ನವದೆಹಲಿ: ಭಾರತ- ಪಾಕಿಸ್ತಾನ ನಡುವಿನ ಉದ್ವಿಗ್ನತೆಯ ಮಧ್ಯೆ, ಪಾಕಿಸ್ತಾನದಿಂದ ಬಲೂಚಿಸ್ತಾನ ಸ್ವತಂತ್ರ ಘೋಷಿಸಿಕೊಂಡಿದೆ. ಬಲೂಚಿಸ್ತಾನದ ಖ್ಯಾತ ಬರಹಗಾರ, ʻಎಕ್ಸ್ʼನಲ್ಲಿ ಟ್ರೆಂಡಿಂಗ್‌ನಲ್ಲಿರುವ ಮೀರ್ ಯಾರ್ ಬಲೂಚಿ ಎಂಬವರು ಬಲೂಚಿಸ್ತಾನಕ್ಕೆ ರಾಷ್ಟ್ರದ ಮಾನ್ಯತೆ ಕೊಡಬೇಕೆಂದು ಒತ್ತಾಯಿಸಿದಲ್ಲದೆ, ನವದೆಹಲಿಯಲ್ಲಿ ರಾಯಭಾರ ಕಚೇರಿ ತೆರಯುವಂತೆ ಭಾರತಕ್ಕೆ ಮನವಿ ಮಾಡಿದ್ದಾರೆ.
ಬಲೂಚ್ ಜನರ ಪರವಾಗಿ ವಕಾಲತ್ತು ವಹಿಸುವ ಮೂಲಕ ಹೆಸರುವಾಸಿಯಾದ ಮೀರ್ ಯಾರ್ ಬಲೂಚ್, ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಸರಣಿ ಪೋಸ್ಟ್‌ಗಳಲ್ಲಿ ಬಲೂಚಿಸ್ತಾನ ಪ್ರತ್ಯೇಕ ರಾಷ್ಟ್ರವೆಂದು ಘೋಷಿಸಿಕೊಂಡಿದ್ದು, ತಮ್ಮ ದೇಶಕ್ಕೆ ಶಾಂತಿಪಾಲನಾ ಪಡೆಗಳನ್ನು ಕಳುಹಿಸುವಂತೆ ಅವರು ವಿಶ್ವಸಂಸ್ಥೆಯನ್ನು ಒತ್ತಾಯಿಸಿದ್ದಾರೆ. ಅಲ್ಲದೆ ಪಾಕಿಸ್ತಾನಿ ಸೈನ್ಯವು ಬಲೂಚಿಸ್ತಾನವನ್ನು ತಕ್ಷಣ ತೊರೆಯುವಂತೆ ಒತ್ತಾಯಿಸಿದ್ದಾರೆ. ಭಾರತ-ಪಾಕಿಸ್ತಾನ ಮಧ್ಯೆ ಉದ್ವಿಗ್ನತೆ ಹೆಚ್ಚಿರುವ ಬೆನ್ನಲ್ಲೇ ಬಲೂಚಿಸ್ತಾನ ಈ ರೀತಿ ಘೋಷಣೆ ಮಾಡಿಕೊಂಡಿದೆ.
ಮೇ .7ರಂದು ಭಾರತ ಆಪರೇಷನ್ ಸಿಂಧೂರ್ ಹೆರಸಲ್ಲಿ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರ (POK)ದಲ್ಲಿರುವ ಭಯೋತ್ಪಾದನ ಶಿಬಿರಗಳನ್ನು ನಾಶಪಡಿಸಿದೆ. ಯಾವುದೇ ಪಾಕಿಸ್ತಾನಿ ಮಿಲಿಟರಿ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡಿಲ್ಲ ಎಂದು ಭಾರತ ಸ್ಪಷ್ಟಪಡಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಪಾಕಿಸ್ತಾನ ಗುರುವಾರ ನಾಗರಿಕ ಮತ್ತು ಮಿಲಿಟರಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಡ್ರೋನ್‌ಗಳು, ಕ್ಷಿಪಣಿಗಳು ಮತ್ತು ತೀವ್ರವಾದ ಫಿರಂಗಿ ಶೆಲ್ಲಿಂಗ್‌ಗಳ ಸಮೂಹದೊಂದಿಗೆ ಉದ್ವಿಗ್ನ ಪರಿಸ್ಥಿತಿಯನ್ನು ಹೆಚ್ಚಿಸಿತು. ಭಾರತವು ಒಳಬರುವ ಡ್ರೋನ್‌ಗಳು ಮತ್ತು ಕ್ಷಿಪಣಿ, ಹಾಗೂ ಫೈಟರ್ ಜೆಟ್‌ಗಳನ್ನು ಹೊಡೆದುರುಳಿಸಿತು. ಅಲ್ಲದೆ ಪಾಕಿಸ್ತಾನ್ ಏರ್ ಢಿಫೆನ್ಸ್ ಸಿಸ್ಟಮ್ ಅನ್ನೂ ಪುಡಿಗಟ್ಟಿದೆ.
ಇದರ ನಡುವಲ್ಲಿ ಬಲೂಚಿಸ್ತಾನ ಲಿಬರೇಷನ್ ಆರ್ಮಿ ಕೂಡ ಪಾಕಿಸ್ತಾನದ ಮೇಲೆ ದಾಳಿ ನಡೆಸಿ ಅದರ ಅನೇಕ ಸೈನಿಕರನ್ನು ಹತ್ಯೆ ನಡೆಸಿದೆ. ಬಲೂಚಿಯಲ್ಲಿರುವ ಪಾಕ್ ಸೈನಿಕರನ್ನು ಅಲ್ಲಿಂದ ಓಡಿಸಲಾಗಿದೆ.
ಮೀರ್ ಯಾರ್ ಬಲೂಚಿ ಪೋಸ್ಟ್‌ನಲ್ಲಿ ಏನಿದೆ?
-ಭಯೋತ್ಪಾದಕ ಪಾಕಿಸ್ತಾನದ ಪತನ ಸಮೀಪಿಸುತ್ತಿರುವುದರಿಂದ ಶೀಘ್ರದಲ್ಲೇ ಬಲೂಚಿಸ್ತಾನ್ ಸ್ವತಂತ್ರ ರಾಷ್ಟ್ರ ಘೋಷಣೆ ಮಾಡಬೇಕು. ದೆಹಲಿಯಲ್ಲಿ ಬಲೂಚಿಸ್ತಾನದ ಅಧಿಕೃತ ಕಚೇರಿ ಮತ್ತು ರಾಯಭಾರ ಕಚೇರಿಯನ್ನು ಅನುಮತಿಸುವಂತೆ ಭಾರತವನ್ನು ನಾವು ವಿನಂತಿಸುತ್ತೇವೆ.”
-ವಿಶ್ವಸಂಸ್ಥೆಯು ಬಲೂಚಿಸ್ತಾನದ ಪ್ರಜಾಸತ್ತಾತ್ಮಕ ಗಣರಾಜ್ಯದ ಸ್ವಾತಂತ್ರ್ಯವನ್ನು ಪರಿಗಣಿಸಿ ವಿಶ್ವಸಂಸ್ಥೆ ರಾಷ್ಟ್ರದ ಮಾನ್ಯತೆ ನೀಡಬೇಕು. ಈ ಕುರಿತು ಎಲ್ಲಾ UN ಸದಸ್ಯರು ಸಭೆಯನ್ನು ಕರೆಯಬೇಕು
“ಕರೆನ್ಸಿ ಮತ್ತು ಪಾಸ್‌ಪೋರ್ಟ್ ಮುದ್ರಣಕ್ಕಾಗಿ ಶತಕೋಟಿ ಹಣವನ್ನು ಬಿಡುಗಡೆ ಮಾಡಬೇಕು”
ವಿಶ್ವಸಂಸ್ಥೆಯು ಬಲೂಚಿಸ್ತಾನದಲ್ಲಿ ತನ್ನ ಶಾಂತಿಪಾಲನಾ ಪಡೆಗಳನ್ನು ತಕ್ಷಣವೇ ಕಳುಹಿಸುವಂತೆ ಮತ್ತು ಪಾಕಿಸ್ತಾನದ ಸೈನ್ಯವು ಬಲೂಚಿಸ್ತಾನದ, ಭೂನೆಲೆ, ವಾಯುಪ್ರದೇಶ ಮತ್ತು ಸಮುದ್ರವನ್ನು ಖಾಲಿ ಮಾಡಬೇಕು
“ಸೇನೆ, ಗಡಿ ಪಡೆ, ಪೊಲೀಸ್, ಮಿಲಿಟರಿ ಗುಪ್ತಚರ, ಐಎಸ್ಐ ಮತ್ತು ನಾಗರಿಕ ಆಡಳಿತದಲ್ಲಿರುವ ಎಲ್ಲಾ ಬಲೂಚಿಸ್ತಾನೇತರ ಸಿಬ್ಬಂದಿಗಳು ತಕ್ಷಣವೇ ಬಲೂಚಿಸ್ತಾನವನ್ನು ತೊರೆಯಬೇಕು
“ಬಲೂಚಿಸ್ತಾನದ ನಿಯಂತ್ರಣವನ್ನು ಶೀಘ್ರದಲ್ಲೇ ಸ್ವತಂತ್ರ ಬಲೂಚಿಸ್ತಾನ್ ಸರ್ಕಾರಕ್ಕೆ ಹಸ್ತಾಂತರಿಸಬೇಕು. ಶೀಘ್ರದಲ್ಲೇ ಇಲ್ಲಿ ಮಧ್ಯಂತರ ಸರ್ಕಾರವನ್ನು ಘೋಷಿಸಬೇಕು. ನಮ್ಮ ಸಂಪುಟದಲ್ಲಿ ಬಲೂಚಿಸ್ತಾನ್ ಮಹಿಳೆಯರಿಗೆ ಪ್ರಾತಿನಿಧ್ಯತೆ ನೀಡುತ್ತೇವೆ.
“ಬಲೂಚಿಸ್ತಾನ್‌ನ ಸ್ವಾತಂತ್ರ್ಯ ಸರ್ಕಾರದ ರಾಜ್ಯೋತ್ಸವ ಶೀಘ್ರದಲ್ಲೇ ನಡೆಯಲಿದೆ. ನಮ್ಮ ಸ್ನೇಹಪರ ರಾಷ್ಟ್ರಗಳ ರಾಜ್ಯಗಳ ಮುಖ್ಯಸ್ಥರ ರಾಷ್ಟ್ರೀಯ ಮೆರವಣಿಗೆಯನ್ನು ವೀಕ್ಷಿಸಲು ಮತ್ತು ನಮ್ಮನ್ನು ಆಶೀರ್ವದಿಸಲು ನಾವು ಆಹ್ವಾನಿಸುತ್ತೇವೆ”
ಮತ್ತೊಂದು ದಿಟ್ಟ ಸಂದೇಶದಲ್ಲಿ, ಮೀರ್ ಯಾರ್ ಬಲೂಚ್ ಎಕ್ಸ್‌ನಲ್ಲಿ “ಹೇ ನಾ-ಪಾಕಿಸ್ತಾನ್. ನಿಮ್ಮ ಬಳಿ ಸೈನ್ಯವಿದ್ದರೆ, ನಾವು ಬಲೂಚ್‌ಗಳ ಬಳಿ ನಮ್ಮ ಸೈನ್ಯವೂ ಇದೆ. ಬಲೂಚ್ ಸ್ವಾತಂತ್ರ್ಯ ಹೋರಾಟಗಾರರು ದಾಳಿ ಮಾಡುತ್ತಾರೆ” ಎಂದು ಬರೆದಿದ್ದಾರೆ.
ಇದಕ್ಕೂ ಮೊದಲು, ಪಾಕಿಸ್ತಾನಿ ಮಿಲಿಟರಿ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಯುಟಿಲಿಟಿ ವಾಹನ ಸ್ಫೋಟಿಸುವ ವೀಡಿಯೊ ಅಂತರ್ಜಾಲದಲ್ಲಿ ಕಾಣಿಸಿಕೊಂಡಿತು. ಈ ಘಟನೆಯಲ್ಲಿ ಪಾಕಿಸ್ತಾನ 14 ಸೈನಿಕರನ್ನು ಕಳೆದುಕೊಂಡಿದೆ ಎಂದು ಬಿಎಲ್‌ಎ ಹೇಳಿದೆ.