ಶ್ರಾವಸ್ತಿ: 31 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಂದು ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ, ಕೆಲವು ಭಾಗಗಳನ್ನು ಸುಟ್ಟು ಉಳಿದ ಭಾಗಗಳನ್ನುಯ ಉತ್ತರ ಪ್ರದೇಶದ ಶ್ರಾವಸ್ತಿಯಾದ್ಯಂತ ಎಲ್ಲೆಂದರಲ್ಲಿ ಎಸೆದು ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿದ ಕೃತ್ಯ ಬೆಳಕಿಗೆ ಬಂದಿದೆ.
ಪೊಲೀಸರ ಪ್ರಕಾರ, ಆರೋಪಿ ಸೈಫುದ್ದೀನ್(31) ಎಂಬಾತ ತನ್ನ ಪತ್ನಿ ಸಬೀನಾ(25)ಳನ್ನು ಲಕ್ನೋಗೆ ಜೊತೆಯಲ್ಲಿ ಕರೆದುಕೊಂಡು ಹೋಗಿ ಈ ಅಪರಾಧ ಎಸಗಿದ್ದಾನೆ. ಆತ ಪತ್ನಿಯ ದೇಹವನ್ನು ತುಂಡು ತುಂಡುಗಳಾಗಿ ಕತ್ತರಿಸಿ ಅದರ ಕೆಲವು ಭಾಗಗಳನ್ನು ಕಾಲುವೆಗೆ ಎಸೆದನು. ಉಳಿದ ಭಾಗಗಳನ್ನು ಶ್ರಾವಸ್ತಿ ಪ್ರದೇಶದ 10 ಕಿಲೋಮೀಟರ್‌ಗಳಷ್ಟು ವ್ಯಾಪ್ತಿಯಲ್ಲಿ ಚದುರಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೇ 14 ರಂದು ಸಂತ್ರಸ್ತೆಯ ಸಹೋದರ ಸಲಾವುದ್ದೀನ್ ಆಕೆಗೆ ಕರೆ ಮಾಡಿದಾಗ ಕೃತ್ಯ ಬೆಳಕಿಗೆ ಬಂದಿತು, ಸಬೀನಾಳ ಫೋನ್ ಸ್ವಿಚ್ ಆಫ್ ಆಗಿತ್ತು. ಅದೇ ದಿನ, ಸಲಾವುದ್ದೀನ್ ಆಕೆಯ ಮನೆಗೆ ಹೋದಾಗ, ದಂಪತಿ ಲಕ್ನೋಗೆ ತೆರಳಿರುವುದು ಕಂಡುಬಂದಿತು. ಆದಾಗ್ಯೂ, ಸಂಜೆ, ಆರೋಪಿ ಅದೇ ಪ್ರದೇಶದಲ್ಲಿ ಓಡಾಡುತ್ತಿರುವುದನ್ನು ಅವನು ನೋಡಿದನು. ಆದರೆ ಅವನ ಸಹೋದರಿಯ ಯಾವುದೇ ಸುಳಿವು ಸಿಗಲಿಲ್ಲ.
ಅನುಮಾನದ ಮೇರೆಗೆ, ಸಲಾವುದ್ದೀನ್ ಹತ್ತಿರದ ಪೊಲೀಸ್ ಠಾಣೆಯಲ್ಲಿ ಸಹೋದರಿ ಕಾಣೆಯಾದ ಬಗ್ಗೆ ದೂರು ನೀಡಿದ್ದನು. ಪೊಲೀಸರು ಆರೋಪಿಯನ್ನು ವಿಚಾರಣೆಗಾಗಿ ವಶಕ್ಕೆ ಪಡೆದಾಗ ದಾರಿ ತಪ್ಪಿಸುವ ಮಾಹಿತಿ ನೀಡುತ್ತಿದ್ದನು. ಆದರೆ ಎರಡು ದಿನಗಳ ವಿಚಾರಣೆಯ ನಂತರ ವಿಚಾರಣೆಯ ನಂತರ, ಆರೋಪಿಯು ಅಪರಾಧವನ್ನು ಒಪ್ಪಿಕೊಂಡನು ಎಂದು ಪೊಲೀಸರು ತಿಳಿಸಿದ್ದಾರೆ.
ತನ್ನ ಪತ್ನಿಯ ಕೈಗಳನ್ನು ಸುಟ್ಟು ಹತ್ತಿರದ ತೋಟದಲ್ಲಿ ಬಚ್ಚಿಟ್ಟಿದ್ದಾಗಿಯೂ ಸೈಫುದ್ದೀನ್ ಬಹಿರಂಗಪಡಿಸಿದ್ದಾನೆ. ಅಧಿಕಾರಿಗಳು ಸುಟ್ಟ ಕೈಯನ್ನು ವಶಪಡಿಸಿಕೊಂಡು ಆರೋಪಿಯನ್ನು ಜೈಲಿಗೆ ಕಳುಹಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತೆಯ ಕುಟುಂಬದ ಪ್ರಕಾರ, ಆಕೆಯ ಪತಿ ಮತ್ತು ಅತ್ತೆ ಮಾವಂದಿರು ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು. ಇದೇ ಕಾರಣಕ್ಕಾಗಿಯೇ ಅವನು ಅವಳನ್ನು ಕೊಂದು ಆಕೆಯ ದೇಹವನ್ನು ಸುಟ್ಟುಹಾಕಿ ಎಲ್ಲೆಂದರಲ್ಲಿ ಬಿಸಾಕಿದ್ದಾನೆ. ನಾವು ಸಬೀನಾಳ ಕೈಯನ್ನು ತೋಟದಲ್ಲಿ ಕಂಡುಕೊಂಡೆವು. ನಾನು ಮೇ 14 ರಂದು ರಾತ್ರಿ ದೂರು ದಾಖಲಿಸಿದ್ದೆ ಎಂದು ಸಲಾವುದ್ದೀನ್ ಹೇಳಿದ್ದಾನೆ.