ನವದೆಹಲಿ: ಆಪರೇಷನ್ ಸಿಂಧೂರ್ ಮೂಲಕ ಪಾಕಿಸ್ತಾನಕ್ಕೆ ಏಟು ನೀಡಿದ್ದ ಭಾರತದ ಸೇಬೆ ಇದೀಗ ಮತ್ತೊಂದು ದಾಳಿ ನಡೆಸಿ ಪಾಕಿಸ್ತಾನದಲ್ಲಿದ್ದ ಚೀನಾ ನಿರ್ಮಿತ ಏರ್ ಡಿಫೆನ್ಸ್ ರಡಾರ್ ಹಾಗೂ ಸಿಸ್ಟಮ್‌ಗಳನ್ನೇ ಸರ್ವನಾಶಗೊಳಿಸಿದೆ. ಲಾಹೋರ್‌ನಲ್ಲಿ ಚೀನಾ ಅಭಿವೃದ್ಧಿಪಡಿಸಿದ ಪಾಕಿಸ್ತಾನದ HQ-9 ಕ್ಷಿಪಣಿ ರಕ್ಷಣಾ ವ್ಯವಸ್ಥೆಯ ಘಟಕಗಳನ್ನು ಇಸ್ರೇಲ್ ನಿರ್ಮಿತ ಭಾರತದ HAROP ಡ್ರೋನ್‌ಗಳು ಹೊಡೆದುರುಳಿಸಿದೆ.
ನಿನ್ನೆ ಬೆಳ್ಳಂಬೆಳಗ್ಗೆ ಪಾಕಿಸ್ತಾನದ ನೂರಾರು ಮಂದಿ ಉಗ್ರರನ್ನು ಜನ್ನತ್‌ಗೆ ಕಳಿಸಿದ್ದ ಭಾರತದ ಸೇನೆಯ ವಿರುದ್ಧ ಪಾಕಿಸ್ತಾನದ ಮಿಲಿಟರಿ ಪಡೆಗಳು ಎಗರಿಬಿದ್ದಿದ್ದವು. ಗಡಿ ನಿಯಂತ್ರಣ ರೇಖೆಯ ಬಳಿ ಭಾರೀ ಪ್ರಮಾಣದಲ್ಲಿ ಆರ್ಟಿಲ್ಲರಿ ದಾಳಿ ಭಾರತದ 13 ಜನ ನಾಗರೀಕರನ್ನು ಹತ್ಯೆಗೈದಿದ್ದರು. ಇದಕ್ಕೆ ಪ್ರತಿಯಾಗಿ ಭಾರತ ಇಂದು ಬೆಳಿಗೆ ಪಾಕಿಸ್ತಾನದ ಮಿಲಿಟರಿ ಆಸ್ತಿಗಳ ಮೇಲೆ ಮಾರಕ ದಾಳಿ ನಡೆಸಿ ಚೀನಾ ನಿರ್ಮಿತ ಏರ್ ಡಿಫೆನ್ಸ್ ಸಿಸ್ಟಮ್ ಹಾಗೂ ರಡಾರ್ ಸಿಸ್ಟಮ್‌ಗಳನ್ನೇ ಪುಡಿ ಪುಡಿ ಮಾಡಿದೆ.
ಮೇ 07, 2025 ರಂದು ಆಪರೇಷನ್ ಸಿಂದೂರ್ ಕುರಿತು ಪತ್ರಿಕಾಗೋಷ್ಠಿಯಲ್ಲಿ, ಭಾರತವು ತನ್ನ ಪ್ರತಿಕ್ರಿಯೆಯನ್ನು ಕೇಂದ್ರೀಕೃತ, ಸೂಕ್ಷ್ಮವಾಗಿ ಯೋಜಿಸಲಾಮತ್ತು ಉಲ್ಬಣಗೊಳ್ಳದ ರೀತಿಯಲ್ಲಿ ದಾಳಿ ನಡೆಸಲಾಗಿತ್ತು ಎಂದು ಬಣ್ಣಿಸಿತ್ತು. ಪಾಕಿಸ್ತಾನಿ ಮಿಲಿಟರಿ ಸ್ಥಾಪನೆಗಳನ್ನು ಗುರಿಯಾಗಿಸಿಕೊಂಡಿಲ್ಲ. ಭಾರತದಲ್ಲಿನ ಮಿಲಿಟರಿ ಟಾರ್ಗೆಟ್‌ಗಳ ಮೇಲೆ ಯಾವುದೇ ದಾಳಿ ನಡೆದರೆ ಸೂಕ್ತ ಪ್ರತಿಕ್ರಿಯೆ ನೀಡಲಾಗುವುದು ಎಂದು ಸ್ಪಷ್ಟವಾಗಿ ತಿಳಿಸಿತ್ತು.
ಆದರೂ ಪಾಕಿಸ್ತಾನ ನಿನ್ನೆ ರಾತ್ರಿ ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಬಳಸಿಕೊಂಡು ಅವಂತಿಪುರ, ಶ್ರೀನಗರ, ಜಮ್ಮು, ಪಠಾಣ್‌ಕೋಟ್, ಅಮೃತಸರ, ಕಪುರ್ತಲಾ, ಜಲಂಧರ್, ಲುಧಿಯಾನ, ಆದಂಪುರ, ಭಟಿಂಡಾ, ಚಂಡೀಗಢ, ನಲ್, ಫಲೋಡಿ, ಉತ್ತರಲೈ ಮತ್ತು ಭುಜ್ ಸೇರಿದಂತೆ ಉತ್ತರ ಮತ್ತು ಪಶ್ಚಿಮ ಭಾರತದ ಹಲವಾರು ಮಿಲಿಟರಿ ಗುರಿಗಳ ಮೇಲೆ ದಾಳಿ ಮಾಡಲು ಪ್ರಯತ್ನಿಸಿತು. ಇದರಿಂದ ಕ್ರುದ್ಧಗೊಂಡ ಭಾರತದ ಮಿಲಿಟರಿಯು ಇಂಟಿಗ್ರೇಟೆಡ್ ಕೌಂಟರ್ ಯುಎಎಸ್ ಗ್ರಿಡ್ ಮತ್ತು ವಾಯು ರಕ್ಷಣಾ ವ್ಯವಸ್ಥೆಗಳಿಂದ ತಟಸ್ಥಗೊಳಿಸಿದೆ. ಪಾಕಿಸ್ತಾನಿ ದಾಳಿಗಳನ್ನು ಸಾಬೀತುಪಡಿಸುವ ಹಾಗೂ ವಿಶ್ವ ಸಮುದಾಯ ಭಾರತವೇ ಮೊದಲು ದಾಳಿ ನಡೆಸಿದೆ ಎಂದು ಆರೋಪಿಸಬಾರನ್ನುವ ಕಾರಣಕ್ಕೆ ಹಲವಾರು ಸಾಧನಗಳನ್ನು ಸ್ಥಳಗಳಿಂದ ವಶಪಡಿಸಿಕೊಳ್ಳಲಾಗುತ್ತಿದೆ.
ಹಲ್ಲು ಕಿತ್ತ ಹಾವಿನಂತಾದ ಪಾಕ್
ಪಾಕಿಸ್ತಾನದ ಸದ್ಯದ ಪರಿಸ್ಥಿತಿ ಹಲ್ಲು ಕಿತ್ತ ಹಾವಿನಂತಾಗಿದೆ. ಯಾಕೆಂದರೆ ಬೆಳಿಗ್ಗೆ ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನದ ಹಲವಾರು ಸ್ಥಳಗಳಲ್ಲಿ ವಾಯು ರಕ್ಷಣಾ ರಾಡಾರ್‌ಗಳು ಮತ್ತು ವ್ಯವಸ್ಥೆಗಳನ್ನು ಗುರಿಯಾಗಿಸಿಕೊಂಡು ತಟಸ್ಥಗೊಳಿಸಿದೆ. ಭಾರತದ ಪ್ರತಿಕ್ರಿಯೆಯು ಪಾಕಿಸ್ತಾನಕ್ಕಿಂತ ಹತ್ತು ಪಟ್ಟು ತೀವ್ರತೆಯಿಂದ ಕೂಡಿದೆ. ಲಾಹೋರ್‌ನಲ್ಲಿರುವ ವಾಯು ರಕ್ಷಣಾ ವ್ಯವಸ್ಥೆಯನ್ನು ನಿಷ್ಕ್ರಿಯಗೊಳಿಸಿದೆ.
ಹೂಂಕರಿಸಿದ ಟ್ರಯಂಪ್ ಎಸ್-400
ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ, ಬಾರಾಮುಲ್ಲಾ, ಉರಿ, ಪೂಂಚ್, ಮೆಂಧರ್ ಮತ್ತು ರಾಜೌರಿ ವಲಯಗಳಾದ್ಯಂತ ನಾಗರಿಕ ಮತ್ತು ಮಿಲಿಟರಿ ಪ್ರದೇಶಗಳನ್ನು ಗುರಿಯಾಗಿಸಿ ಪಾಕಿಸ್ತಾನವು ಮೋರ್ಟಾರ್‌ಗಳು ಮತ್ತು ಹೆವಿ-ಕ್ಯಾಲಿಬರ್ ಫಿರಂಗಿಗಳನ್ನು ಬಳಸುತ್ತಿದ್ದಂತೆ ಭಾರತದಲ್ಲಿರುವ ರಷ್ಯಾ ನಿರ್ಮಿತ ಎಸ್ -400 ಟ್ರಯಂಫ್ ಹೂಂಕರಿಸಿದೆ. ಪಾಕಿಸ್ತಾನ ಕಡೆಯಿಂದ ಬರುತ್ತಿದ್ದ ಕ್ಷಿಪಣಿಗಳನ್ನು ಒಂದೊಂದಾಗಿಯೇ ಉರುಳಿಸಿ ತನ್ನ ಪರಾಕ್ರಮ ಮೆರೆದಿದೆ.
ಆರಪರೇಷನ್ ಸಿಂಧೂರ ಪ್ರತಿಯಾಗಿ ಪಾಕಿಸ್ತಾನವು ಮೇ 7–8ರ ಮಧ್ಯರಾತ್ರಿ ಸಂಘಟಿತ ದಾಳಿಯನ್ನು ನಡೆಸಿತು. ಭಾರತೀಯ ನಗರಗಳ ಮೇಲೆ ವ್ಯಾಪಕ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸಿತು. ಆದರೆ ಇದನ್ನೆಲ್ಲಾ ಎಸ್ -400 ಟ್ರಯಂಫ್ ಒಂದೊಂದಾಗಿ ಉರುಳಿಸಿ ಹಾಕಿದೆ ಎಂದು ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.
ಪಾಕಿಸ್ತಾನವು ಅವಂತಿಪುರ, ಶ್ರೀನಗರ, ಜಮ್ಮು, ಪಠಾಣ್‌ಕೋಟ್, ಅಮೃತಸರ, ಕಪುರ್ತಲಾ, ಜಲಂಧರ್, ಲುಧಿಯಾನ, ಆದಂಪುರ, ಭಟಿಂಡಾ, ಚಂಡೀಗಢ, ನಲ್, ಫಲೋಡಿ, ಉತ್ತರಲೈ ಮತ್ತು ಭುಜ್ ಸೇರಿದಂತೆ ಉತ್ತರ ಮತ್ತು ಪಶ್ಚಿಮ ಭಾರತದ ಹಲವಾರು ಮಿಲಿಟರಿ ಗುರಿಗಳ ಮೇಲೆ ದಾಳಿ ಮಾಡಲು ಪ್ರಯತ್ನಿಸಿತು. ಆದರೆ ಇದನ್ನು ರಷ್ಯಾ ನಿರ್ಮಿತ ಎಸ್ -400 ಲಾಹೋರ್‌ನ ವಾಯು ರಕ್ಷಣಾ ವ್ಯವಸ್ಥೆಯನ್ನು ತಟಸ್ಥಗೊಳಿಸಿತು.
ರಷ್ಯಾ ನಿರ್ಮಿತ ಎಸ್ -400 ಟ್ರಯಂಫ್ ವಾಯು ರಕ್ಷಣಾ ವ್ಯವಸ್ಥೆಗಳಿಂದ ಬೆಂಬಲಿತವಾದ ಇಂಟಿಗ್ರೇಟೆಡ್ ಕೌಂಟರ್-ಯುಎಎಸ್ ಗ್ರಿಡ್‌ಗಳನ್ನು ಹೊಂದಿದೆ. ಇದರ ಸಹಾಯದಿಂದ ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಯಶಸ್ವಿಯಾಗಿ ತಟಸ್ಥಗೊಳಿಸಿದೆ. ಅವುಗಳ ಮುಂದುವರಿದ ಟೆಕ್ನಾಲಜಿಯಿಂದಾಗಿ 600 ಕಿಲೋಮೀಟರ್‌ಗಳಷ್ಟು ದೂರದಲ್ಲಿ ವೈಮಾನಿಕ ಬೆದರಿಕೆಗಳನ್ನು ಪತ್ತೆಹಚ್ಚಬಹುದು ಮತ್ತು ಎದುರಿಸಬಹುದು ಎಂದು ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.
ಇದರ ಬೆನ್ನಲ್ಲೇ ಭಾರತ ರಣಕಣಕ್ಕಿಳಿದು ಪಾಕಿಸ್ತಾನದ ವಾಯು ರಕ್ಷಣ ವ್ಯವಸ್ಥೆಯನ್ನೇ ಧ್ವಂಸಗೊಳಿಸಿತು ಎಂದು ಹೇಳಲಾಗಿದೆ.