ಜಮ್ಮುಕಾಶ್ಮೀರ: ಭಾರತೀಯ ಸೇನೆಯು ಇಂದು ನಸುಕಿನ ಜಾವ “ಆಪರೇಷನ್ ಸಿಂಧೂರ್” ಎಂಬ ದಿಟ್ಟ ಕಾರ್ಯಾಚರಣೆಯನ್ನು ಪಾಕ್ನ ಉಗ್ರರ ತಾಣಗಳ ಮೇಲೆ ನಡೆಸಿದೆ. ನಸುಕಿನ 1:28 ರಿಂದ 1:51 ರವರೆಗೆ ನಡೆದ ಬೃಹತ್ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯ ವಾಯುಪಡೆಯು ಪಾಕ್ನ ಉಗ್ರರ ಅಡುಗುತಾಣಗಳನ್ನು ನಾಶ ಮಾಡಿದ್ದು, ಬರೋಬ್ಬರಿ 23 ನಿಮಿಷಗಳಲ್ಲಿ ಉಗ್ರರನ್ನು ಮಟ್ಟ ಹಾಕಿದ ಕುರಿತು ವರದಿ ಬಂದಿದೆ.
ಭಾರತೀಯ ವಾಯುಪಡೆಯು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಒಂಬತ್ತು ಭಯೋತ್ಪಾದಕ ಅಡಗುತಾಣಗಳ ಮೇಲೆ ನಿಖರ ಮತ್ತು ಸೀಮಿತ ದಾಳಿಗಳನ್ನು ನಡೆಸಲಾಯಿತು. ಭಯೋತ್ಪಾದಕ ದಾಳಿಗಳನ್ನು ಯೋಜಿಸುತ್ತಿದ್ದ ಸ್ಥಳಗಳನ್ನು ಮಾತ್ರ ಗುರಿಯಾಗಿಸಲಾಗಿದೆ. ಪಾಕಿಸ್ತಾನದ ಯಾವುದೇ ಸೇನಾ ನೆಲೆಗಳ ಮೇಲೆ ದಾಳಿ ನಡೆಸಲಾಗಿಲ್ಲ ಎಂದು ವರದಿಯಾಗಿದೆ ಇನ್ನು ಭಾರತೀಯ ಸೇನೆಯ ಅಧಿಕೃತ X ಹ್ಯಾಂಡಲ್ (@ADGPI) ಮೂಲಕ ಪೋಸ್ಟ್ ಮಾಡಿರುವಂತೆ, ಈ ಕಾರ್ಯಾಚರಣೆ ಕೇವಲ 23 ನಿಮಿಷಗಳಲ್ಲಿ ಪೂರ್ಣಗೊಂಡಿತು. ಇಂದು ಸಂಜೆ ಅಧಿಕೃತ ಪತ್ರಿಕಾಗೋಷ್ಠಿ ಮೂಲಕ ಹೆಚ್ಚಿನ ಮಾಹಿತಿಯನ್ನು ಸೇನೆ ನೀಡಲಿದೆ.