ಜಾನುವಾರು ಸಾಗಾಟ: ಮೂವರು ವಶ, ಹತ್ತು ಜಾನುವಾರು ರಕ್ಷಣೆ

ಬೈಂದೂರು : ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ. 10 ಜಾನುವಾರುಗಳನ್ನು, ಎರಡು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ಭಟ್ಕಳದ ನವಾಯತ್ ಕಾಲನಿಯ ಅಬ್ರಾರುಲ್ ಹಾಕ್ ಮೋಮಿನ್(30), ಗಾಂಧಿನಗರ ಕೋಗ್ತಿಯ ಬಂದರ್ ರೋಡ್ ಸೆಕೆಂಡ್ ಕ್ರಾಸ್ ನಿವಾಸಿ ಮೊಹಮ್ಮದ್ ಮತ್ತು ಭಟ್ಕಳದ ಮೊಹಮ್ಮದ್ ಆರೀಫ್ ಬಂಧಿತ ಆರೋಪಿಗಳು.

ಇಂದು ಬೆಳಗ್ಗಿನ ಜಾವ 3.30 ಗಂಟೆ ವೇಳೆಗೆ ಕೊಲ್ಲೂರು ಕಡೆಯಿಂದ ಭಟ್ಕಳ ಕಡೆಗೆ ಮಹಾರಾಷ್ಟ್ರದ ರಿಜಿಸ್ಟ್ರೇಶನ್‌ ಹೊಂದಿರುವ ವಾಹನದಲ್ಲಿ 10 ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದ್ದು, ಅದಕ್ಕೆ ಬೆಂಗಾವಲಾಗಿ ಮಂಗಳೂರಿನ ರಿಜಿಸ್ಟ್ರೇಶನ್‌ ಹೊಂದಿರುವ ವಾಹನ ಸಾಗುತ್ತಿತ್ತು. ಪೊಲೀಸರು ಈ ಎರಡೂ ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಜಾನುವಾರುಗಳನ್ನು ಮಾಂಸಕ್ಕಾಗಿ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.

error: Content is protected !!