ಸುರತ್ಕಲ್ : ಇತ್ತೀಚಿಗೆ ಬಜಪೆಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಹತ್ಯೆ ಪ್ರಕರಣದಲ್ಲಿ ಘಟನಾ ಸ್ಥಳದಲ್ಲಿ ಕಾಣಿಸಿ ಕೊಂಡ ಬುರ್ಖಾಧಾರಿ ಮಹಿಳೆಯರನ್ನು ಯಾಕೆ ಬಂಧಿಸಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಉದ್ದೇಶಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿದ್ದ ಬಿಜೆಪಿ ಮಹಿಳಾಮೋರ್ಚಾ ರಾಜ್ಯ ಕಾರ್ಯದರ್ಶಿ ವಿರುದ್ಧ ಶ್ವೇತಾ ಪೂಜಾರಿ ಮೇಲೆ ಕಾಂಗ್ರೆಸ್ ಒತ್ತಡದಿಂದ ಎಫ್ ಐಆರ್ ದಾಖಲಾಗಿದ್ದು ಶಾಸಕರು, ಬಿಜೆಪಿ ಮುಖಂಡರು ಖಂಡಿಸಿದ್ದಾರೆ.
ಜಿಲ್ಲಾ ಉದ್ಯವಾರಿ ಸಚಿವರು ಪ್ರಶ್ನಾತೀತರೆ?. ನಮ್ಮ ಬಿಜೆಪಿ ಪಕ್ಷದ ಪದಾಧಿಕಾರಿಗಳು ಪ್ರಶ್ನಿಸಿದರೆ ಕೇಸು ದಾಖಲಾಗುತ್ತದೆ. ಆದೇ ಕಾಂಗ್ರೆಸ್ ಪರ ಇರುವವರು ಏನೂ ಬರೆದು ಹಾಕಿ ಗಲಭೆ ಸೃಷ್ಟಿಸಿ,ಜೈಲಿನಲ್ಲಿದ್ದರೂ ಈ ಸರಕಾರದಿಂದ ಬಿಡುಗಡೆ ಭಾಗ್ಯವಡೆಯುತ್ತಾರೆ. ಪ್ರಶ್ನೆ ಕೇಳುವುದು ತಪ್ಪಾದರೆ ನೂರಾರು ಪ್ರಶ್ನೆ ಕೇಳುತ್ತೇವೆ ಎಷ್ಟು ಕೇಸು ಹಾಕುತ್ತೀರಿ ನೋಡುತ್ತೇವೆ ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕರಾದ ಡಾ.ಭರತ್ ಶೆಟ್ಟಕ್ಕೆ ಸವಾಲು ಹಾಕಿದ್ದಾರೆ.
ಬಿಜೆಪಿ ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ, ಉಪಾಧ್ಯಕ್ಷರಾದ ಪೂಜಾ ಪೈ, ತಿಲಕ್ ರಾಜ್ ಕೃಷ್ಣಾಪರ, ಉತ್ತರ ಮಂಡಲ ಅಧ್ಯಕ್ಷರಾಜೇಶ್ ಕೋಠಾರಿ, ಪ್ರಧಾನ ಕಾರ್ಯದರ್ಶಿಗಳಾದ ಸಂದೀಪ್ ಪಚ್ಚನಾಡಿ ,ರಣ್ ದೀಪ್ವ ಕಾಂಚನ್, ಬಿಜೆಪಿ ಮಹಿಳಾ ಮೋರ್ಚಾ ಆಕ್ರೋಶ ವ್ಯಕ್ತ ಪಡಿಸಿದ್ದು. ಹಿಂದುತ್ವದ ಪರ ಹೋರಾಟ ಮಾಡುವವರನ್ನು ದಮನಿಸುವ ಕೆಲಸಕ್ಕೆ ಕಾಂಗ್ರೆಸ್ ಕೈ ಹಾಕಿದರೆ ಪ್ರತಿ ಹೋರಾಟವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.