ನವದೆಹಲಿ: ಇಸ್ರೇಲ್ ಮತ್ತು ಇರಾನ್ ನಡುವಿನ ಕ್ಷಿಪಣಿ ಹೋರಾಟ ಜೂ.24ರಿಂದಲೇ ಸ್ಥಗಿತಗೊಂಡಿದ್ದು, ಈ ನಡುವೆ ನಡುವೆ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಎಲ್ಲಿದ್ದಾರೆ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಇಸ್ರೇಲ್ ಇವರನ್ನು ಕೊಲ್ಲಲು ಹೊರಟಿತ್ತು.
ಆದರೆ ಇದೀಗ ಯುದ್ಧ ವಿರಾಮ ಘೋಷಣೆಯಾಗಿದ್ದರೂ ಖಮೇನಿ ಸಾರ್ವಜನಿಕ ಬದುಕಿನಿಂದ ಭೂಗತರಾಗಿದ್ದಾರೆ. ಹಾಗಿದ್ದರೆ ಖಮೇನಿ ಇಸ್ರೇಲ್ ಅಮೆರಿಕಾದ ಟಾರ್ಗೆಟ್‌ನಲ್ಲಿದ್ದಾರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಮೂಲಗಳ ಪ್ರಕಾರ ಖಮೇನಿ ಮಾನಸಿಕ ಅಸ್ವಸ್ಥರಾಗಿದ್ದು, ದೈಹಿಕವಾಗಿ ತುಂಬಾ ದುರ್ಬಲರಾಗಿದ್ದಾರೆ ಎಂದು ತಿಳಿದುಬಂದಿದೆ.
ವಿಶೇಷವೆಂದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕದನವಿರಾಮದ “ಮಧ್ಯಸ್ಥಿಕೆ ವಹಿಸಿದ” ಒಪ್ಪಂದದ ಬಗ್ಗೆಯೂ ಖಮೇನಿ ಒಂದು ಮಾತನ್ನೂ ಹೇಳಿಲ್ಲ. ಆಡಳಿತದಿಂದ ಯಾವುದೇ ಅಧಿಕೃತ ಮಾಹಿತಿಯಿಲ್ಲದೆ, ಖಮೇನಿ ದೀರ್ಘಕಾಲದವರೆಗೆ ಹೀಗೆ ಸಾರ್ವಜನಿಕ ಬದುಕಿನಿಂದ ಭೂಗತರಾಗಿ ಉಳಿದುಕೊಂಡಿರುವುದರಿಂದ ಇರಾನಿಯನ್ನರು ಹೆಚ್ಚು ಗೊಂದಲಕ್ಕೊಳಗಾಗಿದ್ದಲ್ಲದೆ ಆತಂಕಕ್ಕೂ ಒಳಗಾಗಿದ್ದಾರೆ.
ಎರಡು ವಾರಗಳ ಹಿಂದೆ ಇಸ್ರೇಲ್ ಇರಾನ್ ಮೇಲೆ ಬಾಂಬ್ ದಾಳಿ ಮಾಡಲು ಪ್ರಾರಂಭಿಸಿದ ನಂತರ ಹಲವರು ಪ್ರಮುಖ ನಾಯಕರನ್ನು ಹತ್ಯೆ ಮಾಡಿತ್ತು. ಅಲ್ಲದೆ ದಾಳಿಯಲ್ಲಿ ಖಮೇನಿ ಆಪ್ತ ಸಹಾಯಕ ಕೂಡ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಇದರಿಂದ ಹೆದರಿದ ಇರಾನ್‌ನ ಖಮೇನಿ ಸೇರಿ ಪ್ರಮುಖ ನಾಯಕರು ರಹಸ್ಯ ಬಂಕರ್‌ನಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಆದಾಗ್ಯೂ, ಕದನ ವಿರಾಮ ಜಾರಿಗೆ ಬಂದ ಎರಡು ದಿನಗಳ ನಂತರ, ಖಮೇನಿ ಯಾವಾಗ ಮತ್ತೆ ಕಾಣಿಸಿಕೊಳ್ಳುತ್ತಾರೆ ಎಂಬ ಪ್ರಶ್ನೆಗಳು ಇರಾನ್ನಿಯನ್ನರದ್ದಾಗಿದೆ.
ಸರ್ವೋಚ್ಚ ನಾಯಕನ ಇರುವ ಸ್ಥಳದ ಬಗ್ಗೆ ಇರಾನಿಯನ್ನರು ಚಿಂತಿತರಾಗಿದ್ದಾರೆ. ಈ ವಾರದ ಆರಂಭದಲ್ಲಿ ಇರಾನ್‌ನ ಸರ್ಕಾರಿ ಟಿವಿಯ ನಿರೂಪಕರು, ದೇಶದ ನಾಗರಿಕರ ಪರವಾಗಿ ಆಡಳಿತಕ್ಕೆ ಒಂದು ಪ್ರಶ್ನೆಯನ್ನುಕೇಳುತ್ತಿದ್ದೇನೆ, ನಮ್ಮ ಜನರು ಸರ್ವೋಚ್ಚ ನಾಯಕನ(ಖಮೇನಿ) ಬಗ್ಗೆ ತುಂಬಾ ಚಿಂತಿತರಾಗಿದ್ದಾರೆ. ಅವರು ಹೇಗಿದ್ದಾರೆಂದು ನೀವು ನಮಗೆ ಹೇಳಬಲ್ಲಿರಾ?” ಎಂದು ಪ್ರಶ್ನಿಸಿದ್ದರು.
ಇದಾದ ಕೆಲವು ಹೊತ್ತಲ್ಲೇ ಅಯತೊಲ್ಲಾ ಅಲಿ ಖಮೇನಿ ಅವರ ಕಚೇರಿಯ ಅಧಿಕಾರಿಯೊಬ್ಬರು, “ನಾವೆಲ್ಲರೂ ಖಮೇನಿಗಾಗಿ ಪ್ರಾರ್ಥಿಸಬೇಕು. ಸರ್ವೋಚ್ಚ ನಾಯಕನನ್ನು ರಕ್ಷಿಸುವ ಜವಾಬ್ದಾರಿಯುತ ಜನರು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ. ದೇವರು ಬಯಸಿದರೆ, ನಮ್ಮ ಜನರು ತಮ್ಮ ನಾಯಕನ ಪಕ್ಕದಲ್ಲಿ ವಿಜಯವನ್ನು ಆಚರಿಸಬಹುದುʼ ಎಂದು ಹೇಳಿಕೆ ನೀಡಿದ್ದರು.
ಕದನ ವಿರಾಮದ ನಂತರವೂ ಇಸ್ರೇಲ್ ಖಮೇನಿಯನ್ನಯ ಹತ್ಯೆ ಮಾಡಲು ಪ್ರಯತ್ನಿಸಬಹುದು ಎಂದು ಇರಾನ್ ಭದ್ರತಾ ಅಧಿಕಾರಿಗಳು ಶಂಕಿಸಿದ್ದಾರೆ ಎಂದು ಐಆರ್‌ಜಿಸಿ ಕಮಾಂಡರ್ ಜನರಲ್ ಯಾಹ್ಯಾ ಸಫಾವಿ ಪುತ್ರ ಮತ್ತು ರಾಜಕೀಯ ವಿಶ್ಲೇಷಕ ಹಮ್ಜೆಹ್ ಸಫಾವಿ ಹೇಳಿದ್ದಾರೆ. ಈ ಹಿನ್ನೆಯಲ್ಲಿ ಖಮೇನಿ ಹೊರಗಿನ ಸಂಪರ್ಕದಿಂದ ನಿಗೂಢವಾಗಿದ್ದು, ಕಠಿಣ ಭದ್ರತೆಗಳೊಂದಿಗೆ ರಹಸ್ಯ ಸ್ಥಳದಲ್ಲಿ ಬಚ್ಚಿಟ್ಟುಕೊಂಡಿದ್ದಾರೆ ಎಂದಿದ್ದಾರೆ.
ಏತನ್ಮಧ್ಯೆ, ಇರಾನ್ ಇಂಟರ್ನ್ಯಾಷನಲ್ ವರದಿಯ ಪ್ರಕಾರ ಇಸ್ರೇಲಿ ದಾಳಿಯಲ್ಲಿ ಇರಾನ್‌ನ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನ ಹಲವಾರು ಉನ್ನತ ಸದಸ್ಯರು ಸಾವನ್ನಪ್ಪಿದ ಸುದ್ದಿಯನ್ನು ಕೇಳಿದ ನಂತರ 86 ವರ್ಷದ ಸರ್ವೋಚ್ಚ ನಾಯಕ ಮಾನಸಿಕ ಮತ್ತು ದೈಹಿಕ ದುರ್ಬಲತೆಯಿಂದ ಬಳಲುತ್ತಿದು, ದೇಶದ ಬಗ್ಗೆ ಯಾವುದೇ ಸೂಕ್ತ ನಿರ್ಧಾರ ಕೈಗೊಳ್ಳದ ಸ್ಥಿತಿಗೆ ತಲುಪಿದ್ದಾರೆ. ದೇಶದಲ್ಲಿ ಸಂಭವಿಸಿದ ಸಾವಿನ ವರದಿಗಳು ಖಮೇನಿಗೆ ಹುಚ್ಚು ಹಿಡಿಸಿದ್ದು, ದೇಶವನ್ನು ಮುನ್ನಡೆಸಲು ಅವರು ಸಂಪೂರ್ಣವಾಗಿ ಅನರ್ಹರಾಗಿದ್ದಾರೆ ಎಂದು ಹೇಳಲಾಗಿದೆ.
ಸದ್ಯ ದೇಶವನ್ನು ಸುಪ್ರೀಂ ರಾಷ್ಟ್ರೀಯ ಭದ್ರತಾ ಮಂಡಳಿಯ ಸದಸ್ಯರು ಮತ್ತು ಉನ್ನತ ಮಿಲಿಟರಿ ಕಮಾಂಡರ್‌ಗಳು ಜಂಟಿಯಾಗಿ ಮುನ್ನಡೆಸುತ್ತಿದ್ದು, ವಿಶೇಷವಾಗಿ ರಾಷ್ಟ್ರೀಯ ಭದ್ರತೆಯ ವಿಷಯಗಳಲ್ಲಿ ಖಮೇನಿಯನ್ನು ಬದಿಗಿಡಲು ನಿರ್ಧರಿಸಿದ್ದಾರೆ.
ಖಮೇನಿ ಅವರನ್ನು ಬದಿಗಿಟ್ಟಿರುವುದರಿಂದ, ಅಧಿಕಾರವು ಇರಾನ್‌ನ ಮಿಲಿಟರಿ ಮತ್ತು ಗುಪ್ತಚರ ನಾಯಕತ್ವಕ್ಕೆ ವರ್ಗಾವಣೆಗೊಂಡಂತೆ ಕಂಡುಬರುತ್ತಿದೆ. ಐಆರ್‌ಜಿಸಿ ಮತ್ತು ಸುಪ್ರೀಂ ರಾಷ್ಟ್ರೀಯ ಭದ್ರತಾ ಮಂಡಳಿಯ ಹಿರಿಯ ಕಮಾಂಡರ್‌ಗಳು ಈಗ ಇಸ್ರೇಲಿ ದಾಳಿಗಳಿಗೆ ಪ್ರತಿಕ್ರಿಯಿಸುವುದರಿಂದ ಹಿಡಿದು ಖಮೇನಿ ಆಂತರಿಕ ಭದ್ರತೆ, ದೇಶದ ನಿರ್ವಹಣೆ, ಪ್ರಮುಖ ಕಾರ್ಯತಂತ್ರಗಳನ್ನು ತಾವೇ ತೆಗೆದುಕೊಳ್ಳುತ್ತಿದ್ದಾರೆ. ಅಲ್ಲದೆ ಸುಪ್ರೀಂ ನಾಯಕನ ಮಗ ಮತ್ತು ಸಂಭಾವ್ಯ ಉತ್ತರಾಧಿಕಾರಿ ಮೊಜ್ತಾಬಾ ಖಮೇನಿ ಕೂಡ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಪ್ರಮುಖ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಹೇಳಲಾಗುತ್ತದೆ.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝