ನವದೆಹಲಿ: ಭಾರತೀಯ ವಾಯುಪಡೆ (IAF) ಮಂಗಳವಾರ ಆಪರೇಷನ್ ಸಿಂಧೂರ್‌ನ ಹೊಸ ವೀಡಿಯೊವನ್ನು ಬಿಡುಗಡೆ ಮಾಡಿದ್ದು, ಅದಕ್ಕೆ “ಭಾರತೀಯ ವಾಯುಪಡೆಯು ಯಾವಾಗಲೂ ದೃಢನಿಶ್ಚಯದಿಂದ ಪ್ರತಿಕ್ರಿಯಿಸುತ್ತದೆ” ಎಂಬ ಶೀರ್ಷಿಕೆ ನೀಡಿದೆ. ಅಲ್ಲದೆ ಆಪರೇಷನ್ ಸಿಂಧೂರ್ ಇನ್ನೂ ಮುಂದುವರಿದಿದೆ ಎಂದು ದೃಢಪಡಿಸಿದೆ.
IAFನ ಅಧಿಕೃತ X ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಲಾದ ವೀಡಿಯೊ, ಆಪರೇಷನ್ ಸಿಂಧೂರ್‌ನಲ್ಲಿ ಬಳಸಲಾದ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸಿತು.
ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಮಿಲಿಟರಿ ನೆಲೆಗಳು ಮತ್ತು ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿಕೊಂಡು ತಾನು ನಡೆಸಿದ ನಿಖರ ದಾಳಿಯ ಬಗ್ಗೆ ವಿಡಿಯೋದಲ್ಲಿ ವಿವರಿಸಲಾಗಿದೆ. ಏಪ್ರಿಲ್ 22 ರಂದು 26 ಜನರನ್ನು ಬಲಿತೆಗೆದುಕೊಂಡ ಪಹಲ್ಗಾಮ್ ದಾಳಿಗೆ ಪ್ರತೀಕಾರ ತೀರಿಸಿರುವುದರ ಪುರಾವೆಯಾಗಿ ಈ ವಿಡಿಯೋವನ್ನು IAF ಬಿಡುಗಡೆ ಮಾಡಿದೆ. ಕಲ್ಪನೆಗೂ ಮೀರಿ ಶತ್ರುಗಳನ್ನು ಗುರಿಯಾಗಿಸಾಗಿಸಲಾಗಿದೆ ಎಂದು ವಿಡಿಯೋದಲ್ಲಿ ವಿವರಿಸಲಾಗಿದೆ. ಅಲ್ಲದೆ ಆಪರೇಷನ್ ಸಿಂಧೂರ್ ಇನ್ನೂ ಮುಂದುವರೆದಿದೆ ಎಂದು ದೃಢಪಡಿಸಿದೆ.
IAF ನಿಂದ ಹಾನಿಗೊಳಗಾದ ಪಾಕ್ ವಾಯುನೆಲೆಗಳು
ಭಾರತವು ನೂರ್ ಖಾನ್ ವಾಯುನೆಲೆಯ ಮೇಲೆ ದಾಳಿ ಮಾಡಿದೆ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಒಪ್ಪಿಕೊಂಡ ಒಂದು ದಿನದ ನಂತರ, ತನ್ನ ಹಾನಿಗೀಡಾದ ಮಿಲಿಟರಿ ನೆಲೆಗಳನ್ನು ದುರಸ್ಥಿ ಮಾಡಲು ಪಾಕಿಸ್ತಾನ ಟೆಂಡರ್ ಕರೆದು ಹಾನಿಯ ಪುರಾವೆಯನ್ನು ನೀಡಿತು.
ಮೇ 12 ಮತ್ತು ಮೇ 14 ರ ನಡುವೆ, ರಾವಲ್ಪಿಂಡಿ, ರಿಸಾಲ್ಪುರ್ ಮತ್ತು ಕಲ್ಲರ್ ಕಹಾರ್‌ನಲ್ಲಿರುವ ಪ್ರಮುಖ ಮಿಲಿಟರಿ ಮತ್ತು ವಾಯುನೆಲೆಗಳಲ್ಲಿ ದುರಸ್ತಿ ಮತ್ತು ನಿರ್ವಹಣಾ ಕಾರ್ಯಕ್ಕಾಗಿ ಪಾಕಿಸ್ತಾನ ಸುಮಾರು ಐದು ಟೆಂಡರ್‌ಗಳನ್ನು ಆಹ್ವಾನಿಸಿದೆ – ಇವೆಲ್ಲವೂ IAF ದಾಳಿಯ ಸಮಯದಲ್ಲಿ ಹಾನಿಗೊಳಗಾಗಿವೆ ಎಂದು ವರದಿಯಾಗಿದೆ.
IAF Xನಲ್ಲಿ ಹಂಚಿಕೊಂಡು ವಿಡಿಯೋಗಾಗಿ ಇಲ್ಲಿ ಕ್ಲಿಕ್ಕಿಸಿ: