ಮಂಗಳೂರು: ಖ್ಯಾತ ಬಾಲಿವುಡ್ ಸೂಪರ್ ಸ್ಟಾರ್, ನಿರ್ಮಾಪಕ, ನಿರೂಪಕ ಶಾರುಖ್ ಖಾನ್ ಅವರನ್ನು ಕರ್ನಾಟಕದ ರಿಯಲ್ ಎಸ್ಟೇಟ್ ಸಂಸ್ಥೆ ರೋಹನ್ ಕಾರ್ಪೊರೇಷನ್ ತನ್ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಿಸಿದೆ. ರೋಹನ್ ಕಾರ್ಪೊರೇಷನ್ ಸಂಸ್ಥೆಯ ರಾಯಭಾರಿಯಾಗಿ ಶಾರುಖಾನ್ ಸಹಿ ಮಾಡುವ ಮೂಲಕ ಹೊಸ ಮೈಲಿಗಲ್ಲಿಗೆ ಸಾಕ್ಷಿಯಾಗಿದ್ದಾರೆ.
ರೋಹನ್ ಕಾರ್ಪೊರೇಷನ್ ಕಳೆದ ಮೂರು ದಶಕಗಳಿಂದ ಮಂಗಳೂರಿನ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಅತ್ಯುತ್ತಮ ಕೊಡುಗೆ ನೀಡುತ್ತಿದೆ. ರೋಹನ್ ಸಿಟಿ, ರೋಹನ್ ಸ್ಕ್ವೇರ್‌ನಂತಹ ಯೋಜನೆಗಳ ಮೂಲಕ ಆಧುನಿಕತೆ, ವಿಶ್ವಾಸ ಮತ್ತು ಗುಣಮಟ್ಟದ ಸಂಕೇತವಾಗಿ ಗುರುತಿಸಿಕೊಂಡಿದೆ. ಈ ಸಂಸ್ಥೆಯು ಪರಿಸರ ಸಂರಕ್ಷಣೆ ಮತ್ತು ಗ್ರಾಹಕರ ತೃಪ್ತಿಗೆ ಒತ್ತು ನೀಡುವ ಮೂಲಕ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಶಾರುಖ್ ಖಾನ್‌ರಂತಹ ಜಾಗತಿಕ ಐಕಾನ್‌ನನ್ನು ತನ್ನ ಬ್ರ್ಯಾಂಡ್ ರಾಯಭಾರಿಯಾಗಿ ಆಯ್ಕೆ ಮಾಡುವ ಮೂಲಕ ರೋಹನ್ ಕಾರ್ಪೊರೇಷನ್ ತನ್ನ ಯಶಸ್ಸಿನ ಪಯಣದಲ್ಲಿ ಹೊಸ ಶಿಖರವನ್ನು ಮುಟ್ಟಿದೆ.
ಈ ಒಪ್ಪಂದದ ಬಗ್ಗೆ ಮಾತನಾಡಿದ ಶಾರುಖ್ ಖಾನ್, “ರೋಹನ್ ಕಾರ್ಪೊರೇಷನ್‌ನೊಂದಿಗೆ ಕೈಜೋಡಿಸುವುದು ನನಗೆ ಸಂತೋಷದ ಕ್ಷಣ. ಈ ಸಂಸ್ಥೆಯ ಪರಿಶ್ರಮ ಮತ್ತು ಜನರ ಜೀವನವನ್ನು ಉನ್ನತಗೊಳಿಸುವ ದೃಷ್ಟಿಕೋನ ನನ್ನನ್ನು ಆಕರ್ಷಿಸಿದೆ. ಪರಿಸರ ಸಂರಕ್ಷಣೆಯೊಂದಿಗೆ ಆಧುನಿಕ ನಗರ ಜೀವನವನ್ನು ಸಮತೋಲನಗೊಳಿಸುವ ರೋಹನ್‌ನ ಧ್ಯೇಯದಲ್ಲಿ ಭಾಗವಾಗಿರಲು ನಾನು ಉತ್ಸುಕನಾಗಿದ್ದೇನೆ” ಎಂದರು.
ರೋಹನ್ ಕಾರ್ಪೊರೇಷನ್‌ನ ಚೇರ್‌ಮ್ಯಾನ್ ರೋಹನ್ ಮೊಂತೇರೊ ಅವರು ಈ ಸಂದರ್ಭದಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. “ಶಾರುಖ್‌ಖಾನ್‌ರಂಥ ಜಾಗತಿಕ ಸ್ಟಾರ್ ನಮ್ಮೊಂದಿಗೆ ಸೇರಿದ್ದು ನಮ್ಮ ಸಂಸ್ಥೆಗೆ ಗೌರವ. ಇದು ಕರ್ನಾಟಕ ಮತ್ತು ಇತರೆ ರಾಜ್ಯಗಳಲ್ಲಿ ನಮ್ಮ ವಿಸ್ತರಣೆಗೆ ದಾರಿ ಮಾಡಿಕೊಡುತ್ತದೆ. ನಾವು ಸುಸ್ಥಿರ ಮತ್ತು ಸಮಗ್ರ ನಗರೀಕರಣದತ್ತ ಹೆಜ್ಜೆ ಹಾಕುತ್ತಿದ್ದೇವೆ” ಎಂದು ಹೇಳಿದರು.
ಮಂಗಳೂರಿನಿಂದ ಆರಂಭವಾದ ಈ ಪಯಣವು ಇಂದು ದೇಶದಾದ್ಯಂತ ಗಮನ ಸೆಳೆಯುತ್ತಿದೆ. ಶಾರುಖ್ ಖಾನ್‌ರೊಂದಿಗಿನ ಈ ಸಹಭಾಗಿತ್ವವು ರೋಹನ್ ಕಾರ್ಪೊರೇಷನ್‌ನ ಯಶಸ್ಸಿನ ಕಥೆಗೆ ಹೊಸ ಅಧ್ಯಾಯವನ್ನು ಸೇರಿಸಿದೆ. ಭವಿಷ್ಯದಲ್ಲಿ ಈ ಸಂಸ್ಥೆಯಿಂದ ಇನ್ನಷ್ಟು ಆಕರ್ಷಕ, ಆಧುನಿಕ ಮತ್ತು ಸುಸ್ಥಿರ ಯೋಜನೆಗಳನ್ನು ನಿರೀಕ್ಷಿಸಬಹುದು.