ಮಂಗಳೂರು: ʻಎತ್ತಿಗೆ ಜ್ವರ ಬಂದರೆ, ಕೋಣಕ್ಕೆ ಬರೆ ಎಳೆದರುʼ ಎನ್ನುವ ಹಾಗೆ ಕಾಂಗ್ರೆಸ್ ಸರ್ಕಾರ ಇತ್ತೀಚೆಗೆ ಹಿಂದೂ ಕಾರ್ಯಕರ್ತರನ್ನ ಮನೆಯಲ್ಲಿ ಇರೋದಕ್ಕೆ ಬಿಡದೇ ಗಡಿ ಪಾರು ಕೆಲಸ ಆರಂಭಸಿದೆ. ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯ ಕೊಲೆ ಪ್ರಕರಣವನ್ನು ಸಿದ್ದರಾಮಯ್ಯ ಸರಕಾರ ನಿಷ್ಪಕ್ಷಪಾತ ತನಿಖೆ ನಡೆಸದೇ ಮತ್ತೆ ಹಿಂದು ಕಾರ್ಯಕರ್ತರನ್ನೇ ಟಾರ್ಗೆಟ್ ಮಾಡುತ್ತಿದೆ ಎಂದು ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ನಂದನ ಮಲ್ಯ ಆರೋಪಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಪ್ರಕರಣದ ಹಿಂದೆ ಯಾರಿದ್ದಾರೆ? ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಗೆ ಹಣ ಬಂದಿದ್ದು ಹೇಗೆ.? ಇದ್ಯಾವುದರ ಬಗ್ಗೆಯೂ ಸರಿಯಾದ ತನಿಖೆ ನಡೆಯುತ್ತಿಲ್ಲ. ಸ್ವತಃ ಪೊಲೀಸ್ ಇಲಾಖೆಯಲ್ಲೇ ಕೆಲವರ ಬೆಂಬಲದಿಂದ ಈ ಹತ್ಯೆ ನಡೆದಿರುವ ಬಗ್ಗೆ ಅನುಮಾನ ಕೂಡ ಇದೆ. ಹೀಗಿರೋವಾಗ ಅವರ ಕೈಯಲ್ಲೇ ತನಿಖೆ ನಡೆಸಿದ್ರೆ ನ್ಯಾಯ ಸಿಗುವುದು ಹೇಗೆ? ಎಂದು ಪ್ರಶ್ನಿಸಿದ್ದಾರೆ.
ಜಿಹಾದಿಗಳ ಮೇಲೆ ರಾಜ್ಯ ಸರ್ಕಾರದ ಬೆಂಬಲ ಕೂಡ ಇದ್ದು, ತನಿಖೆ ಸರಿಯಾದ ಮಾರ್ಗದಲ್ಲಿ ತನಿಖೆ ನಡೆಯೋದು ಅನುಮಾನವೇ. ಹೀಗಾಗಿ ಪ್ರಕರಣವನ್ನ ಎನ್‌ಐಗೆ ವಹಿಸಿಬೇಕು. ರಾಷ್ಟ್ರೀಯ ತನಿಖಾ ದಳದಿಂದ ಮಾತ್ರ ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ನ್ಯಾಯ ಸಿಗಲು ಸಾಧ್ಯ. ಸುಹಾಸ್ ಶೆಟ್ಟಿ ಹತ್ಯೆಯ ಪ್ರಕರಣವನ್ನ NIA ವಹಿಸಲು ವಿಶ್ವ ಹಿಂದೂ ಪರಿಷತ್ ಬಜರಂಗದಳ ಮೇ 25ರಂದು ಬಜ್ಜೆ ಚಲೋ ಆಯೋಜಿಸಿದ್ದು, ಇಡೀ ಹಿಂದೂ ಸಮುದಾಯ, ಹಿಂದೂ ಕಾರ್ಯಕರ್ತರು, ಸಂಘಟನೆಗಳ ಜೊತೆ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕೂಡಾ ಕೈ ಜೋಡಿಸಲಿದೆ ಎಂದರು.
ಮಧ್ಯಾಹ್ನ 3 ಗಂಟೆಗೆ ಬಜ್ಜೆಯ ಶಾರದಾ ಮಂಟದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಎಲ್ಲಾ ರಾಷ್ಟ್ರೀಯವಾದಿಗಳು, ಹಿಂದೂಗಳು, ಹಿಂದೂ ಕಾರ್ಯಕರ್ತರು ಸ್ವಯಂ ಪ್ರೇರಿತವಾಗಿ ಅರ್ಧದಿನಗಳ ಸಮಯ ನೀಡಿ ಕೈ ಜೋಡಿಸಬೇಕಾಗಿ ವಿಶ್ವ ಹಿಂದೂ ಪರಿಷತ್ ಕೇಳಿಕೊಂಡಿದೆ. ಅದರಂತೆ ಭಾರತೀಯ ಜನತಾ ಪಾರ್ಟಿಯ ಯುವ ಮೋರ್ಚಾ ವಿಶ್ವ ಹಿಂದು ಪರಿಷತ್‌ನ ಬಪ್ಪೆ ಚಲೋಗೆ ಬೆಂಬಲವನ್ನ ಘೋಷಿಸುತ್ತಿದೆ. ಎಲ್ಲಾ ಬಿಜೆಪಿ ಕಾರ್ಯಕರ್ತರು ಸುಹಾಸ್ ಶೆಟ್ಟಿಗೆ ನ್ಯಾಯ ಕೊಡಿಸಲು ಒಟ್ಟು ಸೇರೋಣ. ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನ NIA ಗೆ ರಾಜ್ಯ ಸರ್ಕಾರ ವಹಿಸುವವರೆಗೂ ಬಿಜೆಪಿ ಯುವಮೋರ್ಚಾ ಸುಮ್ಮನೆ ಕೂರುವುದಿಲ್ಲ. ವಿಶ್ವ ಹಿಂದೂ ಪರಿಷತ್ ಜೊತೆ ಭಾರತೀಯ ಜನತಾ ಪಾರ್ಟಿ ಸದಾ ಇರಲಿದೆ. ಇದು ನಿರಂತರ.. ಧರ್ಮೋ ರಕ್ಷತಿ ರಕ್ಷಿತಃ ಎಂದು ನಂದನ ಮಲ್ಯ ಹೇಳಿಕೆಯಲ್ಲಿ ತಿಳಿಸಿದ್ದಾರೆ.