ಸುರತ್ಕಲ್: ಪಣಂಬೂರಿಗೆ ಸಮೀಪದ ಮೀನಕಳಿಯದ ದಿವಂಗತ ವಿಜಯ ಕೋಟ್ಯಾನ್ ಎಂಬವರ ಮನೆಯ ಹಿಂಭಾಗದಲ್ಲಿ ಡೆಲ್ಟಾ ಸಂಸ್ಥೆ ಸಮತಟ್ಟು ಮಾಡಿರುವ ಮಣ್ಣು ಕುಸಿದ ಪರಿಣಾಮ ಮನೆಯವರು ಆತಂಕಕ್ಕೆ ಒಳಗಾಗಿದ್ದಾರೆ.
ಮನೆಯ ಹಿಂಭಾಗದಲ್ಲಿ ಡೆಲ್ಟಾ ಸಂಸ್ಥೆಯು ಮಣ್ಣನ್ನು ನೆಲಸಮ ಮಾಡಿ ಬಿಟ್ಟಿದ್ದು ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮಣ್ಣು ತೇವಗೊಂಡು ಕುಸಿದು ಮನೆಯ ಹಿಂಭಾಗಕ್ಕೆ ಬಿದ್ದಿದೆ. ಇನ್ನೂ ಒಂದೆರಡು ದಿನಗಳ ಕಾಲ ಭಾರೀ ಮಳೆಯ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದ್ದು ಸ್ಥಳೀಯರು ಈ ಘಟನೆಯಿಂದ ಆತಂಕ ವ್ಯಕ್ತಪಡಿಸಿದ್ದಾರೆ. ಸಂಬಂಧಪಟ್ಟ ಸಂಸ್ಥೆಯು ಮಣ್ಣು ಸಮತಟ್ಟುಗೊಳಿಸುವಾಗ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.