ಇಸ್ಲಮಾಬಾದ್ : ʻನೀವು ನಮ್ಮ ನೀರು ನಿಲ್ಲಿಸಿದರೆ ನಾವು ನಿಮ್ಮ ಉಸಿರೇ ನಿಲ್ಲಿಸುತ್ತೇವೆʼ ಎಂದು ಪಾಕಿಸ್ತಾನದ ಸೇನಾ ವಕ್ತಾರ ಅಹ್ಮದ್ ಷರೀಫ್ ಭಯೋತ್ಪಾದಕನ ಹಾಗೆ ಧಮ್ಕಿ ಹಾಕಿದ್ದಾನೆ.

ಕೆಲವು ದಿನಗಳ ಹಿಂದೆ ಉಗ್ರ ಹಫೀಜ್ ಸಯೀದ್ ಕೂಡಾ ʻನೀವು ನಮಗೆ ಬರಬೇಕಾದ ನೀರನ್ನು ನಿರ್ಬಂಧಿಸಿದರೆ, ನಾವು ನಿಮ್ಮ ಉಸಿರನ್ನು ನಿಲ್ಲಿಸ್ತೇವೆʼ ಎಂದು ಹೇಳಿದ್ದ. ಇದೀಗ ಅಹ್ಮದ್ ಷರೀಫ್ ಕೂಡಾ ಹಫೀಜ್ ಮಾದರಿಯಲ್ಲಿ ಧಮ್ಕಿ ಹಾಕಿದ್ದಾನೆ.
ಪಾಕ್ ಸೇನಾ ವಕ್ತಾರ ಪಾಕಿಸ್ತಾನದ ವಿಶ್ವವಿದ್ಯಾಲಯವೊಂದರ ಕಾರ್ಯಕ್ರಮದಲ್ಲಿ ಷರೀಫ್ ಮಾತಾಡುತ್ತಿರುವ ವೀಡಿಯೋ ಎಕ್ಸ್‌ನಲ್ಲಿ ವೈರಲ್ ಆಗಿದೆ. ಕಾರ್ಯಕ್ರಮದಲ್ಲಿ ಸಿಂಧೂ ನದಿ ನೀರಿನ ಒಪ್ಪಂದ ಅಮಾನತು ಮಾಡಿರುವ ವಿಚಾರ ಪ್ರಸ್ತಾಪಿಸಿ ಈ ರೀತಿಯ ಗೊಡ್ಡು ಬೆದರಿಕೆ ಹಾಕಿದ್ದಾನೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ ನಂತರ ನೀರು ಹಂಚಿಕೆ ಒಪ್ಪಂದವನ್ನು ಭಾರತ ಅಮಾನತುಗೊಳಿಸಿತ್ತು. ಭಾರತದ ಈ ಕ್ರಮವನ್ನು ಉಲ್ಲೇಖಿಸಿ, 2008ರ ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಲಷ್ಕರ್-ಎ-ತೈಬಾ ಸಂಸ್ಥಾಪಕ ಹಫೀಜ್ ಸಯೀದ್ ಕೂಡ ಇದೇ ಹೇಳಿಕೆ ನೀಡಿದ್ದ.