ಕಿನ್ನಿಗೋಳಿ: ಕಿನ್ನಿಗೋಳಿ ಘಟಕದ ಉಪ ವಲಯ ಅರಣ್ಯ ಅಧಿಕಾರಿ ನಾಗೇಶ್ ಬಿಲ್ಲವ ಹಾಗೂ ಉಪ ವಲಯ ಅರಣ್ಯ ಅಧಿಕಾರಿಗಳಾಗಿ ಮುಂಭಡ್ತಿಗೊಂಡ ರಾಜು ಎಲ್.ಜೆ ಮತ್ತು ಸಂತೋಷ್ ಅವರ ಬೀಳ್ಕೊಡುಗೆ ಸಮಾರಂಭ ಕಿನ್ನಿಗೋಳಿಯ ಹೋಟೆಲ್ ಒಂದರಲ್ಲಿ ಜರುಗಿತು.
ಮುಖ್ಯ ಅತಿಥಿಗಳಾಗಿ ಮೂಡಬಿದ್ರೆ ವಲಯ ಅರಣ್ಯ ಅಧಿಕಾರಿ ಕಿರಣ್ ಕುಮಾರ್, ಉಪವಲಯ ಅರಣ್ಯ ಅಧಿಕಾರಿಗಳಾದ ರಾಘವೇಂದ್ರ, ಗುರುಮೂರ್ತಿ ನಿಂಗಪ್ಪ ವಾಲಿ ಕಿನ್ನಿಗೋಳಿ ಘಟಕ ಗಸ್ತು ಅರಣ್ಯ ಪಾಲಕರಾದ ಮನೀಶ್, ಶಂಕರ್, ಸಂದೇಶ್, ಚಂದ್ರಶೇಖರ, ಬಸಪ್ಪ ಹಾಗೂ ಟಿಂಬರ್ ಮರ್ಚೆಂಟ್ ಮತ್ತು ಸಾಮಿಲ್ಲ್ ಮಾಲಕರುಗಳಾದ ಜೋರೋಮೋರಸ್, ಬಾಲಕೃಷ್ಣ ಶೆಟ್ಟಿ, ಸುರೇಶ್ ಕೆ. ಸುವರ್ಣ ರವೀಂದ್ರ ಶೆಟ್ಟಿ ಕೊನಿ, ರಾಬರ್ಟ್ ವಿಲಿಯಂ, ಅಬುಬಕರ್, ನಾರಾಯಣ ಸುವರ್ಣ, ಪುಷ್ಪರಾಜ್ ಶೆಟ್ಟಿ, ವಿಶ್ವ, ಸಂತೋಷ ಪೂಜಾರಿ ಸಂತೋಷ ಶೆಟ್ಟಿ. ಪ್ರಶಾಂತ್ ಪೂಜಾರಿ, ಅಬ್ಬಾಸ್ ಮತ್ತಿತರರು ಉಪಸ್ಥಿತರಿದ್ದರು. ಪ್ರಕಾಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.