ಮಂಗಳೂರು: ಇತ್ತೀಚೆಗೆ ಬಜ್ಪೆಯ ಕಿನ್ನಿಪದವು ಎಂಬಲ್ಲಿ ಹತ್ಯೆಗೀಡಾದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರನ್ನು ತೇಜೋವಧೆ ಮಾಡಿ, ನಕಲಿ ಹಾಗೂ ಪ್ರಚೋದನಕಾರಿ ಸಂದೇಶ ರವಾನಿಸಿದ ಕುರಿತಂತೆ ಸುರತ್ಕಲ್ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ.
ಮೇ 18 ರಂದು ಸುಹಾಸ್ ಶೆಟ್ಟಿ ಚಿಕ್ಕಪ್ಪ ಮನೆಯಲ್ಲಿದ್ದಾಗ ಮನೋಜ್ ಎಂಬ ಸಂಪರ್ಕದಿಂದ ವಾಟ್ಸಾಪ್‌ನಲ್ಲಿ ಸಂದೇಶ ಬಂದಿದ್ದು, ವಾಟ್ಸಾಪ್ ಗ್ರೂಪ್‌ನಲ್ಲಿ ಶೇರ್ ಮಾಡಿದ ಸ್ಕ್ರೀನ್ ಶಾಟ್ ಸೇರಿದೆ.
ʻಸಂಬಂಧಿಕರ ಅಶ್ಲೀಲ ವಿಡಿಯೋವನ್ನು ಶೇರ್ ಮಾಡಿದ್ದಕ್ಕಾಗಿ ಕುಟುಂಬಿಕರೇ ಸೇರಿ ಸುಹಾಸ್ ಶೆಟ್ಟಿಯವರನ್ನು ಕೊಲೆ ಮಾಡಿದ್ದಾರೆʼ ಎಂದು ಸುಳ್ಳು ಸಂದೇಶ ಬರೆದು ಅದರಲ್ಲಿ ಸುಹಾಸ್ ಶೆಟ್ಟಿ ಫೋಟೋ ಬಳಸಿ ಶೇರ್ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ತಪ್ಪು ಮಾಹಿತಿಯನ್ನು ಹರಡಲು, ಹಿಂದೂ ಸಮುದಾಯವನ್ನು ಪ್ರಚೋದಿಸಲು ಮತ್ತು ಸಾಮಾಜಿಕ ಸಾಮರಸ್ಯವನ್ನು ಕದಡಲು ಉದ್ದೇಶಪೂರ್ವಕವಾಗಿ ಸಂದೇಶವನ್ನು ರಚಿಸಲಾಗಿದೆ. ಇಂಥವರ ವಿರುದ್ಧ ಕಠಿನ ಕ್ರಮ ಕೈಗೊಳ್ಳುವಂತೆ ದೂರುನಲ್ಲಿ ಆರೋಪಿಸಲಾಗಿದೆ. ಈ ಕುರಿತಂತೆ ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.