ಸುಹಾಸ್ ಶೆಟ್ಟಿ ಹತ್ಯೆ ಹಿನ್ನೆಲೆ: ಮಂಗಳೂರು ಸುತ್ತಮುತ್ತ ಕೊಲೆಗೆ ಯತ್ನಿಸಿದ್ದ 7 ಮಂದಿ ಪೊಲೀಸ್ ವಶಕ್ಕೆ!


ಮಂಗಳೂರು: ರೌಡಿಶೀಟರ್​​ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ಹಿನ್ನೆಲೆಯಲ್ಲಿ ಅಲ್ಲಲ್ಲಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಕೊಲೆಗೆ ಯತ್ನಿಸಿದ ಆರೋಪದಲ್ಲಿ ಪೊಲೀಸರು ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಅಡ್ಯಾರ್, ಕೊಂಚಾಡಿ ಮತ್ತು ತೊಕ್ಕೊಟ್ಟುಗಳಲ್ಲಿ ಈ ಘಟನೆಗಳು ನಡೆದಿತ್ತು. ಕಣ್ಣೂರಿನಲ್ಲಿ ನೌಷಾದ್ ಮೇಲೆ ದಾಳಿ ಪ್ರಕರಣದಲ್ಲಿ ಮೂವರು ಆರೋಪಿಗಳ ಬಂಧನವಾಗಿದ್ದರೆ, ಕೊಂಚಾಡಿ ಲುಕ್ಮನ್​ಗೆ ಚಾಕು ಇರಿತ ಕೇಸ್​ನಲ್ಲಿ ನಾಲ್ವರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಕಣ್ಣೂರು ಪ್ರಕರಣದಲ್ಲಿ ಮೂವರನ್ನು ಅರೆಸ್ಟ್ ಮಾಡಲಾಗಿದೆ. ಮುಡಿಪು ನಿವಾಸಿ ಲೋಹಿತಾಶ್ವ(32), ವೀರನಗರ ನಿವಾಸಿ ಪುನಿತ್ (28), ಕುತ್ತಾರ್ ನಿವಾಸಿ ಗಣೇಶ್ ಪ್ರಸಾದ್ (23) ಬಂಧಿತ ಆರೋಪಿಗಳಾಗಿದ್ದಾರೆ.


ಕೊಂಚಾಡಿ ಎಂಬಲ್ಲಿ‌ ಲುಕ್ಮನ್ ಎಂಬವರಿಗೆ ಚೂರಿ‌ ಇರಿತ ಕೇಸ್​​ನಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಬಜಪೆ ನಿವಾಸಿ ಲಿಖಿತ್ (29), ಕುತ್ತಾರ್ ನಿವಾಸಿ ರಾಕೇಶ್(34), ಸುರತ್ಕಲ್ ನಿವಾಸಿ ಧನರಾಜ್ (24), ಮೂಡಬಿದ್ರೆಯ ಪ್ರಶಾಂತ್ ಶೆಟ್ಟಿ (26) ಬಂಧಿತರಾಗಿದ್ದಾರೆ.

error: Content is protected !!