ಟೆಸ್ಟ್‌ಗೆ ಗುಡ್‌ಬೈ ಹೇಳಿದ ವಿರಾಟ್‌ ಕೊಹ್ಲಿ?!

ನವದೆಹಲಿ: ಟೀಂ ಇಂಡಿಯಾದ ಸ್ಟಾರ್‌ ಆಟಗಾರ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವ ಇಂಗಿತವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ತಿಳಿಸಿದ್ದಾರೆ ಎಂದು ವರದಿಯಾಗಿದೆ. ವರದಿಯ ಪ್ರಕಾರ, ಕೊಹ್ಲಿ ಹಲವಾರು ತಿಂಗಳುಗಳಿಂದ ನಿವೃತ್ತಿಯ ಬಗ್ಗೆ ಯೋಚಿಸುತ್ತಿದ್ದು, ಅಂತಿಮವಾಗಿ ತನ್ನ ಇಚ್ಛೆಯನ್ನು ಮಂಡಳಿಗೆ ತಿಳಿಸಿದ್ದಾರೆ. ಜೂನ್‌ನಲ್ಲಿ ಇಂಗ್ಲೆಂಡ್ ಪ್ರವಾಸವನ್ನು ಪರಿಗಣಿಸಿ ತನ್ನ ನಿರ್ಧಾರವನ್ನು ಬದಲಿಸುವಂತೆ ಬಿಸಿಸಿಐ ಕೊಹ್ಲಿಗೆ ಮನವಿ ಮಾಡಿದ್ದಾರೆ.

ಬಾರ್ಡರ್-ಗವಾಸ್ಕರ್ ಸರಣಿಯ ಐದನೇ ಅತಿ ಹೆಚ್ಚು ರನ್ ಗಳಿಸಿದ ಖ್ಯಾತಿ ಹೊಂದಿರುವ ಕೊಹ್ಲಿ, ಕಳೆದ ಐದು ವರ್ಷಗಳಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಕಳಪೆ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. 2020 ಮತ್ತು 2025 ಹೊರತುಪಡಿಸಿ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 35 ಕ್ಕಿಂತ ಕಡಿಮೆ ಸರಾಸರಿ ರನ್‌ ಹೊಂದಿದ್ದಾರೆ. 37 ಪಂದ್ಯಗಳಲ್ಲಿ 1,990 ರನ್‌ಗಳನ್ನು ಗಳಿಸಿದ್ದು, ಅವರ ಹೆಸರಿಗೆ ಕೇವಲ ಮೂರು ಶತಕಗಳಿವೆ. ಆದರೆ ಒನ್‌ ಡೇ ಕ್ರಿಕೆಟ್‌ನಲ್ಲಿ ಕೊಹ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ.

ಮಾರ್ಚ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಈವೆಂಟ್‌ನಲ್ಲಿ ಮಾತನಾಡಿದ ಕೊಹ್ಲಿ, ಟೆಸ್ಟ್‌ನಲ್ಲಿ ಕಳಪೆ ಪ್ರದರ್ಶನ ಬಗ್ಗೆ ತನ್ನ ಮಾನಸಿಕ ನೋವನ್ನು ತೋಡಿಕೊಂಡಿದ್ದರು.

2011 ರಲ್ಲಿ ಕ್ರಿಕೆಟ್‌ಗೆ ಪಾದಾರ್ಪಣೆ ಕೊಹ್ಲಿ ಬಲಗೈ ಬೌಲರ್ ಆಗಿದ್ದು, ಇದುವರೆಗೆ 123 ಟೆಸ್ಟ್‌ಗಳನ್ನು ಆಡಿದ್ದಾರೆ. ಇವರ ಟೆಸ್ಟ್‌ ಸರಾಸರಿ ರನ್ 46.85 ಆಗಿದ್ದು, ಟೋಟಲ್ 9,230 ರನ್ ಗಳಿಸಿದ್ದಾರೆ, ಇದರಲ್ಲಿ 29 ಶತಕಗಳು ಸೇರಿವೆ.

ಇತ್ತೀಚೆಗೆ ಕೊಹ್ಲಿ ಇನ್ಸ್‌ಟಾಗ್ರಾಂನಲ್ಲಿ, “ನನ್ನ ದೇಶವನ್ನು ಬಿಳಿ ಉಡುಪಿನಲ್ಲಿ ಪ್ರತಿನಿಧಿಸಿ ಗೌರವಿಸುವುದು ಹೆಮ್ಮೆಯ ವಿಚಾರ. ನಿಮ್ಮೆಲ್ಲರ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು ಎಂದು ಮಾರ್ಮಿಕವಾಗಿ ಪೋಸ್ಟ್‌ ಮಾಡಿದ್ದರು. ಆದರೆ ಅಭಿಮಾನಿಗಳಿಗೆ ಸಂತೋಷದ ವಿಷಯವೇನೆಂದರೆ ವಿರಾಟ್‌ ಕೊಹ್ಲಿ ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸುವುದನ್ನು ಮುಂದುವರಿಸಲಿದ್ದಾರೆ.

ಇತ್ತೀಚಗೆ ರೋಹಿತ್ ಶರ್ಮಾ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು.

error: Content is protected !!