದಾಗಿ ದಾಸ್ ಭರವಸೆ ನೀಡಿದ್ದರಿಂದ ಬಾಲಕಿಯನ್ನು ಅಲ್ಲಿಯೇ ಬಿಡಲಾಗಿತ್ತು.

ಜೂನ್ 23 ರಂದು ಸಂಜೆ 5 ಗಂಟೆಗೆ ವೈದ್ಯ ದಾಸ್ ಸೂಚನೆಯಂತೆ ಬಾಲಕಿಯನ್ನು ಕ್ಲಿನಿಕ್‌ಗೆ ಕರೆತರಲಾಯಿತು. ಕ್ಲಿನಿಕ್‌ನ ಸಹಾಯಕಿ ಬಾಲಕಿಗೆ ನೀರು ಕುಡಿಯಲು ನೀಡಿದರು. ಅದನ್ನ ಕುಡಿದ ಬಾಲಕಿ ಮಾತನಾಡಲಾಗದಷ್ಟು ಅಸ್ವಸ್ಥಗೊಂಡಿದ್ದಳು. ಈ ಸಮಯದಲ್ಲಿ ಶಂಕರ್ ದಾಸ್ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

ನಂತರ ಬಾಲಕಿ ತನ್ನ ಸಂಬಂಧಿಕರ ಮನೆಗೆ ಹೋಗಿ ನಡೆದ ಘಟನೆಯನ್ನು ಹೇಳಿದ್ದಾಳೆ. ನಂತರ ಪೋಲೀಸ್‌ ಠಾಣೆಗೆ ಹೋಗಿ ದೂರು ನೀಡಲಾಗಿದೆ. ಪೋಕ್ಸೊ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವೈದ್ಯಕೀಯ ಪರೀಕ್ಷೆ ನಡೆಸಿದ ನಂತರ, ವಿಧಿವಿಜ್ಞಾನ ತಂಡವು ಕ್ಲಿನಿಕ್ ಮತ್ತು ಶಂಕರ್ ದಾಸ್ ಅವರ ಮನೆಯಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿದೆ.

ಹೋಮಿಯೋಪತಿಯಲ್ಲಿ ನಕಲಿ ಪದವಿ ಪಡೆದಿದ್ದ ಶಂಕರ್ ದಾಸ್ ವೈದ್ಯನೆಂದು ನಟಿಸಿ ಕ್ಲಿನಿಕ್ ನಡೆಸುತ್ತಿದ್ದ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಪ್ರಕರಣದಲ್ಲಿ ಶಂಕರ್ ದಾಸ್ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಶಂಕರ್ ದಾಸ್ ಅವರ ಕ್ಲಿನಿಕ್‌ನ ಸಹಾಯಕಿ 21 ವರ್ಷದ ಪ್ರಿಯಾಂಕ ಸಾಹು ಮತ್ತು ಅಂಗನವಾಡಿ ಕಾರ್ಯಕರ್ತೆ ಇತರ ಇಬ್ಬರು ಆರೋಪಿಗಳು.

ವೈದ್ಯನೆಂದು ನಟಿಸಿ 17 ವರ್ಷದ ಬಾಲಕಿಯ ಮೇಲೆ ಖಾಸಗಿ ಕ್ಲಿನಿಕ್‌ನಲ್ಲಿ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದೆ. ಬಾಲಕಿಯ ಸಂಬಂಧಿಕರ ದೂರಿನ ಮೇರೆಗೆ ಬೈದ್ಯಾನಂದಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಖಾಸಗಿ ಕ್ಲಿನಿಕ್ ನಡೆಸುತ್ತಿದ್ದ ಬಬಾನಿ ಶಂಕರ್ ದಾಸ್ ಸೇರಿದಂತೆ ಮೂವರನ್ನು ಬಂಧಿಸಿ, ವಿಚಾರಣೆ ಮಾಡಲಾಗುತ್ತಿದೆ.

 

ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj

error: Content is protected !!