ಗುರುಪುರ: ಮಂಗಳೂರು ತಾಲೂಕು ಗುರುಪುರ ನಾಡ ಕಚೇರಿಗೆ ಮೂಲಭೂತ ಸೌಕರ್ಯ ಹಾಗೂ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ 2020- 21ನೇ ಸಾಲಿನಲ್ಲಿ 18.84. ಲಕ್ಷ ಅನುದಾನವನ್ನು ಬಿಡುಗಡೆ ಮಾಡಿ ಗುದ್ದಲಿ ಪೂಜೆಯನ್ನು ನೆರವೇರಿಸಿತ್ತು.
ಇದೀಗ ಹೊಸ ನಾಡಕಚೇರಿ ಕಟ್ಟಡದ ಕಾಮಗಾರಿಗಳು ಮುಕ್ತಾಯಗೊಂಡು ಇಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ವೈ ಭರತ್ ಶೆಟ್ಟಿಯವರ ಉಪಸ್ಥಿತಿಯಲ್ಲಿ ಗುರುಪುರ ನಾಡ ಕಚೇರಿ ಕಟ್ಟಡ ವಾಸ್ತು ಪೂಜೆ, ಸುದರ್ಶನ ಹೋಮ, ಗಣಪತಿ ಹೋಮ ನೆರವೇರಿ, ಜನ ಸೇವೆಗಾಗಿ ಲೋಕಾರ್ಪಣೆ ಗೊಂಡಿತು.
ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷರಾದ ಶಾಲಿನಿ.ಎಸ್, ಉಪಾಧ್ಯಕ್ಷರಾದ ಉದಯ ಆರ್ ರಾವ್,ಪಂ.ಸದಸ್ಯರಾದ ಸುದರ್ಶನ್ , ರಮೇಶ್. ಪ್ರಮುಖರಾದ ಸೋಹನ್ ಅಧಿಕಾರಿ, ಮಾಧವ ಕಾಜಿಲ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು,