ಬ್ರಹ್ಮೋಸ್‌ಗೆ ಹೆದರಿ ಬಾಲ ಮಡಚಿದ ಪಾಕಿಸ್ತಾನ- ಗಡಿಯಲ್ಲಿ ಶಾಂತಿ

ನವದೆಹಲಿ: ಪರಮಾಣು ಶಸ್ತ್ರಸಜ್ಜಿತ ನೆರೆಹೊರೆ ರಾಷ್ಟ್ರಗಳು ಕದನ ವಿರಾಮಕ್ಕೆ ಒಪ್ಪಿಕೊಂಡ ಎರಡು ದಿನಗಳ ನಂತರ, ನಿಯಂತ್ರಣ ರೇಖೆ (ಎಲ್‌ಒಸಿ) ಮತ್ತು ಗಡಿ ಪ್ರದೇಶಗಳಲ್ಲಿ ಶಾಂತಿ ನೆಲೆಸಿದೆ ಎಂದು ಭಾರತೀಯ ಸೇನೆ ಸೋಮವಾರ ತಿಳಿಸಿದೆ.

ಬ್ರಹ್ಮೋಸ್ ನಿಂದ ಧ್ವಂಸಗೊಂಡ ಪಿಎಎಫ್ ಬೇಸ್ ಭೋಲಾರಿ

“ಜಮ್ಮು ಮತ್ತು ಕಾಶ್ಮೀರ ಮತ್ತು ಅಂತರರಾಷ್ಟ್ರೀಯ ಗಡಿಯಾದ್ಯಂತ ರಾತ್ರಿಯಿಂದ ಶಾಂತಿ ನೆಲೆಸಿದೆ. ನಿನ್ನೆಯಿಂದ ಯಾವುದೇ ಅಹಿತಕರ ಘಟನೆಗಳು ನಡೆದಿರುವ ಬಗ್ಗೆ ವರದಿಯಾಗಿಲ್ಲ ಎಂದು ಸೇನಾ ಮೂಲಗಳು ತಿಳಿಸಿವೆ.

ಶನಿವಾರ ಸಂಜೆ 5 ಗಂಟೆಯಿಂದ ತಕ್ಷಣ ಜಾರಿಗೆ ಬರುವಂತೆ ಭೂಮಿ, ವಾಯು ಮತ್ತು ಸಮುದ್ರದಲ್ಲಿ ಎಲ್ಲಾ ಗುಂಡಿನ ದಾಳಿ ಮತ್ತು ಮಿಲಿಟರಿ ಕಾರ್ಯಾಚರಣೆಗಳನ್ನು ನಿಲ್ಲಿಸಲು ಭಾರತ ಮತ್ತು ಪಾಕಿಸ್ತಾನ ಒಪ್ಪಂದಕ್ಕೆ ಬಂದವು. ಆದಾಗ್ಯೂ, ಪಾಕಿಸ್ತಾನವು ಕೆಲವೇ ಗಂಟೆಗಳಲ್ಲಿ ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿತು. ಹೀಗಾಗಿ ಭಾರತ ಪಾಕಿಸ್ತಾನದ ಮೇಲೆ ಬ್ರಹ್ಮೋಸ್‌ ಕ್ಷಿಪಣಿ ಪ್ರಯೋಗಿಸಬೇಕಾಯಿತು. ಇದರಿಂದ ಹೆದರಿರುವ ಪಾಕಿಸ್ತಾನ ಸದ್ಯಕ್ಕೆ ಬಾಲ ಮಡಚಿ ಕೂತಿದೆ. ಒಂದು ವೇಳೆ ಪಾಕಿಸ್ತಾನ ಮತ್ತೊಮ್ಮೆ ದುಸ್ಸಾಹಸಕ್ಕೆ ಇಳಿದರೆ ಬುದ್ದಿ ಕಲಿಸಲು ಸೇನೆ ಸಜ್ಜಾಗಿ ನಿಂತಿದೆ.

error: Content is protected !!