ಕೊರಗಜ್ಜ ದೈವ ನರ್ತನದ ವೇಳೆ ಬಾಲಕಿಯರು ಹೆಜ್ಜೆ ಹಾಕಿದ ವಿಡಿಯೋ, ಫೋಟೋ ತಕ್ಷಣ ಅಳಿಸಬೇಕು, ಇಲ್ಲವಾದರೆ ಕಾನೂನು ಕ್ರಮ

ಮಂಗಳೂರು: ಇತ್ತೀಚೆಗೆ ಮಡಿಕೇರಿಯಲ್ಲಿ ನಡೆದ ಕೊರಗಜ್ಜ ದೈವದ ಕೋಲದ ಸಂದರ್ಭ ಪುಟ್ಟ ಬಾಲಕಿಯರು ಕೂಡ ಹೆಜ್ಜೆ ಹಾಕಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದನ್ನು ತಕ್ಷಣ ಸೋಷಿಯಲ್‌ ಮೀಡಿಯಾಗಳಿಂದ ಅಳಿಸಿ ಹಾಕುವಂತೆ ಹಾಗೂ ಮುಂದೆ ಯಾರಾದರೂ ಅದನ್ನು ಮತ್ತೆ ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ದೈವ ಆರಾಧಕರು ಹಾಗೂ ನರ್ತಕರ ಸಂಘ ರಿ. ಕೊಡಗು ಎಚ್ಚರಿಕೆ ನೀಡಿದೆ.

ನೋಟೀಸ್‌ನಲ್ಲಿ ಏನಿದೆ?
ಕೆಲವು ದಿನಗಳ ಹಿಂದೆ ಮಡಿಕೇರಿಯ ಮನೆಯಲ್ಲು ವರ್ಷಾವಧಿ ಕೊರಗಜ್ಜನ ಕೋಲದಲ್ಲಿ ಕೊರಗಜ್ಜ ದೈವ ನರ್ತಕರು ಭಕ್ತಿಯ ಪರಾಕಾಷ್ಠೆಯಯಲ್ಲಿ ನರ್ತನ ಮಾಡುವ ವೇಳೆ ಪುಟ್ಟ ಬಾಲಕಿಯರೂ ಪಾತ್ರಿ ಜೊತೆ ಭಕ್ತಿ, ಮುಗ್ಧತೆಯಿಂದ ಭಾವನಾತ್ಮಕ ಹೆಜ್ಜೆ ಹಾಕಿದ್ದಾರೆ. ಇದರ ವಿಡಿಯೋವನ್ನು ಕೋಲ ಮುಗಿದ ಹತ್ತು ದಿನದ ಬಳಿಕ ಯೂಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿದೆ. ಇದನ್ನು ಸಾವಿರಾರು ಮಂದಿ ಹಂಚಿಕೊಂಡಿರುವುದರಿಂದ ಕೆಲವರು ಪುಟ್ಟ ಬಾಲಕಿರ ತಾಯಿಗೂ ಆಕೆಗೂ ಕರೆ ಮಾಡಿ ಅಶ್ಲೀಲ ಪದ ಬಳಕೆ ಮಾಡಿದ್ದಾರೆ.
ಇದರಿಂದ ಬಾಲಕಿಯರು ಶಾಲೆಗೂ ತೆರಳದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಕುಟುಂಬ ಮಾನಸಿಕ ನೋವಿನಲ್ಲಿದೆ. ಇದನ್ನು ಸಾಮಾಜಿಕ ಜಾಲತಾಣಗಳಿಂದ ತಕ್ಷಣ ಅಳಿಸಬೇಕು. ಅಪ್ರಾಪ್ತ ಮಕ್ಕಳ ಮುಖ ಕಾಣಿಸುವಂತೆ ಪ್ರಸಾರ ಮಾಡಿದ ಪತ್ರಿಕೆಗಳು ಕ್ಷಮೆ ಕೋರಬೇಕು. ಮುಂದೆ ಯಾರಾದರೂ ಇದನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಾಕಿ ಮಕ್ಕಳಿಗೆ ಕಿರುಕುಳ ಕೊಟ್ಟರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ದೈವ ಆರಾಧಕರು ಹಾಗೂ ನರ್ತಕರ ಸಂಘ ರಿ. ಕೊಡಗು ಎಚ್ಚರಿಕೆ ನೀಡಿದೆ.

ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

error: Content is protected !!