ಮಂಗಳೂರು: ಮಂಗಳೂರಿನಲ್ಲಿ ಹಲಸು ತಿನ್ನುವ, ಎತ್ತುವ, ಬಿಡಿಸುವ, ತೂಕ ಮಾಡುವ, ಹಲಸಿನ ಎಲೆಯ ಮೂಡೆ ಮಾಡುವ, ಮಕ್ಕಳಿಗೆ ಪ್ರಬಂಧ, ಭಾಷಣ, ಚಿತ್ರ ಬಿಡಿಸುವ ಸೇರಿ 10 ವಿಭಾಗಳಲ್ಲಿ 9 ರೀತಿಯ ಸ್ಪರ್ಧೆ ನಡೆಯಲಿದೆ. ಎಲ್ಲಾ ಸ್ಪರ್ಧಾ ವಿಜೇತರಿಗೆ ಬಹುಮಾನ, ಸ್ಮರಣಿಕೆಯನ್ನು ನೀಡಿ ಪುರಸ್ಕರಿಸಲಾಗುವುದು. ಪಾಲ್ಗೊಂಡ ಎಲ್ಲಾ ಸ್ಪರ್ಧಿಗಳಿಗೆ ಪ್ರಮಾಣಪತ್ರ, ಪದಕ ಕೊಡಲಾಗುತ್ತದೆ. ಹಲಸಿನ ಎರಡು ವಿಭಾಗದಲ್ಲಿ, ಸ್ಪರ್ಧಾ ವಿಜೇತರಿಗೆ ನಗದು ಪುರಸ್ಕಾರ ನೀಡಲಾಗುವುದು ಎಂದು ಸಾವಯವ ಕೃಷಿಕ ಗ್ರಾಹಕ ಬಳಗದ ಕಾರ್ಯದರ್ಶಿ ಕೆ. ರತ್ನಾಕರ ಕುಳಾಯಿ ಹೇಳಿದರು.
ಅವರು ಮಂಗಳೂರಿನ ಪ್ರೆಸ್‌ಕ್ಲಬ್‌ನ ಸಾವಯವ ಕೃಷಿಕ ಗ್ರಾಹಕ ಬಳಗ ಮಂಗಳೂರು ವತಿಯಿಂದ ಮೇ 24 ಮತ್ತು 25ರಂದು ನಗರದ ಶ್ರೀ ಶರವು ದೇವಸ್ಥಾನದ ಬಳಿಯ ಬಾಳಂಭಟ್ ಹಾಲ್ ನಲ್ಲಿ ನಡೆಯಲಿರುವ ಎಂಟನೇ ವರ್ಷದ ‘ಹಲಸು ಹಬ್ಬ’ದ ಕುರಿತು ಮಾಹಿತಿ ನೀಡಿದರು.
ಬಳಗದ ಧ್ಯಕ್ಷ ಜಿ.ಆರ್. ಪ್ರಸಾದ್ ಈ ಬಗ್ಗೆ ಮಾಹಿತಿ, ಮೇ 24ರಂದು ಬೆಳಗ್ಗೆ 9:30ಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ್ ಕೆ. ಮೇಳವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಟ ಸ್ವರಾಜ್ ಶೆಟ್ಟಿ ಹಾಗೂ ದೇಸಿ ಭತ್ತದ ತಳಿಯ ಸಂರಕ್ಷಕಿ ಆಸ್ಮ ಬಾನು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಳಗದ ಅಧ್ಯಕ್ಷ ಜಿ.ಆರ್. ಪ್ರಸಾದ್ ವಹಿಸಲಿದ್ದು, ಬಳಗದ ಗೌರವ ಮಾರ್ಗದರ್ಶಕ ಪ್ರದೀಪ್ ಕುಮಾರ್ ಕಲ್ಕೂರ ಮತ್ತು ಗೌರವಾಧ್ಯಕ್ಷ ಅಡ್ಡೂರು ಕೃಷ್ಣ ರಾವ್ ಉಪಸ್ಥಿತರಿರುವರು. ಹಲಸು ತಳಿ ಸಂಶೋಧಕ, ನಿವೃತ್ತ ಅರಣ್ಯಾಧಿಕಾರಿ ಗ್ಯಾಬ್ರಿಯಲ್ ಸ್ಟ್ಯಾನಿ ವೇಗಸ್ ಅವರಿಗೆ ಗೌರವ ಸಮ್ಮಾನ ನೆರವೇರಲಿದೆ. ಮೇಳದಲ್ಲಿ ರಾಜ್ಯಾದ್ಯಂತದ ರೈತರು ಭಾಗವಹಿಸಲಿದ್ದು, ವಿವಿಧ ಬಗೆಯ ಹಲಸಿನ ತಿಂಡಿಗಳ ವಿತರಣೆ, ಮಾರಾಟ ಮೇಳೆ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕೋಶಾಧ್ಯಕ್ಷ ಶರತ್ ಕುಮಾರ್, ಟ್ರಸ್ಟ್ ನಿರ್ದೇಶಕರಾದ ದಾಕ್ಷಾಯಿಣಿ ವಿಶ್ವೇಶ್ವರ್, ಜಯಶ್ರೀ, ಸದಸ್ಯ ಪ್ರವೀಣ್ ಉಪಸ್ಥಿತರಿದ್ದರು.
For Video Click Here: