ನೆಲ್ಯಾಡಿ : ಚಾಕುವಿನಿಂದ ಇರಿದು ಯುವಕನೋರ್ವನನ್ನು ಕೊಲೆಗೈದ ಘಟನೆ ಮೇ 9ರ ರಾತ್ರಿ ನೆಲ್ಯಾಡಿ ಸಮೀಪದ ಮಾದೇರಿ ಎಂಬಲ್ಲಿ ಸಂಭವಿಸಿದೆ.
ಮಾದೇರಿ ನಿವಾಸಿ ಶರತ್ ಹತ್ಯೆಗೀಡಾದ ಯುವಕ.
ಯುವಕ ಅಂಗಳದಲ್ಲಿ ನಿಂತಿದ್ದ ವೇಳೆ ಅಟಕಾಯಿಸಿದ ಹಂತಕರು ಚಾಕುವಿನಿಂದ ಕುತ್ತಿಗೆ ಸೀಳಿ ಹತ್ಯೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಕೃತ್ಯಕ್ಕೆ ಕೌಟುಂಬಿಕ ಕಲಹ ಕಾರಣ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ನೆಲ್ಯಾಡಿ ಹೊರ ಠಾಣಾ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.