ʻಸಿದ್ದರಾಮಯ್ಯಗೆ ತೊಂದರೆಯಿಲ್ಲ, ಸಂಕ್ರಾಂತಿ ಒಳಗೆ ಮೇಘಸ್ಫೋಟʼ ಕೋಡಿಶ್ರೀ ಸ್ಫೋಟಕ ಭವಿಷ್ಯ!

ಹಾಸನ: ʻರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಭವಿಷ್ಯ ನುಡಿದಿರುವ ಕೋಡಿಶ್ರೀಗಳು, ಅವರಿಗೆ ಏನೂ ತೊಂದರೆ ಆಗುವುದಿಲ್ಲʼ ಎಂದು ಭವಿಷ್ಯ ನುಡಿದಿದ್ದಾರೆ. ʻಸಂಕ್ರಾಂತಿ ಒಳಗೆ ಮೇಘಸ್ಫೋಟ ಆಗುವ ಸಾಧ್ಯತೆ ಇದೆ. ಜನವರಿ ಒಳಗೆ ದೊಡ್ಡ ಗಂಡಾಂತರ ಇದೆ. ಅಕಾಲದಲ್ಲಿ ಮಳೆ ಬಂದರೆ ಸಕಾಲದಲ್ಲಿ ತೊಂದರೆ ಆಗಲಿದೆʼ ಎಂದು ಭವಿಷ್ಯ ನುಡಿದಿದ್ದಾರೆ.
ಮುಂದಿನ 6 ತಿಂಗಳ ಬಗ್ಗೆ ಭವಿಷ್ಯ ನುಡಿದಿರುವ ಕೋಡಿಶ್ರೀಗಳು, ಸಂಕ್ರಾಂತಿ ಬಳಿಕ ರಾಜಕೀಯದಲ್ಲಿ ಭಾರೀ ಬದಲಾವಣೆಯಾಗಲಿದೆ ಎಂದು ಸ್ಪೋಟಕ ಭವಿಷ್ಯ ನುಡಿದಿದ್ದಾರೆ. ನಿರೀಕ್ಷೆಗೂ ಮೀರಿದ ದುಖಃ ಭಾರತಕ್ಕೆ ಬರಲಿದೆ ಎಂದು ಹೇಳಿದ್ದಾರೆ. ದೇಶದಲ್ಲಿ ಮೇಘ ಸ್ಫೋಟ, ಯುದ್ಧದಿಂದ ದೇಶಕ್ಕೆ ಗಂಡಾಂತರ ಇದೆ, ದ್ವೇಷ ಅಸೂಯೆಯ ಮಧ್ಯೆ ಒಂದಿಬ್ಬರು ಬಲಿಯಾಗುತ್ತಾರೆ ಎಂದು ಹೇಳಿದ್ದಾರೆ.
ಈ ಬಾರಿ ಮಳೆ ಚೆನ್ನಾಗಿ ಆಗಲಿದೆ. ಇದರಿಂದ ಮತ್ತೆ ಜಲಸ್ಫೋಟ ಆಗಲಿದೆ, ಸಾಗರದಲ್ಲಿ ಒಂದು ಜಲಸ್ಫೋಟ ಆಗಲಿದೆ ಎಂದು ಹೇಳಿದ್ದೆ ಅದು ಕೂಡಾ ಆಗಲಿದೆ ಎಂದಿದ್ದಾರೆ. ಕೊನೆಯಲ್ಲಿ ಸೋಳೆಯಾ ಮಗನುಟ್ಟಿ, ಆಳುವನು ಮುನಿಪುರವ. ಯುದ್ದವಿಲ್ಲದೆ ಮಡಿಯೆ ಪುರವೆಲ್ಲ ಕೂಳಾದೀತು ಎಂದು ಹೇಳಿ ಇದರ ಅರ್ಥ ಮುಂದೆ ಹೇಳುತ್ತೇನೆ ಎಂದು ಶ್ರೀಗಳು ಹೇಳಿದ್ದಾರೆ.

error: Content is protected !!