ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರದ ಚಿಕ್ಕನಾಯಕನಹಳ್ಳಿ ಗ್ರಾಮ ಪಂಚಾಯ್ತಿಯ ಸೂಲಿವಾರ ಗ್ರಾಮದಲ್ಲಿ ಹಸುವಿನ ಕೆಚ್ಚಲು ಕತ್ತರಿಸಿದ ಘಟನೆ ನಿನ್ನೆ ಮಧ್ಯಾಹ್ನ ನಡೆದಿದ್ದು, ಚಿಕಿತ್ಸೆಗೆ ಸ್ಪಂದಿಸದೇ ಹಸು ನಿನ್ನೆ ಜಮೀನಿನಲ್ಲೇ ಮೃತಪಟ್ಟಿದೆ. ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕೊಯ್ದ ಪ್ರಕರಣ ರಾಜ್ಯವ್ಯಾಪಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ಬೆನ್ನಲ್ಲೇ ಇದೀಗ ಈ ಘಟನೆ ನಡೆದಿದೆ.

ತನ್ನ ಜಮೀನಿನಲ್ಲಿ ಹಸು ಮೇಯಲು ಬಂದಿದೆ ಎನ್ನುವ ಕಾರಣಕ್ಕೆ ಹಳೆಯ ದ್ವೇಷದಿಂದ ಗುರುಸಿದ್ದಪ್ಪ ಎನ್ನುವಾತ ಮುಗ್ಧ ಹಸುವಿನ ಕೆಚ್ಚಲು ಕತ್ತರಿಸಿ ವಿಕೃತಿ ಮೆರೆರಿದಬಹುದು ಎಂದು ಹಸುವಿನ ಮಾಲೀಕ ಮರಿ ಬಸವಯ್ಯ ಆರೋಪಿಸಿದ್ದಾರೆ.
ಮರಿ ಬಸವಯ್ಯ ಹಾಗೂ ಗುರು ಸಿದ್ದಪ್ಪ ಅವ್ರ ಜಮೀನುಗಳು ಅಕ್ಕಪಕ್ಕದಲ್ಲೇ ಇವೆ. ಹಲವು ವರ್ಷಗಳಿಂದ ಇವರಿಬ್ಬರ ನಡ್ವೆ ಹಳೆಯ ದ್ವೇಷ ಇತ್ತು. ಮರಿ ಬಸವಯ್ಯ, ಸೂಲಿವಾರ ಗ್ರಾಮದ ಹಾಲು ಉತ್ಪಾದಕ ಸಂಘದ ಅಧ್ಯಕ್ಷನಾಗಿದ್ದನಂತೆ. ಒಂದು ತಿಂಗಳ ಹಿಂದೆ ನಡೆದ KMF ಚುನಾವಣೆಗೆ ಹನುಮಂತಯ್ಯ ಎನ್ನುವಾತ ಚುನಾವಣೆಗೆ ಸ್ಪರ್ಧಿಸಿದ್ದ. ಅವನ ಆಪ್ತನೇ ಈ ಗುರುಸಿದ್ದಪ್ಪ. ಹನುಮಂತಯ್ಯನವ್ರಿಗೆ ಮತ ಹಾಕಿಲ್ಲ ಎನ್ನುವ ದ್ವೇಷದಿಂದಲೂ ಈ ಕೃತ್ಯ ನಡೆದಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಏನೇ ಸಿಟ್ಟು, ಕೋಪ ಇದ್ದರೂ ನಮ್ಮ ಜೊತೆ ಮಾತನಾಡಬೇಕೇ ಹೊರತು, ಹಸುವನ್ನು ಸಾಯಿಸಬಾರದು ಎಂದು ಅಂತ ಮರಿ ಬಸವಯ್ಯ ಅವರ ಪತ್ನಿ ಭಾಗ್ಯಮ್ಮ ಕಣ್ಣೀರು ಹಾಕಿದ್ದಾರೆ.
ಘಟನಾ ಸ್ಥಳಕ್ಕೆ ತಾವರೆಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಿ ಬಸವಯ್ಯನವ್ರ ಜಮೀನಿನಲ್ಲಿಯೇ ಹಸುವಿನ ಅಂತ್ಯ ಸಂಸ್ಕಾರ ಮಾಡಲಾಗಿದೆ.