ಸುಹಾಸ್‌ ಹತ್ಯೆ ಪ್ರಕರಣದ ಎನ್‌ಐಎ ತನಿಖೆಗೆ ಆಗ್ರಹಿಸಿ ಮೇ 25ರಂದು ಬಜ್ಪೆಯಲ್ಲಿ ಬೃಹತ್‌ ಜನಾಗ್ರಹ ಸಭೆ

ಮಂಗಳೂರು: ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು NIA (ರಾಷ್ಟ್ರೀಯ ತನಿಖಾ ದಳ) ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿ ಬೃಹತ್‌ ಜನಾಗ್ರಹ ಸಭೆ ಮತ್ತು ಶ್ರದ್ಧಾಂಜಲಿ ಸಭೆಯು ಮೇ 25ರ ಭಾನುವಾರ ಸಂಜೆ 3 30 ಕ್ಕೆ ಬಜ್ಪೆ ಜಂಕ್ಷನಿನಲ್ಲಿರುವ ಶಾರದ ಮಂಟಪ ಬಳಿ ನಡೆಯಲಿದೆ. ಈ ಸಭೆಗೆ ಸುಹಾಸ್‌ ಶೆಟ್ಟಿ ಅಭಿಮಾನಿಗಳು, ಹಿಂದೂ ಕಾರ್ಯಕರ್ತರು ಬೃಹತ್‌ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ವಿಶ್ವಹಿಂದೂ ಪರಿಷತ್‌ನ ದ.ಕ. ಜಿಲ್ಲಾಧ್ಯಕ್ಷರಾಗಿರುವ ಎಚ್ ಕೆ.ಪುರುಷೋತ್ತಮ ಹೇಳಿದ್ದಾರೆ.

ಅವರು ಕದ್ರಿಯ ವಿಶ್ವಹಿಂದೂ ಪರಿಷತ್‌ನ ಕಾರ್ಯಾಲಯದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಾ, ಜನಾಗ್ರಹ ಸಭೆಯಲ್ಲಿ ಖ್ಯಾತ ವಾಗ್ಮಿ ಶ್ರೀಕಾಂತ್ ಶೆಟ್ಟಿ ಪ್ರಮುಖ ಭಾಷಣ ಮಾಡಲಿದ್ದು, ಪ್ರಾಸ್ತಾವಿಕವಾಗಿ ಮಂಗಳೂರು ವಿಭಾಗ ಸಹಕಾರ್ಯದರ್ಶಿ ಶಿವಾನಂದ್ ಮೆಂಡನ್ ಮಾತನಾಡಲಿದ್ದಾರೆ ಎಂದರು.

ಸಭೆಗೆ ಬರುವರಿಗೆ ಅಚ್ಚುಕಟ್ಟಿನ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ, ಕಾರ್ಯಕ್ರಮ ಸರಿಯಾಗಿ 3 :30 ಗಂಟೆಗೆ ಪ್ರಾರಂಭವಾಗಲಿದ್ದು 3:00 ರ ಒಳಗೆ ಬಜ್ಪೆಯ ಶಾರದ ಮಂಟಪವನ್ನು ತಲುಪಬೇಕು. ಮಂಗಳೂರು ಸುರತ್ಕಲ್ – ಕಾವೂರು ಭಾಗದಲ್ಲಿ ಬರುವ ವಾಹನಗಳಿಗೆ ಬಜ್ಪೆ ನಾರಾಯಣ ಗುರು ಮಂದಿರ ಬಳಿ, ಗುರುಪುರ – ವಾಮಂಜೂರು – ಮಳಲಿ ಕಡೆಯಿಂದ ಬರುವ ವಾಹನಗಳಿಗೆ ಸಂಜೀವ ಶೆಟ್ಟಿ ಸಭಾಭವನ ಮತ್ತು ಮೂರು ಮೈದಾನಗಳಲ್ಲಿ ಹಾಗೂ ಮುಲ್ಕಿ- ಮೂಡಬಿದ್ರೆಯಿಂದ ಬರುವ ವಾಹನಗಳಿಗೆ ಯಾದವ್ ಕೋಟ್ಯಾನ್ ಕನ್ನಿಕಾ ನಿಲಯ ಮೈದಾನ್ ಬಳಿ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಪಾರ್ಕಿಂಗ್ ಸೂಚನಾ ಫಲಕಗಳನ್ನು ಹಾಕಲಾಗುವುದು ಎಂದು ಎಚ್ ಕೆ.ಪುರುಷೋತ್ತಮ ಹೇಳಿದರು.

ಸುಹಾಸ್‌ ಶೆಟ್ಟಿ ಹತ್ಯೆ ಪ್ರಕರಣವನ್ನು ಪ್ರವೀಣ್‌ ನೆಟ್ಟಾರ್‌ ಮಾದರಿ ಎನ್‌ಐಎಗೆ ಒಪ್ಪಿಸಿದರೆ ಇನ್ನಷ್ಷ್ಟು ಮಂದಿ ಅರೆಸ್ಟ್‌ ಆಗುವ ಆಗಲಿದ್ದಾರೆ. ಪೊಲೀಸ್‌ ಇಲಾಖೆಯ ಮೇಲೆ ನಮಗೆ ವಿಶ್ವಾಸವಿಸದ್ದರೂ ಸರ್ಕಾರದ ಮೇಲೆ ವಿಶ್ವಾಸವಿಲ್ಲ. ಅವರು ಪೊಲೀಸರ ಮೇಲೆ ಒತ್ತಡ ಹಾಕಿ ಆರೋಪಿಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ. ಈ ಕೊಲೆಗೆ 50 ಲಕ್ಷಕ್ಕಿಂತಲೂ ಹಣ ಸಂಗ್ರಹ ಮಾಡಲಾಗಿದೆ, ಈ ಕೊಲೆಯನ್ನು ತರಬೇತಿ ಮಾಡಿದವರೇ ಮಾಡಿದ್ದಾರೆ. ಇದನ್ನು ಭೇದಿಸಲು ಎನ್‌ಐಎ ತನಿಖೆ ಸೂಕ್ತ ಎಂದು ಪುರುಷೋತ್ತಮ್‌ ಹೇಳಿದ್ದಾರೆ.

ಸಭೆಯನ್ನು ಬಜ್ಪೆಯಲ್ಲಿಯೇ ಯಾಕೆ ಮಾಡ್ಬೇಕು? ಪೊಲೀಸ್‌ ಅನುಮತಿ ಇದೆಯಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಪೊಲೀಸರಿಗೆ ಮನವಿ ಸಲ್ಲಿಸಲಾಗಿದ್ದು, ಅವರು ಅನುಮತಿ ಕೊಡುವ ವಿಶ್ವಾಸವಿದೆ. ಸುಹಾಸ್‌ ಶೆಟ್ಟಿಯ ಮುಖ್ಯ ಕಾರ್ಯಕ್ಷೇತ್ರ ಬಜ್ಪೆ ಆಗಿರುವುದರಿಂದ ಇಲ್ಲಿಯೇ ಪ್ರತಿಭಟನೆ ನಡೆಸಲಿದ್ದೇವೆ ಎಂದು ನುಡಿದರು.

ಬಜರಂಗದ ದಳದ ದ.ಕ. ಸಹ ಪ್ರಾಂತ ಸಂಯೋಜಕ್‌ ಭುಜಂಗ ಕುಲಾಲ್‌ ಮಾತನಾಡಿ, ಹಿಂದೂ ಕಾರ್ಯಕರ್ತರ ಹತ್ಯೆಯ ಆರೋಪಿಗಳು ಬಜ್ಪೆಯ ಕಿನ್ನಿಪದವಿನಲ್ಲಿಯೇ ಇರುವುದು ನಮ್ಮ ಗಮನಕ್ಕೆ ಬಂದಿದೆ. ಸುಹಾಸ್‌ ಹತ್ಯೆ ವಿಡಿಯೋದಲ್ಲಿ ಅನೇಕ ಮಂದಿ ಇರುವುದು, ಇಬ್ಬರು ಹೆಂಗಸರು ಕಂಡುಬಂದಿದ್ದು, ಇವರ ಬಂಧನ ಆಗಿಲ್ಲ. ಕೇವಲ ಎಂಟು ಮಂದಿಯನ್ನು ಬಂಧಿಸಿದ್ದು, ಇಬ್ಬರು ಹಿಂದೂಗಳನ್ನು ಫಿಕ್ಸ್‌ ಮಾಡಲಾಗಿದೆ. ಹಾಗಾಗಿ ಈ ತನಿಖೆಯನ್ನು ಎನ್‌ಐಗೆ ವಹಿಸಬೇಕು. ಈಗಾಗಲೇ ಸುಹಾಸ್‌ ಶೆಟ್ಟಿ ತಂದೆ ತಾಯಿ ಈ ಬಗ್ಗೆ ರಾಜ್ಯಪಾಲರಿಗೆ ಮನವಿ ಮಾಡಿದ್ದು, ಎನ್‌ಐಎಗೆ ಒಪ್ಪಿಸುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.

ಜಿಲ್ಲಾ ಕಾರ್ಯದರ್ಶಿ ರವಿ ಅನ್ನಿಗೋಳಿ, ಜಿಲ್ಲಾ ಉಪಾಧ್ಯಕ್ಷ ಮನೋಹರ್ ಸುವರ್ಣ, ಜಿಲ್ಲಾ ಸಂಯೋಜಕ ನವೀನ್‌ ಮೂಡುಶೆಡ್ಡೆ ಉಪಸ್ಥಿತರಿದ್ದರು.

error: Content is protected !!