ಸುರತ್ಕಲ್‌: ಅಬ್ಬರದ ಮಳೆ ನಡುವೆ ಧಗಧಗನೆ ಉರಿದ ಮಾರುತಿ ಕಾರ್!

ಸುರತ್ಕಲ್:‌ ಮಾರುತಿ ಕಂಪೆನಿಯ ಕಾರೊಂದು ಸುರತ್ಕಲ್‌ ಜಂಕ್ಷನ್‌ ಬಳಿ, ಫ್ಲೈ ಓವರ್‌ ಕೆಳಗಿನ ರಸ್ತೆಯಲ್ಲಿ ಬೆಂಕಿಗಾಹುತಿಯಾಗಿದ್ದು, ಸಂಪೂರ್ಣ ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್‌ ಕಾರಿನಲ್ಲಿದ್ದವರು ಪವಾಡ ಸದೃಶ್ಯರಾಗಿ ಪಾರಾಗಿದ್ದಾರೆ.

ಇಂದು ಸಂಜೆಯ ಸುಮಾರಿಗೆ ಸುರತ್ಕಲ್‌ ಭಾಗದಲ್ಲಿ ಕಾರಿನಲ್ಲಿ ಹೊಗೆ ಕಾಣಿಸಿದ್ದು, ಕಾರಿನಲ್ಲಿದ್ದವರು ತಕ್ಷಣ ಕಾರಿನಿಂದ ಇಳಿದಿದ್ದಾರೆ. ಅವರು ಹೊರಬರುತ್ತಿದ್ದಂತೆ ಬೆಂಕಿಯ ಕೆನ್ನಾಲಿ ವ್ಯಾಪಿಸಿ ಕಾರು ಧಗಧಗನೆ ಉರಿದು ಸುಟ್ಟು ಕರಕಲಾಗಿದೆ. ಈ ಅನಾಹುತಕ್ಕೆ ಕಾರಣ ಏನೆಂದು ತಿಳಿದು ಬಂದಿಲ್ಲ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವಾರು ಕಾರುಗಳು ಸುಟ್ಟು ಕರಕಲಾಗಿದೆ. ರಸ್ತೆ ಸುರಕ್ಷತೆಯಲ್ಲಿ ಪ್ರಾಮಾಣೀಕೃತಗೊಂಡ ಅನೇಕ ಜನಪ್ರಿಯ ಬ್ರಾಂಡ್‌ಗಳ ಕಾರುಗಳೂ ಸುಟ್ಟು ಕರಕಲಾಗಿದೆ. ಇದು ಅಚ್ಚರಿಗೆ ಕಾರಣವಾಗಿದೆ.

 

For Video Click Here:

https://www.youtube.com/shorts/PEfsEi9t5rQ?feature=share

error: Content is protected !!