ಮಂಗಳೂರು: ಪಟ್ಲ ಫೌಂಡೇಶನ್ ನ ಆಧಾರ ಸ್ತಂಭ, ಯಕ್ಷಧ್ರುವ ದಶಮಾನೋತ್ಸವ ಸಮಿತಿಯ ಗೌರವಾಧ್ಯಕ್ಷರು, ಸಾವಿರಾರು ಕುಟುಂಬಗಳ ಕಣ್ಣೀರು ಒರೆಸಿ ಆ ಮನೆಗಳ ನಂದಾದೀಪವಾಗಿ ಬೆಳಗುತ್ತಿರುವ ಎಂಆರ್ ಜಿ ಗ್ರೂಪ್ ನ ಸಿಎಂಡಿ ಡಾ ಕೆ ಪ್ರಕಾಶ್ ಶೆಟ್ಟಿ ಅವರು ಯಕ್ಷಧ್ರುವ ಪಟ್ಲ ಫೌಂಡೇಶನ್ ನ ದಶಮ ಸಂಭ್ರಮಕ್ಕೆ 2 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.
ಈಗಾಗಲೇ ಸಾವಿರಾರು ಜನರಿಗೆ ದೇಶಾದ್ಯಾoತ ಉದ್ಯೋಗ ನೀಡಿ ಮಂಗಳೂರಿನ ಗೋಲ್ಡ್ ಪಿಂಚ್ ಸಿಟಿಯಲ್ಲಿ ಬೃಹತ್ ಐ ಟಿ ಪಾರ್ಕ್ ನಿರ್ಮಾಣ ಮಾಡುವ ಯೋಜನೆಯೊಂದಿಗೆ ಇನ್ನಷ್ಟು ನಮ್ಮ ಊರಿನ ಸಾವಿರಾರು ಯುವಕ ಯುವತಿಯರಿಗೆ ಉದ್ಯೋಗ ಕಲ್ಪಿಸುವ ಮಹಾಸಂಕಲ್ಪಕ್ಕೆ ಸಿದ್ಧರಾಗಿರುವ ಕೊರಂಗ್ರಪ್ಪಾಡಿಯ ಹೆಮ್ಮೆಯ ಕುವರ ಡಾ. ಪ್ರಕಾಶ್ ಶೆಟ್ಟಿಯವರು ಯಕ್ಷಧ್ರುವ ಪಟ್ಲ ಫೌಂಡೇಶನ್ ಪ್ರಾರಂಭವಾದ 10 ವರ್ಷಗಳಿಂದಲೂ ವಿಶೇಷ ಸಹಕಾರ ನೀಡಿ ಇಷ್ಟು ಎತ್ತರಕ್ಕೆ ಸಂಸ್ಥೆ ಬೆಳೆಯಲು ಕಾರಣೀ ಕರ್ತರಾಗಿದ್ದಾರೆ. ಕೆ ಪ್ರಕಾಶ್ ಯವರು ಯಕ್ಷಧ್ರುವ ಪಟ್ಲ ಫೌಂಡೇಶನ್ ದಶಮಾನೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ ಬಹಳಷ್ಟು ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ.
ಕೇಂದ್ರ ಸಮಿತಿಯ ಗೌರವಾಧ್ಯಕ್ಷರು ಡಾ. ಕನ್ಯಾನ ಸದಾಶಿವ ಶೆಟ್ಟಿಯವರ ಹಾಗೂ ದಶಮಾನ ಸಮಿತಿ ಅಧ್ಯಕ್ಷರು ಬರೋಡ ಶಶಿಧರ ಶೆಟ್ಟಿಯವರ ವಿಶೇಷ ಮನವಿ ಮತ್ತು ಪಟ್ಲರ ಮೇಲಿನ ಅಪಾರ ಪ್ರೀತಿ ಅಭಿಮಾನದಿಂದ ಡಾ ಕೆ ಪ್ರಕಾಶ್ ಶೆಟ್ಟಿಯವರು ಪಟ್ಲ ಫೌಂಡೇಶನ್ ಗೆ ವಿಶೇಷ ಸಹಕಾರ ನೀಡಿದ್ದಾರೆ ಎಂದು ಫೌಂಡೇಶನ್ ನ ಗೌರವಾಧ್ಯಕ್ಷ ಕನ್ಯಾನ ಸದಾಶಿವ ಶೆಟ್ಟಿ, ಅಧ್ಯಕ್ಷರಾದ ಬರೋಡ ಶಶಿಧರ ಶೆಟ್ಟಿ ಹಾಗೂ ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಪದಾಧಿಕಾರಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.