ಪಹಲ್ಗಾಂ ಮಾಸ್ಟರ್‌ ಮೈಂಡ್‌ಗೆ ಕರ್ನಾಟಕ, ಕೇರಳ ಲಿಂಕ್‌: ಈತನ ಕುಟುಂಬಿಕರೆಲ್ಲಾ ಉಗ್ರರು

ನವದೆಹಲಿ: ಪಹಲ್ಗಾಮ್ ದಾಳಿಯ ಮಾಸ್ಟರ್‌ಮೈಂಡ್‌ ಉಗ್ರ ಶೇಖ್ ಸಜ್ಜದ್ ಗುಲ್‌ಗೆ ಕರ್ನಾಟಕ, ಕೇರಳ ಲಿಂಕ್‌ ಇರುವುದು ಬೆಳಕಿಗೆ ಬಂದಿದೆ. ಶ್ರೀನಗರದಲ್ಲಿ ಶಿಕ್ಷಣ ಪಡೆದಿರುವ ಗುಲ್, ಆನಂತರ ಬೆಂಗಳೂರಿನಲ್ಲಿ ಎಂಬಿಎ ಪದವಿ ಪಡೆದುಕೊಂಡಿದ್ದ. ಕೇರಳದಲ್ಲಿ ಲ್ಯಾಬ್ ಟೆಕ್ನೀಷಿಯನ್ ಕೋರ್ಸ್ ಪೂರ್ಣಗೊಳಿಸಿ ಕಾಶ್ಮೀರಕ್ಕೆ ಹಿಂದಿರುಗಿ ಅಲ್ಲಿ ತನ್ನದೇ ಆದ ಸ್ವಂತ ಲ್ಯಾಬ್ ಆರಂಭಿಸಿದ್ದನು. ಇದೇ ಲ್ಯಾಬ್ ಮೂಲಕ ಭಯೋತ್ಪಾದಕ ಗುಂಪಿಗೆ ಲಾಜಿಸ್ಟಿಕಲ್ ನೆರವು ನೀಡಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ಇವನ ಕುಟುಂಬಿಕರಲ್ಲೇ ಉಗ್ರರಾಗಿದ್ದಾರೆ.

ಪಹಲ್ಗಾಂನಲ್ಲಿ ಏಪ್ರಿಲ್ 22ರ ನಡೆದ ದಾಳಿಯಲ್ಲಿ ಓರ್ವ ಸ್ಥಳೀಯ ಸೇರಿದಂತೆ 26 ಮಂದಿ ಮೃತರಾಗಿದ್ದಾರೆ. ಪಹಲ್ಗಾಮ್ ದಾಳಿಯ ಹೊಣೆಯನ್ನು ಲಷ್ಕರ್-ಎ-ತೈಬಾ (ಎಲ್‌ಇಟಿ) ಸಂಘಟನೆಯ ಶಾಖೆಯಾಗಿರುವ ದಿ ರೆಸಿಸ್ಟೆನ್ಸ್ ಫ್ರಂಟ್ ವಹಿಸಿಕೊಂಡಿತ್ತು. ಉಗ್ರ ಶೇಖ್ ಸಜ್ಜದ್ ಗುಲ್‌ ಸೂಚನೆಯೇ ಮೇರೆಗೆ ದಿ ರೆಸಿಸ್ಟೆನ್ಸ್ ಫ್ರಂಟ್ ಸಂಘಟನೆ ಪಹಲ್ಗಾಮ್ ದಾಳಿಯನ್ನು ಪ್ಲಾನ್ ಮಾಡಿತ್ತು ಮತ್ತು ಆತನ ಆದೇಶ ಮೇರೆಗೆ ಕಾರ್ಯನಿರ್ವಹಿಸಿದೆ ಎಂದು ವರದಿಯಾಗಿದೆ

ಪಹಲ್ಗಾಂ ಪ್ರತೀಕಾರವಾಗಿ ಭಾರತ ಆಪರೇಷನ್ ಸಿಂಧೂರ ಹೆಸರಿನಲ್ಲಿ 9 ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದೆ.

ಯಾರೀತ ಗುಲ್?
ಸದ್ಯ ಉಗ್ರ ಗುಲ್ ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ಅಡಗಿಕೊಂಡಿದ್ದು, ಎಲ್‌ಇಟಿ ಸಂಘಟನೆಯ ರಕ್ಷಣೆಯಲ್ಲಿದ್ದಾನೆ ಎಂದು ವರದಿಯಾಗಿದೆ. ಈ ಹಿಂದೆ ನಡೆದ ದೇಶದಲ್ಲಿ ನಡೆದ ಹಲವು ಉಗ್ರ ಚಟುವಟಿಕೆಗಳಲ್ಲಿ ಗುಲ್ ಭಾಗಿಯಾಗಿದ್ದನು. 2020 ರಿಂದ 2024ರವರೆಗೆ ಮಧ್ಯ ಮತ್ತು ದಕ್ಷಿಣ ಕಾಶ್ಮೀರದಲ್ಲಿ ನಡೆದ ಹತ್ಯೆಗಳು, 2023ರ ಮಧ್ಯ ಕಾಶ್ಮೀರದಲ್ಲಿ ನಡೆದ ಗ್ರೆನೇಡ್ ದಾಳಿ, ಗಗಂಗೀರ್ ಮತ್ತು ಗಂಡರ್‌ಬಾಲ್‌ನ ಝಡ್-ಮೋರ್ಹ್ ಸುರಂಗದಲ್ಲಿ ಜಮ್ಮು ಕಾಶ್ಮೀರದ ಪೊಲೀಸ್ ಸಿಬ್ಬಂದಿಯನ್ನು ಗುರಿಯಾಗಿಸಿ ನಡೆದ ದಾಳಿಯಲ್ಲಿ ಉಗ್ರ ಗುಲ್ ಹೆಸರು ಕೇಳಿ ಬಂದಿದೆ. ಕಳೆದ ಐದು ವರ್ಷಗಳಿಂದ ಜಮ್ಮು-ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ಚಟುವಟಿಕೆಗಳೊಂದಿಗೆ ಉಗ್ರ ಶೇಖ್ ಸಜ್ಜದ್ ಗುಲ್‌ ಸಂಬಂಧ ಹೊಂದಿದ್ದಾನೆ.

ಏಪ್ರಿಲ್ 2022ರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಶೇಖ್ ಸಜ್ಜದ್ ಗುಲ್‌ನನ್ನು ಉಗ್ರ ಎಂದು ಘೋಷಿಸಿ, ಈತನ ತಲೆಗೆ 10 ಲಕ್ಷ ರೂಪಾಯಿ ಬಹುಮಾನವನ್ನು ಸಹ ಘೋಷಣೆ ಮಾಡಿತ್ತು. ಪಹಲ್ಗಾಮ್ನಲ್ಲಿ ನರಮೇಧ ನಡೆಸಿದ ಉಗ್ರರೊಂದಿಗೆ ಶೇಖ್ ಸಜ್ಜದ್ ಗುಲ್‌ ಸಂಪರ್ಕದಲ್ಲಿದ್ದನು ಎನ್ನುವುದನ್ನು ಎನ್‌ಐಎ ಪತ್ತೆಹಚ್ಚಿದೆ. ವರದಿಗಳ ಪ್ರಕಾರ, ಶೇಖ್ ಸಜ್ಜದ್ ಗುಲ್‌ ಪಾಕಿಸ್ತಾನ ಗುಪ್ತಚರ ಸಂಸ್ಥೆಗೆ ಮಾಹಿತಿದಾರನಾಗಿ ಕೆಲಸ ಮಾಡುತ್ತಿದ್ದಾನೆ. ಎಲ್‌ಇಟಿ ಪಂಜಾಬಿ ಸಂಘಟನೆಯ ನೇತೃತ್ವ ವಹಿಸಿಕೊಂಡಿದ್ದಾನೆ.

ಜೈಲಿನಿಂದ ಬಿಡುಗಡೆಯಾಗಿ ಪಾಕಿಸ್ತಾನಕ್ಕೆ ಓಡಿದ ಗುಲ್
ಕಳೆದ ಎರಡು ದಶಕಗಳಿಂದಲೂ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಗುಲ್, ನಿಜಾಮುದ್ದೀನ್ ರೈಲ್ವೆ ನಿಲ್ದಾಣದಲ್ಲಿ 5 ಕೆಜಿ ಆರ್‌ಡಿಎಕ್ಸ್‌ ಜೊತೆಯಲ್ಲಿ ಗುಲ್‌ನನ್ನು ದೆಹಲಿ ಪೊಲೀಸರ ವಿಶೇಷ ದಳ ಬಂಧಿಸಿತ್ತು. ಈ ಪ್ರಕರಣದಲ್ಲಿ ಗುಲ್ 10 ವರ್ಷ ಜೈಲು ಶಿಕ್ಷೆಯನ್ನು ಅನುಭವಿಸಿ 2017ರಲ್ಲಿ ಬಿಡುಗಡೆಯಾಗಿದ್ದನು. ಜೈಲಿನಿಂದ ಬರುತ್ತಿದ್ದಂತೆ ಗುಲ್ ಪಾಕಿಸ್ತಾನಕ್ಕೆ ತೆರಳಿ, ಉಗ್ರ ಚಟುವಟಿಕೆಯಲ್ಲಿ ಸಕ್ರಿಯನಾಗಿದ್ದಾನೆ. ಗುಲ್ ಕುಟುಂಬದ ಸದಸ್ಯರು ಸಹ ಭಯೋತ್ಪಾದಕ ಚಟುವಟಿಕೆಯಲ್ಲಿ ಗುರುತಿಸಿಕೊಂಡಿದ್ದಾರೆ. ಗುಲ್ ಸೋದರ ಓರ್ವ ವೈದ್ಯನಾಗಿದ್ದರೂ, ಉಗ್ರಗಾಮಿಯಾಗಿದ್ದನು. ಸದ್ಯ ಗಲ್ಫ್ ರಾಷ್ಟ್ರದಲ್ಲಿರುವ ಈತ ಭಯೋತ್ಪಾದನೆ ಸಂಘಟನೆಗಳಿಗೆ ಹಣಕಾಸು ಒದಗಿಸುವ ಕಾರ್ಯದಲ್ಲಿ ಭಾಗಿಯಾಗಿದ್ದನು ಎಂದು ವರದಿಯಾಗಿದೆ.

error: Content is protected !!