“ಛಲವಾದಿ ಮೇಲೆ ಹಲ್ಲೆ ಖಂಡನೀಯ“ – ಡಾ.ಭರತ್ ಶೆಟ್ಟಿ ವೈ

ಪ್ರಧಾನಿ ನರೇಂದ್ರ ಮೋದಿ ಅವರನ್ನು ಪನೌತಿ ಎಂದು ಕರೆದು ಅವಮಾನ ಮಾಡಿದ ಕಾಂಗ್ರೆಸ್ ನಾಯಕರನ್ನು ಉಲ್ಲೇಖಿಸಿ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರು ಆನೆ ನಾಯಿಯ ಗಾದೆ ಮಾತು ಹೇಳಿದರೆ ಆಕ್ರೋಶ ಯಾಕೆ ಎಂದು ಶಾಸಕ ಡಾ.ಭರತ್ ಶೆಟ್ಟಿ ಪ್ರಶ್ನಿಸಿದ್ದಾರೆ.


ಪ್ರಿಯಾಂಕ ಖರ್ಗೆ ಅವರಿಗೆ ಗಾದೆ ಮಾತು ಮೂಲಕ ಛಲವಾದಿ ನಾರಾಯಣ ಸ್ವಾಮಿ ಟೀಕಿಸಿದ್ದಕ್ಕೆ ಅವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿರುವುದನ್ನು ಖಂಡಿಸುತ್ತೇನೆ.ಕಾಂಗ್ರೆಸ್ ನಾಯಕರು ಯಡಿಯೂರಪ್ಪ ,ಈಗಿನ ಅಧ್ಯಕ್ಷ ವಿಜಯೇಂದ್ರ ಸೇರಿದಂತೆ ಬಿಜೆಪಿ ನಾಯಕರಿಗೆ ಅಸಭ್ಯ ರೀತಿಯಲ್ಲಿ ಟೀಕಿಸಿ ಸಂತೋಷ ಪಡುತ್ತಾರೆ.

ದೇಶದಲ್ಲಿ ಪ್ರಧಾನಿಗೂ ಅವರದ್ದೇ ಆದ ಗೌರವಾದರಗಳಿವೆ ,ಅವರನ್ನು ಟೀಕೆ ಮಾಡುವ ಭರದಲ್ಲಿ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಇದೀಗ ತಮಗೆ ಟೀಕೆ ಬಂದಾಗ ಆಕ್ರೋಶಗೊಳ್ಳುತ್ತದೆ,ಕಾಂಗ್ರೆಸ್ ಕಾರ್ಯಕರ್ತರ ಮೂಲಕ ವಿಪಕ್ಷ ನಾಯಕರಿಗೇ ಹಲ್ಲೆ ನಡೆಸಲು ಮುಂದಾಗುತ್ತದೆ.ಇಂತಹ ಕೃತ್ಯಗಳನ್ನು ಸಹಿಸಲು ಸಾಧ್ಯವಿಲ್ಲ.ಪೊಲೀಸ್ ಇಲಾಖೆಯೂ ಇಂತಹ ಘಟನೆ ನಡೆಯದಂತೆ ತಡೆಯುವ ಬದಲು ಐಬಿ ಒಳಗೆ ನುಗ್ಗಿ ದರೂ ಏನೂ ಮಾಡದೆ ನೋಡುತ್ತಾ ಮೂಕ ಪ್ರೇಕ್ಷಕರಾಗಿದ್ದಾರೆ.ಬಿಜೆಪಿ ಕಾರ್ಯಕರ್ತರು ಕೇಸು ದಾಖಲಿಸಲು ಹೋದರೆ ಗಂಟೆ ಗಟ್ಟಲೆ ಕಾಯುವಂತೆ ಮಾಡುವ ಅಧಿಕಾರಿಗಳು ಕಾಂಗ್ರೆಸ್ ಸರಕಾರ,ಕಾಂಗ್ರೆಸ್ ಕಾರ್ಯಕರ್ತರ ದೂರಗಳು ಎಫ್ ಐ ಆರ್ ಆಗಿ ಬದಲಾಗುತ್ತದೆ. ಹೀಗಾಗಿ ಸಾಮಾನ್ಯ ಜನರು ಇರಲಿ ,ವಿಪಕ್ಷ ನಾಯಕರು ,ಶಾಸಕರೂ ಇರಲಿ ಯಾರಿಗೂ ಭದ್ರತೆ ಇಲ್ಲೆಂದತಾಗಿದೆ ಎಂದು ಟೀಕಿಸಿದ್ದಾರೆ.

error: Content is protected !!