ನವದೆಹಲಿ: ಆಪರೇಷನ್ ಸಿಂದೂರ್ ಮತ್ತು ಅರುಣಾಚಲ ಪ್ರದೇಶದ ಕುರಿತು ಕುರಿತು ನಕಲಿ ಸುದ್ದಿಗಳನ್ನು ಹರಡುತ್ತಿದ್ದ ಚೀನಾದ ಮುಖವಾಣಿಗಳಾದ ಗ್ಲೋಬಲ್ ಟೈಮ್ಸ್ ಮತ್ತು ಕ್ಸಿನ್ಹುವಾ ನ್ಯೂಸ್ ಅನ್ನು ಭಾರತ ಬುಧವಾರ ಎಕ್ಸ್‌ನಲ್ಲಿ ನಿರ್ಬಂಧಿಸಿದೆ.
ಆಪರೇಷನ್ ಸಿಂಧೂರ್ ಮಿಲಿಟರಿ ಕಾರ್ಯಾಚರಣೆಯ ಬಗ್ಗೆ ಗ್ಲೋಬಲ್ ಟೈಮ್ಸ್ ನಕಲಿ ಸುದ್ದಿಗಳನ್ನು ಪ್ರಕಟಿಸಿತ್ತು. ಆಗ ಭಾರತದ ಫ್ಯಾಕ್ಟ್ ಚೆಕರ್ಸ್‌ಗಳು ಚೀನಾದ ಬೊಗಳೆಯನ್ನು ಸಾಕ್ಷಿ ಸಮೇತ ಸುಳ್ಳು ಮಾಡುತ್ತಿದ್ದರು. ಆದರೂ ಮಾನ ಮರ್ಯಾದೆ ಇಲ್ಲದಂತೆ ಚೀನಾದ ಮುಖವಾಣಿ ಪಾಕಿಸ್ತಾನದ ವಾಯುಪಡೆ ಭಾರತದ ಯುದ್ಧವಿಮಾನವನ್ನು ಹೊಡೆದುರುಳಿಸಿದೆ ಎಂಬ ಸುಳ್ಳು ಸುದ್ದಿಯನ್ನು ಬಿತ್ತರಿಸಿತ್ತು.
ಬೀಜಿಂಗ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯು ಎಕ್ಸ್‌ನ ಪೋಸ್ಟ್‌ನಲ್ಲಿ, “ಈ ರೀತಿಯ ತಪ್ಪು ಮಾಹಿತಿಯನ್ನು ಹೊರಡಿಸಿ ಮೊದಲು ಸತ್ಯಾಸತ್ಯತೆಗಳನ್ನು ಪರಿಶೀಲಿಸುವಂತೆ ಸೂಚಿಸಿತ್ತು. ಆದರೂ ಕ್ಯಾರ್ ಮಾಡದ ಗ್ಲೋಬಲ್ ಟೈಮ್ಸ್ ತನ್ನ ಚಾಳಿಯನ್ನು ಮುಂದುವರಿಸಿತ್ತು.
ಗ್ಲೋಬಲ್ ಟೈಮ್ಸ್ ಮಾನ ಕಳೆದ PIBFactCheck
ಗ್ಲೋಬಲ್ ಟೈಮ್ಸ್ ಹಾಕಿದ ಎಲ್ಲಾ ಸುಳ್ಳು ಸುದ್ದಿಗಳನ್ನು PIBFactCheck ಬಯಲು ಮಾಡಿದೆ. ಅಸಲಿಗೆ ಚೀನಾ ಸೆಪ್ಟೆಂಬರ್ 2024 ರಲ್ಲಿ ರಾಜಸ್ಥಾನದಲ್ಲಿ, 2021 ರಲ್ಲಿ ಪಂಜಾಬ್‌ನಿಂದ ಪತನವಾಗಿದ್ದ IAF MiG-21 ವಿಮಾನಗಳ ಚಿತ್ರಗಳನ್ನು ಪ್ರಸಾರ ಮಾಡಿತ್ತು. ಇದೀಗ ಚೀನಾ ಪ್ರಾಸರ ಮಾಡಿದ ಹಳೆಯ ನಕಲಿ ಫೊಟೋಗಳಿಗೆ ಅಸಲಿ ಫೋಟೋವನ್ನು ಪ್ರಸಾರ ಗ್ಲೋಬಲ್ ಟೈಮ್ಸ್ ಮಾನ ಕಳೆದಿದೆ.
ಅಲ್ಲದೆ ಭಾರತದ ಅರುಣಾಚಲ ಪ್ರದೇಶದ ಸ್ಥಳಗಳನ್ನು ಹೆಸರಿಸಲು ಚೀನಾ ತನ್ನ ವ್ಯರ್ಥ ಮತ್ತು ಅಸಂಬದ್ಧ ಪ್ರಯತ್ನಗಳನ್ನು ಮುಂದುವರಿಸಿದೆ ಎಂದು ನಾವು ಗಮನಿಸಿದ್ದೇವೆ” ಎಂದು ಸಚಿವಾಲಯ ಹೇಳಿದೆ. ಬೀಜಿಂಗ್ ಅರುಣಾಚಲ ಪ್ರದೇಶದ ಕೆಲವು ಸ್ಥಳಗಳಿಗೆ ಚೀನಾದ ಹೆಸರುಗಳನ್ನು ಘೋಷಿಸಿದ ಬೆನ್ನಲ್ಲೇ ವಿದೇಶಾಂಗ ಸಚಿವಾಲಯದ ಈ ಪ್ರತಿಕ್ರಿಯೆ ಬಂದಿದೆ.