ತಮನ್ನಾನು ಬೇಡ, ಸುಮನ್ನಾನು ಬೇಡ, ನಾನೇ ಫ್ರೀಯಾಗಿ ರಾಯಭಾರಿ ಆಗ್ತೀನಿ: ವಾಟಾಳ್

ರಾಮನಗರ: ಮೈಸೂರು ಸ್ಯಾಂಡಲ್ ಸೋಪ್‌ಗೆ ರಾಯಭಾರಿಯಾಗಿ ತಮನ್ನಾನು ಬೇಡ, ಸುಮನ್ನಾನು ಬೇಡ. ನಾನೇ ಫ್ರೀಯಾಗಿ ರಾಯಭಾರಿ ಆಗ್ತೀನಿ‌ ಎಂದು ಎಂದು ಕನ್ನಡಪರ ಹೋರಾಟಗಾರ ಹಾಗೂ ವಾಟಾಳ್ ಪಕ್ಷದ ಸಂಸ್ಥಾಪಕ ವಾಟಾಳ್ ನಾಗರಾಜ್ ಹೇಳಿದರು. ʻಸಿಎಂ, ಡಿಸಿಎಂ, ಸೇರಿದಂತೆ ರಾಜ್ಯದ ಎಲ್ಲಾ ಮಂತ್ರಿಗಳು, ಶಾಸಕರು ಸ್ಯಾಂಡಲ್ ಸೋಪಿನಲ್ಲಿ ಸ್ನಾನ ಮಾಡಿ ಸಾಕು. ಎಲ್ಲರೂ ನಮ್ಮ ಮೈಸೂರು ಸ್ಯಾಂಡಲ್ ಸೋಪ್ ಬಳಸಿʼ ಎಂದು ವಾಟಾಳ್‌ ಕರೆ ನೀಡಿದ್ದಾರೆ.

ರಾಮನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈಸೂರ್ ಸ್ಯಾಂಡಲ್ ಸೋಪ್ ಗೆ ತಮನ್ನಾ ಭಾಟಿಯಾ ರನ್ನ ರಾಯಭಾರಿಯಾಗಿ ನೇಮಕ ಮಾಡುವುದು ಬೇಡ. ಮುಖ್ಯವಾಗಿ ನಮ್ಮ ಮೈಸೂರು ಸ್ಯಾಂಡಲ್ ಸೋಪಿನ ರಾಯಭಾರಿಯಾಗಿ ಯಾರನ್ನೂ ಆಯ್ಕೆ ಮಾಡುವುದು ಬೇಡ. ಅದರಲ್ಲಿಯೂ ಕನ್ನಡದವರು ಹೊರತಾಗಿ ತಮಿಳು, ತೆಲುಗಿನವರು ಯಾರು ಬೇಡ. ಕರ್ನಾಟಕದ ಶ್ರೀಗಂಧ, ದರಸಾ ನಡೆಯುವ ಮೈಸೂರು ಪ್ರಪಂಚದಲ್ಲೇ ಬ್ರಾಂಡ್ ಆಗಿವೆ. ಸಿಎಂ, ಡಿಸಿಎಂ, ಸೇರಿದಂತೆ ರಾಜ್ಯದ ಎಲ್ಲಾ ಮಂತ್ರಿಗಳು, ಶಾಸಕರು ಸ್ಯಾಂಡಲ್ ಸೋಪಿನಲ್ಲಿ ಸ್ನಾನ ಮಾಡಿ ಸಾಕು. ಇವರೆಲ್ಲಾ ಸ್ಯಾಂಡಲ್ ಸೋಪಿನಲ್ಲಿ ಸ್ನಾನ ಮಾಡಿದರೆ ಅವರೇ ದೊಡ್ಡ ರಾಯಭಾರಿಗಳು ಆದಂತೆ ಎಂದರು.

Why no Kannadiga?: Karnataka govt under fire for Rs 6.2 cr deal with Tamannaah Bhatia to promote Mysore Sandal - BusinessToday

ಮೈಸೂರು ಸ್ಯಾಂಡಲ್ ಸೋಪ್‌ಗೆ ರಾಯಭಾರಿಯಾಗಿ ತಮನ್ನಾನು ಬೇಡ, ಸುಮನ್ನಾನು ಬೇಡ. ತಮನ್ನಾಗಿ 6 ಕೋಟಿ ಕೊಟ್ಟಿರೋದರಲ್ಲಿ ದೊಡ್ಡ ರಾಜಕೀಯ ಇದೆ. ಸಿಕ್ಕ‌ಸಿಕ್ಕವರಿಗೆ ಕೋಟಿ ಕೋಟಿ ಕೊಟ್ರೆ ನಾಳೆ ಕಾರ್ಖಾನೆ ಮುಚ್ಚಬೇಕಾಗುತ್ತದೆ. ಮೈಸೂಡು ಸ್ಯಾಂಡಲ್ ಸೋಪ್ ಕನ್ನಡಿಗರ ಸೋಪ್. ಎಲ್ಲರೂ ಸ್ಯಾಂಡಲ್ ಸೋಪ್ ಬಳಸಿ, ನಾನೇ ಫ್ರೀಯಾಗಿ ರಾಯಭಾರಿ ಆಗುತ್ತೇನೆ ಎಂದು ಆಗ್ರಹಿಸಿದರು.

error: Content is protected !!