ಆಪರೇಷನ್ ಸಿಂಧೂರ್: ಬುಧವಾರ ಬೆಳಗಿನ ಜಾವ ಪಾಕಿಸ್ತಾನದ ಪಂಜಾಬ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ದಲ್ಲಿ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಭಾರತೀಯ ಸಶಸ್ತ್ರ ಪಡೆಗಳು ನಡೆಸಿದ ವೈಮಾನಿಕ ದಾಳಿಗಳಲ್ಲಿ ಜೈಶ್-ಎ-ಮೊಹಮ್ಮದ್ (ಜೆಇಎಂ) ಮುಖ್ಯಸ್ಥ ಮಸೂದ್ ಅಜರ್‌ನ ಸಹೋದರ ಅಬ್ದುಲ್ ರೌಫ್ ಅಜರ್ ಕೂಡಾ ಖತಂ ಆಗಿರುವ ಮಾಹಿತಿ ಲಭ್ಯವಾಗಿದೆ.
ಜಾಗತಿಕವಾಗಿ ಭಯೋತ್ಪಾದಕ ಪಟ್ಟಿಗೆ ಸೇರಿದ್ದ ಈತ 1999 ರ ಐಸಿ-814 ಏರ್ ಇಂಡಿಯಾ ವಿಮಾನ ಅಪಹರಣದ ಹಿಂದಿನ ಮಾಸ್ಟರ್ ಮೈಂಡ್ ಕೂಡಾ ಆಗಿದ್ದ. ಅಬ್ದುಲ್ ರೌಫ್ ಅಜರ್ನನ್ನು ಪಾಕಿಸ್ತಾನದ ದಕ್ಷಿಣ ಪಂಜಾಬ್‌ನಲ್ಲಿರುವ ಪ್ರಸಿದ್ಧ ಭಯೋತ್ಪಾದಕ ಕೇಂದ್ರವಾದ ಬಹವಲ್‌ಪುರದಲ್ಲಿರುವ ಜೆಇಎಂನ ಲಾಂಚ್ ಪ್ಯಾಡ್‌ಗಳು ಮತ್ತು ಪ್ರಧಾನ ಕಚೇರಿಯನ್ನು ಗುರಿಯಾಗಿಸಿಕೊಂಡು ಹಾರಿದ ಭಾರತೀಯ ಕ್ಷಿಪಣಿಗಳ ದಾಳಿಯಿಂದ ಹತ್ಯೆಯಾಗಿದ್ದಾನೆ.
26 ಭಾರತೀಯರ ಜೀವಗಳನ್ನು ಬಲಿತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತ ನಡೆಸಿದ ಪ್ರತೀಕಾರ ದಾಳಿಯಲ್ಲಿ ಮಸೂದ್ ಅಜರ್ ಕುಟುಂಬದ 10 ಸದಸ್ಯರು ಸಾವನ್ನಪ್ಪಿದರು. ಜೆಇಎಂನ ಬಹವಲ್‌ಪುರ ನೆಲೆಯ ಮೇಲೆ ಗುರಿಯಿಟ್ಟು ನಡೆಸಿದ ಬಾಂಬ್ ದಾಳಿ ಅಜರ್ ಸ್ವತಃ ತೀವ್ರವಾಗಿ ಗಾಯಗೊಂಡಿದ್ದನು.
ಅಬ್ದುಲ್ ರೌಫ್ ಅಜರ್ ಯಾರು?
ಅಬ್ದುಲ್ ರೌಫ್ ಅಜರ್ ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬನಾಗಿದ್ದು, ಭಾರತದ ನೆಲದಲ್ಲಿ ದಾಳಿಗಳನ್ನು ಸಜ್ಜುಗೊಳಿಸಿರುವ ಅಪರಾಧ ಎಸಗಿದ್ದಾನೆ. ಅಲ್ಲದೆ 1999 ರ IC-814 ವಿಮಾನ ಅಪಹರಣದ ಮಾಸ್ಟರ್ ಮೈಂಡ್ ಕೂಡಾ ಆಗಿದ್ದಾನೆ. ಇದರಿಂದಾಗಿ ಅವನ ಸಹೋದರ ಮಸೂದ್ ಅಜರ್‌ನನ್ನು ಭಾರತೀಯ ಜೈಲಿನಿಂದ ಬಿಡುಗಡೆ ಹೊಂದಲು ಕಾರಣವಾಯಿತು.
ಜೈಶ್-ಎ-ಮೊಹಮ್ಮದ್ (ಜೆಎಂ) ಮತ್ತು ಲಷ್ಕರ್-ಎ-ತೈಬಾ (ಎಲ್‌ಇಟಿ) ಎರಡರಲ್ಲೂ ಹಿರಿಯ ಕಮಾಂಡರ್ ಆಗಿದ್ದ
ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಗಳನ್ನು ಯೋಜಿಸುವಲ್ಲಿ ಮತ್ತು ಗಡಿಯಾಚೆಗಿನ ಭಯೋತ್ಪಾದನೆಗೆ ಹಣಕಾಸು ಒದಗಿಸುವಲ್ಲಿ ನೇರವಾಗಿ ಭಾಗಿಯಾಗಿದ್ದಾನೆ.
ಈತನನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯ 1267* ಅಡಿಯಲ್ಲಿ ನಿಷೇಧಿತ ಪಟ್ಟಿಗೆ ಸೇರಿಸಿದ್ದು, ದಶಕಗಳಿಂದ ಜಾಗತಿಕ ಗುಪ್ತಚರ ಸಂಸ್ಥೆಗಳ ನಿಗಾದಲ್ಲಿದ್ದನು.
ಆಪರೇಷನ್ ಸಿಂದೂರ್ ಮೂಲಕ ಮೇ.7ರ ಬೆಳಿಗ್ಗೆ 1:05 ರಿಂದ 1:30 ರ ನಡುವೆ ಪ್ರಾರಂಭಿಸಲಾದ ಆಪರೇಷನ್ ಸಿಂದೂರ್, ಬಹಾವಲ್ಪುರ್, ಸಿಯಾಲ್‌ಕೋಟ್, ಮುಜಫರಾಬಾದ್, ಬರ್ನಾಲಾ ಮತ್ತು ಪಾಕಿಸ್ತಾನ ಮತ್ತು ಪಿಒಕೆಯ ಇತರ ಪ್ರಸಿದ್ಧ ಭಯೋತ್ಪಾದಕ ಕೇಂದ್ರಗಳಲ್ಲಿನ ಭಯೋತ್ಪಾದಕ ಉಡಾವಣಾ ಪ್ಯಾಡ್‌ಗಳ ಮೇಲೆ ಸಂಘಟಿತ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಲಾಗಿತ್ತು. ಹಲವಾರು ನಾಗರಿಕರನ್ನು ಬಲಿಪಡೆದುಕೊಂಡ ಪಹಲ್ಗಾಮ್ ಹತ್ಯಾಕಾಂಡಕ್ಕೆ ನೇರ ಪ್ರತಿಕ್ರಿಯೆಯಾಗಿ ಈ ಕಾರ್ಯಾಚರಣೆಯನ್ನು ಉದ್ದೇಶಿಸಲಾಗಿತ್ತು. ಅದಲ್ಲಿ ಇದೀಗ ಸತ್ತ ಭಯೋತ್ಪಾದಕರ ಹೆಸರುಗಳು ಒಂದೊಂದಾಗಿಯೇ ಬೆಳಕಿಗೆ ಬರುತ್ತಿದೆ.