ಕಲ್ಲು ಕ್ವಾರಿಯಲ್ಲಿ  ಬಂಡೆಗಳು ಕುಸಿದು ಐವರು ಸಾವು, ಇಬ್ಬರು ಗಂಭೀರ

ಶಿವಗಂಗಾ (ತಮಿಳುನಾಡು): ಜಿಲ್ಲೆಯ ಕಲ್ಲು ಕ್ವಾರಿ ಸ್ಥಳದಲ್ಲಿ ಮಂಗಳವಾರ ಇದ್ದಕ್ಕಿದ್ದಂತೆ ಬಂಡೆಗಳು ಕುಸಿದು ಐವರು ಸಾವಿಗೀಡಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಿಲ್ಲೆಯ ಸಿಂಗಂಪುನಾರಿ ಬಳಿಯ ಮಲ್ಲಕೊಟ್ಟೈನಲ್ಲಿರುವ ಕ್ವಾರಿ ಸ್ಥಳದಲ್ಲಿ ಸಂತ್ರಸ್ತರು, ಹೆಚ್ಚಾಗಿ ಕಾರ್ಮಿಕರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ.

ಪೊಲೀಸರು ಮತ್ತು ಅಗ್ನಿಶಾಮಕ ಮತ್ತು ರಕ್ಷಣಾ ಸೇವಾ ಸಿಬ್ಬಂದಿ ಕಲ್ಲುಗಳನ್ನು ತೆರವುಗೊಳಿಸಿದ ನಂತರ ಮೂವರ ಶವಗಳನ್ನು ಹೊರತೆಗೆದಿದ್ದಾರೆ.

ಇಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವಿಗೀಡಾದರೆ, ಗಂಭೀರವಾಗಿ ಗಾಯಗೊಂಡ ಇನ್ನಿಬ್ಬರನ್ನು ಮಧುರೈ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾತ್ರಿಯಿಡೀ ಬಿದ್ದ ಮಳೆ ಅಥವಾ ಕಾರ್ಮಿಕರು ಬಳಸಿದ ಸ್ಫೋಟಕಗಳೇ ಕುಸಿತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದ್ದು, ಈ ಸಂಬಂಧ ತನಿಖೆ ನಡೆಯುತ್ತಿದೆ.

error: Content is protected !!