ಮಂಗಳೂರು: ಭಾರತದ ನಂ.1 ಫರ್ನಿಚರ್ ಬ್ರಾಂಡ್ ಆಗಿರುವ ರಾಯಲ್‌ಓಕ್ ಫರ್ನಿಚರ್ ಸಂಸ್ಥೆಯು ಮಂಗಳೂರಿನ ಮ್ಯಾಕ್ ಮಾಲ್‌ನಲ್ಲಿ ಹೊಸ ಮಳಿಗೆಯನ್ನು ಉದ್ಘಾಟಿಸಿದೆ. ಈ ಮಳಿಗೆಯು ದೇಶದ 179ನೇ ಹಾಗೂ ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಯಲ್‌ಓಕ್ ನ 59ನೇ ಮಳಿಗೆಯಾಗಿದೆ.
ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮ್ಯಾಕ್ ಇನ್‌ಫ್ರಾರಿಯಲ್ಟಿ ಪೈ. ಲಿ.ನ ಎಂ.ಡಿ. ಮೊಹಮ್ಮದ್ ಅರಬಿ ಕೆ. ಮಾತಾಡಿ, “ಮಂಗಳೂರಿನ ಜನರಿಗೆ ದೊಡ್ಡದಾದ ಶೋರೂಮ್ ನಲ್ಲಿ ಮನೆಗೆ ಬೇಕಾಗುವ ನವನವೀನ ಶೈಲಿಯ ಫರ್ನಿಚರ್ ಗಳನ್ನು ಒಂದೇ ಸೂರಿನಡಿ ಖರೀದಿ ಮಾಡಲು ಅವಕಾಶ ಇಲ್ಲಿದೆ. ಮ್ಯಾಕ್ ಮಾಲ್ ನಲ್ಲಿ ಹೋಮ್ ಡೆಕೋರ್ ಮತ್ತು ಫರ್ನಿಚರ್ ಕಲೆಕ್ಷನ್ ಒಳಗೊಂಡಿದೆ” ಎಂದರು.
ರಾಯಲ್ ಓಕ್ ಇನ್ ಕಾರ್ಪೊರೇಷನ್ ಪ್ರೈ.ಲಿ.ನ ಚೇರ್ ಮನ್ ಶ್ರೀ ವಿಜಯ್ ಸುಬ್ರಮಣಿಯಂ ಅವರು, “ಕರ್ನಾಟಕದಲ್ಲಿ ಮತ್ತೊಂದು ಮಳಿಗೆ ಉದ್ಘಾಟನೆಗೊಂಡಿರುವುದು ನಮಗೆ ಹರ್ಷ ತಂದಿದೆ. ಕರ್ನಾಟಕದಲ್ಲಿ ನಾವು ಈಗ ಸುಮಾರು 60 ಮಳಿಗೆಗಳ ಬಲವಾದ ಜಾಲವನ್ನು ಹೊಂದಿದ್ದೇವೆ. ಈ ಮಳಿಗೆಯಲ್ಲಿ ಮಂಗಳೂರಿನ ಜನರು ಅಂತರರಾಷ್ಟ್ರೀಯ ಉತ್ಪನ್ನಗಳನ್ನು ಕೈಗೆಟುಕುವ ಬೆಲೆಯಲ್ಲಿ ತಮ್ಮದಾಗಿಸಿಕೊಳ್ಳುತ್ತಾರೆ ಎಂದು ಭಾವಿಸುತ್ತೇವೆ ಮತ್ತು ಇಲ್ಲಿನ ಗ್ರಾಹಕರನ್ನು ಎದುರುಗೊಳ್ಳಲು ಉತ್ಸುಕರಾಗಿದ್ದೇವೆ” ಎಂದು ಹೇಳಿದರು.
ನವೀನ್ ಮಾತಾಡಿ, “ಇಡೀ ದೇಶದಲ್ಲಿ ಪ್ರಥಮ ಬಾರಿಗೆ ಮಾಲ್ ನಲ್ಲಿ ಪ್ರಥಮ ಶೋರೂಮ್ ಆಗಿ ರಾಯಲ್ ಓಕ್ ಅನ್ನು ಇಲ್ಲಿ ಆರಂಭಸಲಾಗಿದೆ. ಆರಂಭದ ಹಿನ್ನೆಲೆಯಲ್ಲಿ ಇಲ್ಲಿ ಅತ್ಯಾಕರ್ಷಕ ಆಫರ್ ಗಳನ್ನು ನೀಡಲಾಗುತ್ತದೆ. ಮಂಗಳೂರಿನ ಜನರು ಇಲ್ಲಿಗೆ ಬಂದು ಪ್ರಯೋಜನ ಪಡೆದುಕೊಳ್ಳಿ“ ಎಂದರು.
ವಿಶಾಲವಾದ ಶೋರೂಮ್:
10,000 ಚದರ ಅಡಿಗಳಷ್ಟು ವಿಶಾಲವಾದ ವಿಸ್ತೀರ್ಣವನ್ನು ಹೊಂದಿರುವ ಈ ಮಳಿಗೆಯಲ್ಲಿ ಲಿವಿಂಗ್ ರೂಮ್, ಬೆಡ್ ರೂಮ್, ಡೈನಿಂಗ್ ಏರಿಯಾ, ಸ್ಟಡಿ & ಆಫೀಸ್, ಔಟ್‌ಡೋರ್, ಹೋಮ್ ಡೆಕೋರ್, ಮ್ಯಾಟ್ರೆಸ್ ಗಳು ಸೇರಿದಂತೆ ಮನೆಯ ಪ್ರತಿಯೊಂದು ವಿಭಾಗಕ್ಕೆ ಸಂಬಂಧಿಸಿದ ಫರ್ನಿಚರ್ ಗಳ ವ್ಯಾಪಕ ಶ್ರೇಣಿಯನ್ನು ಪ್ರದರ್ಶಿಸಲಾಗುತ್ತದೆ. ಮಂಗಳೂರಿನ ಮಂದಿ ಈಗ ತಮ್ಮ ಸಮೀಪದಲ್ಲಿಯೇ ಸ್ಟೈಲಿಶ್ ಆದ, ಸ್ಮಾರ್ಟ್ ಆದ ಮತ್ತು ತಮ್ಮ ಅಗತ್ಯಕ್ಕೆ ಸೂಕ್ತವಾದ ಫರ್ನಿಚರ್ ಗಳನ್ನು ಕೈಗೆಟುಕುವ ಬೆಲೆಯಲ್ಲಿ ಕಂಡುಕೊಳ್ಳಬಹುದು.
ಉದ್ಘಾಟನಾ ಕೊಡುಗೆಯಾಗಿ ಈ ಮಳಿಗೆಯಲ್ಲಿ ವಿವಿಧ ಶಾಪಿಂಗ್ ಗಳ ಮೇಲೆ 14,990 ರೂ. ಮೌಲ್ಯದ ಉಚಿತ ರಿಕ್ಲೈ ನರ್ ಗಳನ್ನು ಮತ್ತು 3,000 ರಿಂದ 7,000 ರೂ.ವರೆಗಿನ ಉತ್ಪನ್ನಗಳನ್ನು ಉಚಿತವಾಗಿ ನೀಡಲಾಗುತ್ತಿದೆ.ಈ ಮಳಿಗೆಯಲ್ಲಿ ವಿಶೇಷವಾದ ‘ಕಂಟ್ರಿ ಸ್ಕೋರ್’ ವಿಭಾಗವಿದ್ದು, ಇಲ್ಲಿ ಅಮೆರಿಕಾ, ಇಟಲಿ, ಮಲೇಷಿಯಾ ಮತ್ತು ಭಾರತದ ಉತ್ತಮ ಮತ್ತು ಅನನ್ಯ ಫರ್ನಿಚರ್ ಗಳನ್ನು ಪ್ರದರ್ಶಿಸಲಾತ್ತದೆ. ರಾಯಲ್‌ಓಕ್ ಭಾರತದಾದ್ಯಂತ ಇರುವ ಎಲ್ಲಾ ಮಹಾ ನಗರಗಳು ಮತ್ತು 2ನೇ 2 ಮತ್ತು 3ನೇ ಶ್ರೇಣಿಯ ನಗರಗಳಲ್ಲಿ ಉಪಸ್ಥಿತಿ ಹೊಂದಿದೆ.
ರಾಯಲ್‌ಓಕ್ ನ ಫ್ರಾಂಚೈಸ್ ಹೆಡ್ ಕಿರಣ್ ಛಾಬ್ರಿಯಾ, ರಾಯಲ್ ಓಕ್ ನ ವಿಎಂ & ಎನ್ ಎಸ್ ಓ ಹೆಡ್ ತಮ್ಮಯ್ಯ ಕೊಟೇರ ಮತ್ತು ರಾಯಲ್ ಓಕ್ ನ ಫ್ರಾಂಚೈಸ್ ಆಪರೇಷನ್ ಮ್ಯಾನೇಜರ್ ಮಹೇಶ್ ಪಂಡಿತ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಹೊಸ ಮಳಿಗೆ ವಿಳಾಸ:
ಮ್ಯಾಕ್ ಮಾಲ್, 2ನೇ ಮಹಡಿ, ಕಂಕನಾಡಿ, ಮಂಗಳೂರು. ದೂರವಾಣಿ: 81471 29098
ವಿಡಿಯೋ ವೀಕ್ಷಿಸಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ: