ಉಡುಪಿ : ಶ್ರೀ ದುರ್ಗಾಂಬ ಬಸ್ಸನ್ನು 180 ಡಿಗ್ರಿ ಕೋನದಲ್ಲಿ ತಿರುಗಿಸಿದ ಬಸ್ ಚಾಲಕನನ್ನು ಉಡುಪಿ ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಸ್ ಚಾಲಕ ದೇವರಾಜ ಪೊಲೀಸ್ ವಶವಾದ ಆರೋಪಿ. ಬಸ್ ವೇಗವಾಗಿ ತಿರುಗಾಡಿ ನಿಂತ ವೈರಲ್ ವಿಡಿಯೋವನ್ನು ಗಮನಿಸಿ ಪೊಲೀಸರು ಈ ಕ್ರಮ ತೆಗೆದುಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ʻಬಸ್ ಚಾಲಕನ ಹುಚ್ಚಾಟ ಪ್ರಯಾಣಿಕರಿಗೆ ಸಂಕಟʼ ಎನ್ನುವ ಶಿರ್ಷಿಕೆಯಲ್ಲಿ ಬಸ್ 180 ಡಿಗ್ರಿ ಕೋನದಲ್ಲಿ ತಿರುಗಾಡಿ ನಿಲ್ಲುವ ಒಂದು ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋವನ್ನು ಪೊಲೀಸರು ಪರಿಶೀಲಿಸಿದಾಗ, ಈ ಘಟನೆ ದಿನಾಂಕ 17/06/2025ರಂದು ಸಂಜೆ 4:30 ಗಂಟೆಗೆ ಕರಾವಳಿ-ಉಡುಪಿ ರಾಹೆ-169Aನೇ ಸಾರ್ವಜನಿಕ ರಸ್ತೆಯಲ್ಲಿ ಸಂಭವಿಸಿದೆ. ಆರೋಪಿ ದೇವರಾಜ ಎಂಬಾತನು KA20D8236 ನೋಂದಣಿಯ ಶ್ರೀ ದುರ್ಗಾಂಬ ಖಾಸಗಿ ಬಸ್ ಅನ್ನು ಕರಾವಳಿ ಕಡೆಯಿಂದ ಉಡುಪಿ ಕಡೆಗೆ ಸಾರ್ವಜನಿಕರ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದಿರುವುದು ಪತ್ತೆಯಾಗಿದೆ. ಅಲ್ಲದೆ ಬನ್ನಂಜೆ ಜಯಲಕ್ಷ್ಮೀ ಸಿಲ್ಕ್ ಬಳಿ ನಿಯಂತ್ರಣ ತಪ್ಪಿ ಬಸ್ಸು ತಿರುಗಿ ನಿಂತಿದ್ದು, ಬಳಿಕ ಆರೋಪಿ ಬಸ್ಸಿನ ಚಾಲಕನು ಬಸ್ಸನ್ನು ವಿರುದ್ದ ದಿಕ್ಕಿನಲ್ಲಿ ಚಲಾಯಿಸಿಕೊಂಡು ಉಡುಪಿ ಕಡೆಗೆ ಹೋಗಿರುವುದನ್ನು ಪೊಲೀಸರು ಕಂಡುಕೊಂಡಿದ್ದಾರೆ. ಅದೃಷ್ಟವಶಾತ್ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಗಾಯವಾಗಿರಲಿಲ್ಲ.
ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ : 72/2025 ಕಲಂ: 281, BNS 184,188,218 r/w 177 IMV Act ರಂತೆ ಪ್ರಕರಣ ದಾಖಲಾಗಿದ್ದು, ಆರೋ ಚಾಲಕ ದೇವರಾಜ್‌ನನ್ನು ದಸ್ತಗಿರಿ ಮಾಡಿ ಬಸ್ಸನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj