ಮೇ 30ರಂದು ಸೂರ್ಯನಾರಾಯಣ ದೇವರ ಗರ್ಭಗುಡಿಯ ಶಿಲಾನ್ಯಾಸ ಸಮಾರಂಭ: ಆಮಂತ್ರಣ ಪತ್ರ ಬಿಡುಗಡೆ

ಮಂಗಳೂರು: ಗಂಜಿಮಠ ಪಂಚಾಯತ್‌ ವ್ಯಾಪ್ತಿಯ ಮಳಲಿ(ಮಣೇಲ್)) ಸೂರ್ಯನಾರಾಯಣ ದೇವಸ್ಥಾನಕ್ಕೆ ಮೇ 30ರಂದು ನಡೆಯಲಿರುವ ಶಿಲಾನ್ಯಾಸ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಶುಕ್ರವಾರ ಮುಂಜಾನೆ ಶ್ರೀಕ್ಷೇತ್ರದಲ್ಲಿ ರಮೇಶ್ ಆಚಾರ್ಯ ನಾರಳ ಬಿಡುಗಡೆಗೊಳಿಸಿದರು.


ಮೇ 30 ರಂದು ಶುಕ್ರವಾರ ಪೂರ್ವಾಹ್ನ ಗಂಟೆ 8-23ಕ್ಕೆ ನಡೆಯುವ ಮಿಥುನ ಲಗ್ನದಲ್ಲಿ ಶ್ರೀ ಸೂರ್ಯನಾರಾಯಣ ದೇವರ ನೂತನ ಗರ್ಭಗುಡಿಯ ಶಿಲಾನ್ಯಾಸ ಸಮಾರಂಭ ವೇದಮೂರ್ತಿ ಪೊಳಲಿ ಶ್ರೀ ಸುಬ್ರಹ್ಮಣ್ಯ ತಂತ್ರಿಯವರ ನೇತೃತ್ವದಲ್ಲಿ, ಶ್ರೀಕ್ಷೇತ್ರ ವಜ್ರದೇಹಿ ಮಠ ಗುರುಪುರದ ಶ್ರೀ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅಮೃತ ಹಸ್ತದಿಂದ ನೆರವೇರಲಿದೆ.

ಸಮಾರಂಭದಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರಾದ ಡಾ| ವೈ. ಭರತ್ ಶೆಟ್ಟಿ, ರಾಜೇಶ್ ನಾಯ್ಕ, ಗಂಜಿಮಠ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲತಿ ಮತ್ತಿರರು ಭಾಗವಹಿಸಲಿದ್ದಾರೆ. ಶ್ರೀ ದೇವರ ಸಾನಿಧ್ಯ ವೃದ್ಧಿಗಾಗಿ ಮೇ 26ರಿಂದ 29ರ ವರೆಗೆ ಐದು ದಿನಗಳ ಕಾಲ ಸಂಧ್ಯಾ ಭಜನಾ, ಮರುದಿನ ಮೇ 30 ರಂದು ಪ್ರಾತಃಕಾಲ ಭಜನಾ ಸೇವೆ ನಡೆಯಲಿದೆ.

ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಭಾಸ್ಕರ ಕುಲಾಲ್ ಕೀಲಾಡಿ, ಸಂಚಾಲಕ ಭಾಸ್ಕರ ಭಟ್, ಕಾರ್ಯದರ್ಶಿ ಶಿವರಾಜ್ ನಾರಳ, ಜಯರಾಮ್ ಶೆಟ್ಟಿ ಸಂಕೇಶಗುತ್ತು, ರಾಮಚಂದ್ರ ಅತಿಕಾರಿಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.

error: Content is protected !!