ನವದೆಹಲಿ: ಏಪ್ರಿಲ್ 22 ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಉಗ್ರರು ಭೀಕರ ದಾಳಿ ನಡೆಸಿದ್ದು, ಈ ದಾಳಿಯಲ್ಲಿ 26 ಅಮಾಯಕರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದರು. ಇನ್ನು ತಮ್ಮ ಗಂಡಂದಿರನ್ನು ಕೊಂದ ಉಗ್ರರಿಗೆ ನಮ್ಮನ್ನೂ ಕೊಂದು ಬಿಡಿ ಎಂದು ಮಹಿಳೆಯೊಬ್ಬರು ಕಣ್ಣೀರುತ್ತಲೇ ಹೇಳಿದ್ದಳು.
ಇದಕ್ಕೆ ಉಗ್ರ ನಿನ್ನನ್ನು ಕೊಲ್ಲಲ್ಲ ಮೋದಿಗೆ ಹೋಗಿ ಹೇಳು(ʻTell Modíʼ ) ಎಂದಿದ್ದ. ಇದೀಗ ಭಾರತ ಸೇನೆ (Indian Army) ಆಪರೇಷನ್ ಸಿಂಧೂರ್ (Operation Sindoor) ಹೆಸರಿನಲ್ಲಿ ಪಾಪಿಸ್ತಾನದ ಕ್ರಿಮಿಗಳ ನೆಲೆ ಧ್ವಂಸ ಮಾಡಿದೆ. ಇದರ ಬೆನ್ನಲ್ಲೇ ಆ ದಿನ ಪತಿಯೊಂದಿಗೆ ನನ್ನನ್ನು ಕೊಲ್ಲಿ ಎಂದಿದ್ದ ಅನೇಕ ಮಹಿಳೆಯರು ಭಾರತೀಯ ಸೇನೆಯ ಪ್ರತೀಕಾರಕ್ಕೆ ನಿಟ್ಟುಸಿರು ಬಿಟ್ಟಿದ್ದಾರೆ. ಇದರ ಬೆನ್ನಲ್ಲೇ ʻಮೋದಿಗೆ ಹೇಳುʼ ಎಂದಿರುವುದು ಮತ್ತು ನಾನು ʻಮೋದಿಗೆ ಹೇಳಿದ್ದೆ (ʼʻI Told Modí ́) ಎನ್ನುವ ಕಾರ್ಟೂನ್ ಭಾರತೀಯರ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಪಹಲ್ಗಾಮ್‌ನಲ್ಲಿ ದಾಳಿಯ ಸಂದರ್ಭದಲ್ಲಿ ಭಾರತೀಯ ಮಹುಳೆಯ ಸಿಂಧೂರ ಅಳಿಸಿ, ಮೋದಿಗೆ ಹೋಗಿ ಹೇಳು ಎಂಬ ಸಂದೇಶ ನೀಡಿದವರಿಗೆ ಇದೀಗ ಪ್ರಧಾನಿ ನರೇಂದ್ರ ಮೋದಿ ಪ್ರತ್ಯುತ್ತರ ನೀಡಿದ್ದಾರೆ. ಮಂಗಳವಾರ ತಡರಾತ್ರಿ ಭಾರತೀಯ ಸೇನೆ ಪಾಕಿಸ್ತಾನದೊಳಗೆ ನುಗ್ಗಿ ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿ ಎಲ್ಲಾ ಉಡೀಸ್ ಮಾಡುವಲ್ಲಿ ಯಶಸ್ವಿಯಾಗಿದೆ. ಪಾಕ್ನಲ್ಲಿ ಒಟ್ಟು 9 ಕಡೆಗಳಲ್ಲಿದ್ದ ಉಗ್ರ ತಾಣಗಳನ್ನೇ ಏರ್ಸ್ಟ್ರೈಕ್ ಮೂಲಕ ಧ್ವಂಸ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಆಪರೇಷನ್ ಸಿಂಧೂರ್‌ಗೆ ಶುಭಾಶಯಗಳ ಮಹಾಪೂರ ಹರಿದು ಬಂದಿದೆ. ಆಪರೇಷನ್ ಸಿಂಧೂರದ ಬಳಿಕ #justiceserved #Itoldmodi ಪೋಸ್ಟ್ ಹಾಗೂ ಟ್ಯಾಗ್‌ಗಳು ಎಲ್ಲೆಡೆ ವೈರಲ್ ಆಗುತ್ತಿದೆ.