ಬಂಟ್ವಾಳ: ದುಷ್ಕರ್ಮಿಗಳಿಂದ ಹತ್ಯೆಗೀಡಾದ ಸುಹಾಸ್ ಶೆಟ್ಟಿಯ ಶವ ಅಂತ್ಯ ಸಂಸ್ಕಾರಕ್ಕೆ ಮಂಗಳೂರಿನಿಂದ ಬಿ. ಸಿ. ರೋಡ್ ಮೂಲಕ ಮೆರವಣಿಗೆ ಯಲ್ಲಿ ಕೊಂಡು ಹೋಗುವ ಸಂದರ್ಭದಲ್ಲಿ ರಸ್ತೆ ನಡುವೆ ಹುಬ್ಬಳ್ಳಿ ಯಿಂದ ಧರ್ಮಸ್ಥಳ, ಸುಬ್ರಮಣ್ಯ ದೇವಸ್ಥಾನ ಕ್ಕೆ ಯಾತ್ರೆ ಬಂದ ಮಹಿಳೆಯರಿದ್ದ ಕಾರು ಮಿತ್ತಬೈಲ್ ಜುಮಾ ಮಸೀದಿ ಎದುರಿನ ಹೆದ್ದಾರಿಯಲ್ಲಿ ಕೆಟ್ಟು ನಿಂತು ಕೆಲ ಹೊತ್ತು ವಾಹನ ಸಂಚಾರ ಅಡಚಣೆ ಯಾಗಿತ್ತು.
ತಕ್ಷಣ ಮಿತ್ತ ಬೈಲ್ ಜಮಾತಿಗರು ಹಾಗೂ ಪೋಲೀಸರು ಕಾರನ್ನು ಮಸೀದಿ ಬದಿಯಲ್ಲಿ ನಿಲ್ಲಿಸಿ ಸರಿಪಡಿಸಿ ಮುಂದಿನ ಯಾತ್ರೆ ಅನುಮಾಡಿಕೊಟ್ಟರು. ಜಮಾತಿಗರ ಹಾಗೂ ಪೊಲೀಸರ ಸೇವೆಗೆ ಯಾತ್ರಿ ಕರು ಹಾಗೂ ಸಾರ್ವಜನಿಕ ರ ಪ್ರಶಂಸೆ ಪಾತ್ರವಾಯಿತು.