ಮಂಗಳೂರಿನ ಕಿಚ್ಚು ಚಿಕ್ಕಮಗಳೂರಿಗೆ: ಸುಹಾಸ್‌ ಶೆಟ್ಟಿ ಹತ್ಯೆ ಖಂಡಿಸಿ ಚಿಕ್ಕಮಗಳೂರು ಬಂದ್

ಚಿಕ್ಕಮಗಳೂರು: ಬಜರಂಗ ದಳ ಗೋರಕ್ಷಾ ಪ್ರಮುಖ್‌ ಆಗಿದ್ದ ಸುಹಾಸ್‌ ಶೆಟ್ಟಿ ಭೀಕರ ಹತ್ಯೆಯನ್ನು ಖಂಡಿಸಿ ದಕ್ಷಿಣ ಕನ್ನಡ ಜಿಲ್ಲೆ ಬಂದ್‌ ಆದ ಬೆನ್ನಲ್ಲೇ ಇಂದು ಚಿಕ್ಕಮಗಳೂರು ಬಂದ್‌ಗೆ ಕರೆ ನೀಡಲಾಗಿದೆ. ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಚಿಕ್ಕಮಗಳೂರು ಪಟ್ಟ ಣದ ಎಲ್ಲಾ ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಮುಚ್ಚಿದೆ. ಶನಿವಾರ ನಡೆಯುತ್ತಿದ್ದ ಶನಿವಾರ ಸಂತೆಯನ್ನೂ ಸ್ತಗಿತಗೊಳಿಸಲಾಗಿದೆ. ಅಲ್ಲದೆ ಪಹಲ್ಗಾಂನಲ್ಲಿ ಉಗ್ರರಿಂದ ನಡೆದ ಭೀಕರ ನರಮೇಧ ಸಹ ಬಂದ್‌ನ ತೀವ್ರತೆ ಹೆಚ್ಚಲು ಕಾರಣವಾಗಿದೆ.

ಸುಹಾಸ್ ಶೆಟ್ಟಿ ಪ್ರಕರಣ ಸಂಬಂಧ ಮಂಗಳೂರು ಪೊಲೀಸರು ಸುಮಾರು 7ರಿಂದ 8 ಮಂದಿ ಆರೋಪಿಗಳನ್ನು ವಶಕ್ಕೆ ಪೆಡದು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದ್ದು, ಇದರಲ್ಲಿ ಚಿಕ್ಕಮಗಳೂರಿನ ಕಳಸ ಮೂಲದ ಇಬ್ಬರು ಯುವಕರು ಸಹ ಶಾಮೀಲಾಗಿದ್ದಾರೆ ಎಂಬ ಗಾಸಿಪ್‌ ಹಬ್ಬಿದೆ. ನಟೋರಿಯಸ್‌ ಸಫ್ವಾನ್‌ ಗ್ಯಾಂಗ್‌ನಿಂದ ಸುಹಾಸ್‌ ಶೆಟ್ಟಿ ಕೊಲೆ ನಡೆದಿದೆ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ಮಂಗಳೂರು ಪೊಲೀಸ್‌ ಕಮೀಷನರ್‌ ಅನುಪಮ್‌ ಅಗ

Chikmagalur-bandh.jpg

ರ್ವಾಲ್‌ ಸ್ಪಷ್ಟ ಮಾಹಿತಿ ನೀಡುವ ಸಾಧ್ಯತೆ ಇದೆ.


ಅಲ್ದೂರ ಪಟ್ಟಣದಲ್ಲಿ ಬಂದ್‌ಗೆ ಭರ್ಜರಿ ಬೆಂಬಲ ವ್ಯಕ್ತವಾಗಿದೆ. ಇಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಸಂಪೂರ್ಣ ಬಂದ್‌ಗೆ ಕರೆ ನೀಡಲಾಗಿದ್ದರಿಂದ ಇಂದು ಬೆಳಗ್ಗೆಯಿಂದಲೇ ಯಾವುದೇ ಅಂಗಡಿ ಮುಂಗಟ್ಟುಗಳು ತೆರೆದಿಲ್ಲ. ವಾರದ ಕಡೇ ದಿನ ಶನಿವಾರ ಆಲ್ದೂರು ಹೋಳಿಯಲ್ಲಿ ಹೆಚ್ಚು ಹಳ್ಳಿಗಳು, ಕೂಲಿ ಕಾರ್ಮಿಕರು ಹೆಚ್ಚಿರುತ್ತಾರೆ. ಆದರೆ ಬಂದ್‌ ಹಿನ್ನೆಲೆ ಸದಾ ಜನರಿಂದ ಗಿಜಿಗುಡುತ್ತಿದ್ದ ಅಲ್ದೂರು ಇಂದು ಬಂದ್ ಕಾರಣ ಸಂಪೂರ್ಣ ಸ್ತಬ್ಧವಾಗಿದೆ.

ಕಾಶ್ಮೀರದಲ್ಲಿ ಹಿಂದೂ ಪ್ರವಾಸಿಗರನ್ನು ಗುರಿಯಾಗಿಸಿ ನಡೆಸಿದ ಉಗ್ರ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದಾರೆ. ಪಾಕಿಸ್ತಾನದ ಭಯೋತ್ಪಾದಕರು ಹಿಂದೂಗಳನ್ನು ಗುರಿಯಾಗಿಸಿ ನಡೆಸಿದ ದಾಳಿಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಹಿಂದೂ ಕಾರ್ಯಕರ್ತನ ಮೇಲೆ ಮಂಗಳೂರಿನಲ್ಲಿ ನಡೆದ ದಾಳಿ ಚಿಕ್ಕಮಗಳೂರು ಜನತೆಯ ತಾಳ್ಮೆಯ ಕಟ್ಟೆಯೊಡಲು ಕಾರಣವಾಗಿದ್ದು, ಈ ಹಿನ್ನೆಲೆಯಲ್ಲಿ ಇಲ್ಲಿನ ಜನರು ಸ್ವಯಂಪ್ರೇರಿತರಾಗಿ ಬಂದ್‌ಗೆ ಬೆಂಬಲ ಸೂಚಿಸಿದ್ದಾರೆ.

ಎಂದಿನಂತೆ ಮಂಗಳೂರು
ನಿನ್ನೆಯ ಬಂದ್‌ನಿಂದ ಸಂಪೂರ್ಣ ಸ್ತಬ್ಧವಾಗಿದ್ದ ಮಂಗಳೂರು ಇಂದು ಎಂದಿನಂತೆ ಚಲನಾಶೀಲವಾಗಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು, ಆಯಕಟ್ಟಿನ ಪ್ರದೇಶಗಳಲ್ಲಿ ಪೊಲೀಸ್‌ ಬಂದೋಬಸ್ತ್‌ ಕೈಗೊಳ್ಳಲಾಗಿದೆ. ಇಂದು ಮಂಗಳೂರಿನಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಕಾನೂನು ಸುವ್ಯವಸ್ಥೆ ಪಾಲನೆ ಕುರಿತು ಮಹತ್ವದ ಸಭೆ ನಡೆಸಲಿದ್ದಾರೆ.

error: Content is protected !!