ಆಪರೇಷನ್‌ ಸಿಂಧೂರ್‌ಗೆ ಪಾಕ್‌ ವಾಯುನೆಲೆಗಳು ನುಚ್ಚುನೂರು: ರಿಪೇರಿಗಾಗಿ ಟೆಂಡರ್‌ ಕರೆದ ಪಾಕಿಸ್ತಾನ

ನವದೆಹಲಿ: ಭಾರತ ಪಾಕಿಸ್ತಾನದ ನೂರ್‌ ಖಾನ್‌ ವಾಯುನೆಲೆಗೆ ದಾಳಿ ಮಾಡಿದೆ ಎಂದು ಅಲ್ಲಿನ ಪ್ರಧಾನಿ ಶಹಬಾಜ್ ಷರೀಫ್ ಒಪ್ಪಿಕೊಂಡ ಬೆನ್ನಲ್ಲೇ IAF ಯಿಂದ ಹಾನಿಗೊಳಗಾದ ವಾಯು ಹಾಗೂ ಮಿಲಿಟರಿ ನೆಲೆಗಳನ್ನು ದುರಸ್ತಿ ಮಾಡಲು ಹೊಸ ಟೆಂಡರ್‌ಗಳನ್ನು ಕರೆದಿದೆ. ಇದು ಭಾರತ ನಡೆಸಿದ ದಾಳಿಗೆ ಹೊಸ ಪುರಾವೆ ಸಿಕ್ಕಂತಾಗಿದೆ.


ಭಾರತದ ರಾಜಸ್ಥಾನ, ಪಂಜಾಬ್ ಮತ್ತು ಜಮ್ಮು ಮತ್ತು ಕಾಶ್ಮೀರದ ಗಡಿಗಳ ಬಳಿ ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ದಾಳಿ ನಡೆಸಿತ್ತು. ಇದಕ್ಕೆ ಪ್ರತೀಕಾರವಾಗಿ ಭಾರತ ʻಆಪರೇಷನ್‌ ಸಿಂಧೂರ್‌ʼ ಹೆಸರಿನಲ್ಲಿ ಪಾಕಿಸ್ತಾನ ಪ್ರಮುಖ ವಾಯುನೆಲೆ ನೂರ್‌ ಖಾನ್‌ ಸೇರಿದಂತೆ ಹಲವು ವಾಯುನೆಲೆಗಳ ಮೇಲೆ ನಿಖರ ದಾಳಿ ನಡೆಸಿತ್ತು

ದಾಖಲೆಗಳ ಪ್ರಕಾರ, ಮೇ 12 ಮತ್ತು ಮೇ 14 ರ ನಡುವೆ ಐಎಎಫ್‌ನಿಂದ ಹಾನಿಗೊಳಗಾಗ ರಾವಲ್ಪಿಂಡಿ, ರಿಸಾಲ್ಪುರ್ ಮತ್ತು ಕಲ್ಲರ್ ಕಹಾರ್‌ನಲ್ಲಿರುವ ಪ್ರಮುಖ ಮಿಲಿಟರಿ ಮತ್ತು ವಾಯುನೆಲೆಗಳಲ್ಲಿ ದುರಸ್ತಿ ಮತ್ತು ನಿರ್ವಹಣಾ ಕಾರ್ಯಕ್ಕಾಗಿ ಪಾಕಿಸ್ತಾನ ಸುಮಾರು ಐದು ಬಹಿರಂಗ ಟೆಂಡರ್‌ಗಳನ್ನು ಆಹ್ವಾನಿಸಿದೆ. ಇವೆಲ್ಲವೂ IAF ದಾಳಿಯ ಸಮಯದಲ್ಲಿ ಹಾನಿಗೊಳಗಾಗಿವೆ ಎಂದು ವರದಿಯಾಗಿದೆ. ಟೆಂಡರ್‌ ನಲ್ಲಿ ತುರ್ತು ದುರಸ್ತಿ ಕಾರ್ಯ ಮಾಡುವಂತೆ ವಿವರಿಸಲಾಗಿದೆ. ಆಪರೇಷನ್ ಸಿಂಧೂರ್ ಅಡಿಯಲ್ಲಿ ಭಾರತದ ದಾಳಿಯಿಂದ ಉಂಟಾದ ವಿನಾಶಕ್ಕೆ ಪಾಕಿಸ್ತಾನದಿಂದ ಬಹಿರಂಗ ಪ್ರಮಾಣ ಸಿಕ್ಕಂತಾಗಿದೆ ಎಂದು ರಿಪಬ್ಲಿಕ್‌ವರ್ಲ್ಡ್‌ ವರದಿ ಮಾಡಿದೆ.

error: Content is protected !!