ಮಂಗಳೂರು: ಕಲ್ಕೂರ ಪ್ರತಿಷ್ಠಾನ, ಮಂಗಳೂರು, ಸಾವಯವ ಕೃಷಿಕ ಗ್ರಾಹಕ ಬಳಗದ ಸಹಕಾರದೊಂದಿಗೆ ಸಾವಯವ ಕೃಷಿಕರೇ ಬೆಳೆಸಿರುವ ವಿಶಿಷ್ಟ ತಳಿಗಳ ಸಮೃದ್ಧ ಫಲಗಳಾದ ಮಾವು ಹಲಸು ಮೇಳ ಜೂನ್ 21 ಶನಿವಾರ ಹಾಗೂ 22 ಆದಿತ್ಯವಾರದಂದು ಮುಂಜಾನೆ 7ರಿಂದ ಸಂಜೆ 7ರ ವರೆಗೆ ಕದ್ರಿ ಕಂಬಳ, ಮಲ್ಲಿಕಾ ಬಡಾವಣೆಯಲ್ಲಿರುವ ʻಮಂಜು ಪ್ರಾಸಾದ’ದ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ಆಯೋಜಕರು, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಹೇಳಿದರು.
ಅವರು ಮಂಗಳೂರಿನ ಪತ್ರಿಕಾಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ನಾಡು ನುಡಿ ಜಾಗೃತಿ ಸಮ್ಮೇಳನ ಸರಣಿ ಕಾರ್ಯಕ್ರಮದ ಅಂಗವಾಗಿ ಕಲ್ಕೂರ ಪ್ರತಿಷ್ಠಾನವು ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗದ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ಈ ಮೇಳದಲ್ಲಿ ಬೆಳೆಗಾರರಿಗೆ ಮತ್ತು ಗ್ರಾಹಕರಿಗೆ ಮುಕ್ತ ಅವಕಾಶವನ್ನು ಕಲ್ಪಿಸಲಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ರಾಮನಗರ, ಮಂಡ್ಯ, ಮೈಸೂರು, ಬೆಳಗಾಂ ಹಾಗೂ ಸ್ಥಳೀಯ ಕೃಷಿಕರು ಭಾಗವಹಿಸುತ್ತಿದ್ದು, ವಿವಿಧ ತಳಿಯ ಹಲಸು ರುದ್ರಾಕ್ಷ, ಚಂದ್ರಬರ್ಕೆ ಇತ್ಯಾದಿ ಅಲ್ಲದೆ ಮಾವಿನ ಹಣ್ಣುಗಳಾದ ಮಲ್ಲಿಕಾ, ಮಲ್ಲೋವ, ನೀಲಂ, ಕಾಳಪಾಡಿ, ಬಾದಾಮಿ, ತೋತಾಪುರಿ ಇತ್ಯಾದಿ ಹಣ್ಣುಗಳು ಲಭ್ಯವಿರುತ್ತದೆ. ಮಾವು ಹಲಸಿನಿಂದ ತಯಾರಿಸಿದ ಮೌಲ್ಯವರ್ಧಿತ ಸ್ವಾವಲಂಬಿ ಖಾದ್ಯಗಳಾದ ಹಲಸಿನ ಕಬಾಬ್, ಹಲಸಿನ ಗಾರಿಗೆ, ಚಿಪ್ಸ್, ಉಂಡ್ಯಕ್ಕೆ, ಹಲಸಿನ ಪಾವುಬಾಜಿ, ಕಡುಬು, ಹಲಸಿನ ಕೇಶ್, ಹೋಳಿಗೆ, ಹಪ್ಪಳ, ಉಪ್ಪಿನಕಾಯಿ, ಐಸ್ ಕ್ರೀಂ ಇತ್ಯಾದಿಗಳಲ್ಲದೆ, ಮಾಂಬಳ, ವಿವಿಧ ಮಾವು ಹಲಸಿನ ಗಿಡಗಳು, ದೇಸಿ ತರಕಾರಿ ಬೀಜಗಳು, ಸಸಿಗಳು, ಕೃಷಿಗೆ ಸಂಬಂಧಿಸಿದ ಉಪಕರಣಗಳು ಹಾಗೂ ಕೃಷಿ ಸಾಹಿತ್ಯ ಕೃತಿಗಳು ಲಭ್ಯವಿರಲಿವೆ. 40 ಸ್ಟಾಲ್‌ಗಳಿರಲಿದ್ದು, ವಿವಿಧ ತಳಿಯ ಮಾವು, ಹಲಸಿನ ಗಿಡಗಳು, ವಿಯೇಟ್ನಾಮ್ ದೇಶ ಮೂರು ವರ್ಷ ಫಲ ಕೊಡುವ ಅತ್ಯಂದ ದುಬಾರಿ ಬೆಲೆಯ ಮಾವಿನ ಗಿಡ, ಮಾವಿನ ಐಸ್ ಕ್ರೀಮ್, ಉಪ್ಪಿನಲ್ಲಿ ಹಾಕಿದ ಮಿಡಿ ಮಾವಿನಕಾಯಿ, ಲಭ್ಯವಿರಲಿದೆ. ಎಂದು ಹೇಳಿದರು.
ಸಾವಯವ ಕೃಷಿಕರಿಗೆ ಸನ್ಮಾನ:
ರಾಧಾಕೃಷ್ಣ ಪುತ್ತೂರು(ಹಲಸಿನ ಉತ್ಪನ್ನಗಳ ಸಾಧಕ), ಮಹೇಶ್, ರಾಮನಗರ(ಸಾವಯವ ಮಾವು ಕೃಷಿಕ), ಸ್ನೇಹಾ ಭಟ್(ಹೂ ಹಾಗೂ ಜಲಸಸ್ಯಗಳ ಪಾಲನೆ), ರಮೇಶ್ ನೂಜಿಪಾಡಿ (ಸಾವಯವ ಕೃಷಿಕ), ಚರಣ್ ರಾಜ್ (ಕೃಷಿ ಉತ್ಪನ್ನಗಳ ಮಾರಾಟಗಾರ) ಇವರಿಗೆ ಸನ್ಮಾನ ನಡೆಯಲಿದೆ. ಹಲಸು ಮಾವು ಮೇಳವು ಸಾವಯವ ಬಳಗದ ರತ್ನಾಕರ್ ಕುಳಾಯಿ ಮಾರ್ಗದರ್ಶನದಲ್ಲಿ ನಡೆಯಲಿದ್ದು, ಕೃಷಿ ಉತ್ಪನ್ನಗಳನ್ನು ಖರೀದಿಸುವ ಮೂಲಕ ಸಾಂಪ್ರದಾಯಿಕ ಸಾವಯವ ಕೃಷಿಕರನ್ನು ಪ್ರೋತ್ಸಾಹಿಸುವಂತೆ ಎಸ್. ಪ್ರದೀಪ ಕುಮಾರ ಕಲ್ಕೂರ ವಿನಂತಿಸಿದ್ದಾರೆ.
ಸ್ವದೇಶಿ ಗೋವುಗಳ ಹಾಗೂ ಪ್ರಾದೇಶಿಕ ಸಸ್ಯಗಳ ತಳಿ ಸಂರಕ್ಷಕರು, ಪರಿಸರ ತಜ್ಞ ಡಾ. ಮನೋಹರ ಉಪಾಧ್ಯಾಯ ಉದ್ಘಾಟನಾ ಸಮಾರಂಭದ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಪ್ರಸಿದ್ಧ ಹೃದಯ ತಜ್ಞ ಡಾ. ಪದ್ಮನಾಭ ಕಾಮತ್, ಆರೋಗ್ಯ ಮತ್ತು ಆಹಾರ ಪದ್ಧತಿ ಬಗ್ಗೆ ಮಾಹಿತಿ ನೀಡಲಿದ್ದಾರೆ.
ಮಾವು ಹಲಸು ಮೇಳವನ್ನು ಹಿರಿಯ ಸಾಮಾಜಿಕ ಕಾರ್ಯಕರ್ತೆ ಹಾಗೂ ಕದ್ರಿ ಫಲಪುಷ್ಪ ಪ್ರದರ್ಶನದ ಗೌರವಾಧ್ಯಕ್ಷೆ ಆರೂರು ಲಕ್ಷ್ಮೀ ರಾವ್ ಉದ್ಘಾಟಿಸಲಿದ್ದು, ಕಟೀಲು ಲಕ್ಷ್ಮೀನಾರಾಯಣ ಆಸ್ರಣ್ಣರು, ಶರವು ರಾಘವೇಂದ್ರ ಶಾಸ್ತ್ರಿ, ದೀಪ ಬೆಳಗುವ ಮೂಲಕ ಶುಭ ಹಾರೈಸಲಿದ್ದಾರೆ. ಎ.ಜಿ. ಶೆಟ್ಟಿ, ಸಂಸದ ಕ್ಯಾ ಬ್ರಿಜೇಶ್ ಚೌಟ, ಶಾಸಕರಾದ ಡಿ. ವೇದವ್ಯಾಸ ಕಾಮತ್, ಡಾ. ವೈ. ಭರತ್ ಶೆಟ್ಟಿ, ಎಂ.ಎಲ್.ಸಿ. ಐವನ್ ಡಿಸೋಜ, ಮಾಜಿ ಮೇಯರ್‌ಗಳಾದ ಶಶಿಧರ ಹೆಗ್ಡೆ, ಭಾಸ್ಕರ್ ಮೊಯ್ಲಿ, ಜಯಾನಂದ ಅಂಚನ್, ಸುಧೀರ್ ಶೆಟ್ಟಿ ಕಣ್ಣೂರ್, ಮನೋಡ್ ಕುಮಾರ್, ಪ್ರೇಮಾನಂದ ಶೆಟ್ಟಿ, ಮಾಜಿ ಕಾರ್ಪೋರೇಟರ್ಗಳಾದ ಶಕಿಲಾ ಕಾವ, ಮನೋಹರ ಶೆಟ್ಟಿ, ಲಾನ್ಸಿ ಪಿಂಟೊ, ಪ್ರವೀಣ್‌ಚಂದ್ರ ಆಳ್ವ, ಹರಿಕೃಷ್ಣ ಪುನರೂರು, ಡಾ. ಎಂ.ಬಿ. ಪುರಾಣಿಕ್, ಭುವನಾಭಿರಾಮ ಉಡುಪ, ಕ್ಯಾ ಗಣೇಶ್ ಕಾರ್ಣಿಕ್, ಡಾ. ಜೀವರಾಜ್ ಸೊರಕೆ, ರಘುನಾಥ ಸೋಮಯಾಜಿ, ಪ್ರಕಾಶ್ ಕಲ್ಯಾವಿ, ರತ್ನಾಕರ ಜೈನ್, ಎ.ಆರ್. ಸುಬ್ಬಯ್ಯಕಟ್ಟೆ, ಪತ್ರಕರ್ತ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್, ಪ್ರೆಸ್ ಕ್ಲಬ್‌ನ ‘ಅಧ್ಯಕ್ಷ ಪಿ.ಬಿ. ಹರೀಶ್ ರೈ, ಸಾವಯವ ಬಳಗದ ಜಿ.ಆರ್. ಪ್ರಸಾದ್, ಪತ್ತುಮುಡಿ ಸೂರ್ಯನಾರಾಯಣ ರಾವ್, ನಮ್ಮವರು ಬಳಗದ ಎಂ.ಎಸ್, ಗುರುರಾಜ್, ಮಿಥುನ್ ರೈ, ಮೊದಲಾದವರು ಉಪಸ್ಥಿತರಿರುವರು ಎಂದು ಎಸ್. ಪ್ರದೀಪ ಕುಮಾರ ಹೇಳೀದರು.
ಪತ್ರಿಕಾ ಗೋಷ್ಠಿಯಲ್ಲಿ ಹಲವರು ಉಪಸ್ಥಿತರಿದ್ದರು.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj