ಮಂಗಳೂರು: ಮದುವೆಯ ವಿಚಾರದಲ್ಲಿ ಗಲಾಟೆ ನಡೆದು ಬ್ರೋಕರ್ ಸುಲೈಮಾನ್ ಎಂಬವರನ್ನು ಚೂರಿಯಿಂದ ಇರಿದು ಹತ್ಯೆಗೈದಿದ್ದ ಆರೋಪಿ ಅಡ್ಯಾರ್ ವಲಚ್ಚಿಲ್ ನಿವಾಸಿ ಮುಸ್ತಫಾ ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮಂಗಳೂರು ಹೊರವಲಯದ ವಳಚ್ಚಿಲ್ ಬಳಿ ತಡರಾತ್ರಿ ಘಟನೆ ನಡೆದಿದ್ದು ವಾಮಂಜೂರು ನಿವಾಸಿ ಸಲ್ಮಾನ್(60) ಕೊಲೆಯಾಗಿದ್ದರು. ಘಟನೆಯಲ್ಲಿ ಸಲ್ಮಾನ್ ಪುತ್ರರಾದ ರಿಯಾಬ್, ಸಿಯಾಬ್ ಕೂಡ ಚೂರಿ ಇರಿತಕ್ಕೆ ಒಳಗಾಗಿದ್ದು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮುಸ್ತಫ ಮತ್ತು ಸುಲೈಮಾನ್ ಸಂಬಂಧಿಕರಾಗಿದ್ದು 8 ತಿಂಗಳ ಹಿಂದೆ ಸುಲೈಮಾನ್ ಮುಂದೆ ನಿಂತು ಮುಸ್ತಫಾನ ಮದುವೆ ಮಾಡಿಸಿದ್ದ. ಆದರೆ ಮುಸ್ತಫಾನ ಪತ್ನಿ ಎರಡು ತಿಂಗಳ ಹಿಂದೆ ತವರು ಮನೆಗೆ ಹೋಗಿದ್ದು ಇದೇ ವಿಚಾರದಲ್ಲಿ ಗಲಾಟೆ ನಡೆದಿತ್ತು.
ನಿನ್ನೆ ರಾತ್ರಿ ಮುಸ್ತಫ ಜೊತೆ ಮಾತುಕತೆಗೆ ತನ್ನ ಪುತ್ರರೊಂದಿಗೆ ಸುಲೈಮಾನ್ ಬಂದಿದ್ದು ಈ ವೇಳೆ ಸಲ್ಮಾನ್ಗೆ ಮುಸ್ತಫ ಚೂರಿಯಿಂದ ಇರಿದು ಕೊಲೆ ಮಾಡಿದ್ದಾನೆ.